ಸಾರ್ವಜನಿಕ ಸ್ಥಳದಲ್ಲಿರುವ ದೇಗುಲ, ಪ್ರಾರ್ಥನಾ ಮಂದಿರ ರಕ್ಷಣೆಗೆ ವಿಧೇಯಕ ಮಂಡಿಸಿದ ಮುಖ್ಯಮಂತ್ರಿ

ಬೆಂಗಳೂರು: ನಂಜನಗೂಡು ದೇಗುಲ ನೆಲಸಮಗೊಳಿಸಿದ ನಂತರ ಎಚ್ಚೆತ್ತ ಬಿಜೆಪಿ ಸರ್ಕಾರ, ಹೊಸ ವಿಧೇಯಕವನ್ನು ಇಂದು ವಿಧಾನ ಸಭೆಯಲ್ಲಿ ಮಂಡನೆ ಮಾಡಲಾಯಿತು. ಸಾರ್ವಜನಿಕ ಸ್ಥಳಗಳಲ್ಲಿ ಇರುವ ದೇಗುಲ, ಪ್ರಾರ್ಥನಾ ಮಂದಿರಗಳನ್ನು ತೆರವು ಮಾಡದೇ, ಅವುಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಿದೆ. ಈ ಸಂಬಂಧ ಕರ್ನಾಟಕ ಧಾರ್ಮಿಕ ಕಟ್ಟಡಗಳ ಸಂರಕ್ಷಣೆ ತಿದ್ದುಪಡಿ ವಿಧೇಯಕವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಧಾನಸಭೆಯಲ್ಲಿ ಮಂಡಿಸಿದರು.

ಈ ಸುದ್ದಿಯನ್ನು ಯ್ಯೂ ಟ್ಯೂಬ್ ನಲ್ಲಿಯೂನೋಡಲು ಲಾಕ್ಇನ್ ಆಗಿ

https://www.youtube.com/watch?v=c0OSThNUryQ
ಎಲ್ಲ ಧರ್ಮಗಳ ಪ್ರಾರ್ಥನಾ ಮಂದಿರಗಳ ರಕ್ಷಣೆ ಬಗ್ಗೆ ವಿಧೇಯಕದಲ್ಲಿ ಪ್ರಸ್ತಾಪಲಾಗಿದೆ. ಸುಪ್ರೀಂಕೋರ್ಟ್ ಆದೇಶ ಪಾಲನೆ ಮಾಡುವುದನ್ನು ತಡೆಯುವ ಉದ್ದೇಶದಿಂದ ಈ ವಿಧೇಯಕವನ್ನು ಸರ್ಕಾರ ಮಂಡನೆ ಮಾಡಿದೆ.
ಕೇವಲ ಜನರ ಕಣ್ಣೋರೆಸುವ ತಂತ್ರದ ಭಾಗವಾಗಿ ವಿಧೇಯಕ ಪರಿಚಯಿಸಲಾಗುತ್ತಿದೆ ಎಂದು ಪ್ರತಿಪಕ್ಷದವರು ಟಿಕೀಸಿದ್ದಾರೆ.

More News