ಬೆಂಗಳೂರು : ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೇತೃತದಲ್ಲಿ ಇಂದು ಸಚಿವ ಸಂಪುಟ ಸಭೆ ನಡೆಯಲಿದೆ. ಈ ಸಭೆಯಲ್ಲಿ ಪ್ರಮುಖ 10 ಆಡಳಿತಾತ್ಮಕ ವಿಚಾರಗಳ ಬಗ್ಗೆ ಚರ್ಚಿಸಿ, ನಿರ್ಧಾರ ಕೈಗೊಳ್ಳುವ ಸಾಧ್ಯತೆಗಳಿವೆ.
ಸ್ಥಳೀಯ ಸಂಸ್ಥೆಗಳ ಚುನಾವಣೆ, ಉಪಚುನಾವಣೆ, ಮೇಯರ್, ಉಪಮೇಯರ್ ಚುನಾವಣೆ ನಡೆಸುವ ಬಗ್ಗೆ ಚರ್ಚಿಸಲಾಗುವುದು, ಕಲಬುರಗಿ, ಹುಬ್ಬಳ್ಳಿ ಪಾಲಿಕೆಗಳ ಮೇಯರ್ ಸ್ಥಾನದ ಮೀಸಲಾತಿ ಪ್ರಕಟಿಸುವ ಸಾಧ್ಯತೆಗಳಿವೆ. ಹಾಗೆಯೇ, 3 ವರ್ಷದ ಡಿಪ್ಲೋಮಾ ಕೋರ್ಸನ್ನು ಪಿಯುಸಿಗೆ ತತ್ಸಮಾನ ಎಂದು ನೇಮಕಾತಿ ವೇಳೆ ಪರಿಗಣಿಸುವ ಬಗ್ಗೆ ನಿರ್ಧಾರ ಸಾಧ್ಯತೆ.
ಕಲಬುರ್ಗಿ, ಬೆಳಗಾವಿ, ಹುಬ್ಬಳ್ಳಿ ಧಾರವಾಡ ಪಾಲಿಕೆಗಳ ಮೇಯರ್ ಉಪಮೇಯರ್ ಚುನಾವಣೆ ವಿಚಾರ ಸಂಬಂಧ ಅಧಿಸೂಚನೆ ಪ್ರಕಟಿಸುವ ಬಗ್ಗೆ ಸಭೆಯಲ್ಲಿ ಮಹತ್ವದ ಚರ್ಚೆ ನಡೆಯಲಿದೆ. ಅಧಿಸೂಚನೆಗೆ ದಿನಾಂಕ ನಿಗದಿ ಸಾಧ್ಯತೆಗಳಿವೆ. ಕಲಬುರ್ಗಿಯಲ್ಲಿ ಇನ್ನೂ ಮೈತ್ರಿ ಮಾತುಕತೆ ಮುಂದುವರಿದಿದೆ. ಜೆಡಿಎಸ್ ಜೊತೆಗಿನ ಹೊಂದಾಣಿಕೆ ಅಂತಿಮ ಹಂತಕ್ಕೆ ಇನ್ನೂ ತಲುಪಿಲ್ಲ. ಈಹಿನ್ನಲೆಯಲ್ಲಿ ವಿಳಂಬವಾಗುತ್ತಿದೆ.
ಈ ಮಧ್ಯೆ ಇವತ್ತು ಅಧಿಸೂಚನೆ ಪ್ರಕಟ ಬಗ್ಗೆ ನಿರ್ಧಾರ ಸಾಧ್ಯತೆ, ಪ್ರಾದೇಶಿಕ ಆಯುಕ್ತರಿಗೆ ಚುನಾವಣೆ ಘೋಷಣೆ ಬಗ್ಗೆ ಇಂದೇ ಸರ್ಕಾರದಿಂದ ಮಾಹಿತಿ ರವಾನೆ ಸಾಧ್ಯತೆಗಳಿವೆ, ಹಾಗೂ ಸರ್ಕಾರದಿಂದ ಮಾಹಿತಿ ಬಂದ ಬಳಿಕ ಮೇಯರ್, ಉಪಮೇಯರ್ ಚುನಾವಣೆಗೆ ದಿನಾಂಕ ಘೋಷಣೆ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.