ಚಿತ್ರಸಾಹಿತಿ ಜಾವೇದ್ ಅಖ್ತರ್ ಅವರು, ನಟಿ ಕಂಗನಾ ರನೌತ್ ವಿರುದ್ಧ ದಾಖಲಿಸಿರುವ ಮಾನಹಾನಿ ಪ್ರಕರಣದ ವಿಚಾರಣೆಯನ್ನು ನವೆಂಬರ್ 15 ಕ್ಕೆ ಮುಂದೂಡಲಾಗಿದೆ. ಇದೇ ಸಂದರ್ಭದಲ್ಲಿ ಕಂಗನಾ ಸಹ ಜಾವೀದ್ ಅಖ್ತರ್ ವಿರುದ್ಧ ಮಾನಹಾನಿ ಪ್ರಕರಣವನ್ನು ದಾಖಲಿಸಿದ್ದಾರೆ.
ಕಳೆದ ಬಾರಿ ಮುಂಬೈ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಗೈರಾಗಿದ್ದರು. ಈ ಹಿನ್ನೆಲೆಯಲ್ಲಿ ಇಂದು ನ್ಯಾಯಾಲಯದ ಮುಂದೆ ಹಾಜರಾಗಬೇಕು ಇಲ್ಲವಾದ್ದಲ್ಲಿ ಬಂಧನದ ವಾರೆಂಟ್ ಹೊರಡಿಸಲಾಗುವುದು ಎಂದು ನ್ಯಾಯಾಲಯ ಎಚ್ಚರಿಕೆ ನೀಡಿದ್ದ ಹಿನ್ನೆಲೆಯಲ್ಲಿ ಇಂದು ಕಂಗನಾ ಹಾಜರಾಗಿದ್ದರು.

ಇನ್ನು ಈ ಪ್ರಕರಣದ ವಿಚಾರಣೆಗೆಂದು ಚಿತ್ರ ಸಾಹಿತಿ ಜಾವೇದ್ ಅಖ್ತರ್ ಅವರು ನಿಗಧಿತ ಸಮಯಕ್ಕಿಂತ ಮುಂಚಿತವಾಗಿಯೇ ನ್ಯಾಯಾಲಯಕ್ಕೆ ಆಗಮಿಸಿದ್ದರು.
ಜಾವೀದ್ ಅಖ್ತರ್ ವಿರುದ್ಧ ಮಾನಹಾನಿ ಪ್ರಕರಣ ದಾಖಲು
ನಟಿ ಕಂಗನಾ ರನೌತ್ ಅವರು ಚಿತ್ರ ಸಾಹಿತಿ ಜಾವೇದ್ ಅಖ್ತರ್ ಅವರ ವಿರುದ್ಧ ಮಾನನಷ್ಠ ಮೊಕದ್ದಮೆ ದಾಖಲಿಸಿದ್ದಾರೆ. ಪದೇ ಪದೇ ಜಾವೇದ್ ಅಖ್ತರ್ ಅವರು ಹೂಡಿರುವ ಪ್ರಕರಣದಲ್ಲಿ ಪ್ರತಿ ವಿಚಾರಣೆಗೂ ಹಾಜರಾಗುವಂತೆ ಹೇಳುತ್ತಿರುವುದನ್ನು ಪ್ರಶ್ನಿಸಿರುವ ಕಂಗನಾ ಪರ ವಕೀಲರು, ಈ ಮೊಕದ್ದಮೆಯನ್ನು ಸಿಎಂಎಂ ಕೋರ್ಟ್ಗೆ ವರ್ಗಾಯಿಸುವಂತೆ ಮನವಿ ಮಾಡಿ ಅರ್ಜಿ ಸಲ್ಲಿಸಿದ್ದಾರೆ. ಕಂಗನಾ ಅವರು ಸಲ್ಲಿಸಿರುವ ಈ ಅರ್ಜಿಯ ವಿಚಾರಣೆ ಅಕ್ಟೋಬರ್ 1ಕ್ಕೆ ನಡೆಯಲಿದೆ.
ಹಿನ್ನೆಲೆ
ನಟರೊಬ್ಬರ ಜೊತೆ ಇದ್ದ ಸಂಬಂಧದ ಬಗ್ಗೆ ಎಲ್ಲೂ ಬಾಯಿ ಬಿಡದಂತೆ ಮೌನವಹಿಸಬೇಕೆಂದು ಜಾವೇದ್ ಅಖ್ತರ್ ಒತ್ತಡ ಹೇರಿದ್ದರು ಎಂದು ಕಂಗನಾ ಸಂದರ್ಶನವೊಂದರಲ್ಲಿ ಆರೋಪಿಸಿದ್ದರು. ಈ ಆರೋಪ ಸುಳ್ಳು ಎಂದು ಅಖ್ತರ್ ನ್ಯಾಯಾಲಯದ ಮೆಟ್ಟಿಲೇರಿದ್ದರು.

ಪ್ರಸ್ತುತ ಕಂಗನಾ ರನೌತ್ ಅವರು ತಮ್ಮ ತಲೈವಿ ಸಿನೆಮಾ ಹಿಟ್ ಆಗಿರುವ ಸಂತೋಷದಲ್ಲಿದ್ದಾರೆ. ಚಿತ್ರಮಂದಿರ ಹಾಗೂ ಒಟಿಟಿಯಲ್ಲಿ ಒಟ್ಟಿಗೆ ಈ ತಲೈವಿ ಸಿನಿಮಾ ತೆರೆ ಕಂಡಿದೆ. ಕಲೆಕ್ಷನ್ ವಿಷಯದಲ್ಲಿ ತಲೈವಿ ಕೊಂಚ ಹಿಂದೆ ಬಿದ್ದರೂ ಸಹ ಸಿನಿಪ್ರಿಯರ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾಳೆ ಎಂದು ಹೇಳಬಹುದು.