ನಮ್ಮ ಶಾಸಕರು ಪಕ್ಷ ಬಿಟ್ಟು ಹೋಗುವುದಿಲ್ಲ, ಡಿಕೆಶಿ ವ್ಯರ್ಥ ಪ್ರಯತ್ನ : ಮಾಜಿ ಸಿಎಂ ಬಿಎಸ್ ವೈ

ಬೆಂಗಳೂರು : ಬಿಜೆಪಿ ಶಾಸಕರನ್ನು ಡಿ ಕೆ ಶಿವಕುಮಾರ್ ಸೆಳೆಯುವುದರಲ್ಲಿ ಯಾವುದೇ ಅರ್ಥ ಇಲ್ಲ, ನಮ್ಮ ಯಾವ ಶಾಸಕರು ಪಕ್ಷ ಬಿಟ್ಟು ಹೋಗುವುದಿಲ್ಲ, ಅವರದೊಂದು ವ್ಯರ್ಥ ಪ್ರಯತ್ನ ಎಂದು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಪರೇಷನ್ ಹಸ್ತ ಯಶಸ್ವಿಯಾಗಲ್ಲ, ಬದಲಾಗಿ ಕಾಂಗ್ರೆಸ್ ಶಾಸಕರೇ ನಮ್ಮ ಜತೆ ಬರ್ತಾರೆ, ಅವರು ಯಾರು ಅಂತ ಸ್ವಲ್ಪ ದಿನದಲ್ಲೆ ಬಹಿರಂಗವಾಗಲಿದೆ ಎಂದು ತಿಳಿಸಿದರು.
ಕಾಂಗ್ರೆಸ್ ಪ್ರತಿಭಟನೆ
ಕಾಂಗ್ರೆಸ್ ನ ಸ್ನೇಹಿತರು ಎತ್ತಿನಗಾಡಿ, ಸೈಕಲ್‌ನಲ್ಲಿ ವಿಧಾನಸೌಧಕ್ಕೆ ಬರೋಕು ಮುನ್ನ ನಾವು ಬೈಕ್, ಕಾರಿನಲ್ಲಿ ೧೪೦ ಜನ ಬಂದು ಅಧಿಕಾರದಲ್ಲಿ ಮತ್ತೆ ಕೂರುತ್ತೇವೆ ಎಂದು ಯಡಿಯೂರಪ್ಪ ಕಾಂಗ್ರೆಸ್ ನವರು ನಡೆಸುತ್ತಿರುವ ಪ್ರತಿಭಟನೆ ಕುರಿತು ವ್ಯಂಗ್ಯವಾಡಿದರಲ್ಲದೆ ಈಬಗ್ಗೆ ಯಾರಿಗೂ ಅನುಮಾನಬೇಡ ಎಂದು ತಿಳಿಸಿದರು.
ನಾನು ಮೂಲ ಬಿಜೆಪಿಗ, ಪಕ್ಷ ತೊರೆಯುವ ಅವಶ್ಯಕತೆ ನನಗಿಲ್ಲ : ಶಾಸಕ ಎಂ ಪಿ ಕುಮಾರಸ್ವಾಮಿ
ನಾನು ಮೂಲ ಬಿಜೆಪಿಗ, ನನಗೆ ಪಕ್ಷದಲ್ಲಿ ಯಾವುದೇ ಸಮಸ್ಯೆಯಿಲ್ಲ ಹಾಗೂ ಪಕ್ಷದ ಮುಖಂಡರ ಮೇಲೆ ಬೇಜಾರಿಲ್ಲ ಹಾಗಾಗಿ ನಾನು ಪಕ್ಷ ಬಿಡುವುದಿಲ್ಲ ಎಂದು ಶಾಸಕ ಎಂ ಪಿ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.


ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷದವರೇ ನನಗೆ ಆಗದವರು ಹೀಗೆ ಮಾಡ್ತಿದ್ದಾರೆ, ನಾನು ಕಾಂಗ್ರೆಸ್ ಗೆ ಹೋಗಲ್ಲ, ನನ್ನ ಯಾರೂ ಸಂಪರ್ಕ ಮಾಡಿಲ್ಲ ಎಂದು ಎಂ.ಪಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ನನ್ನನ್ನು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸಂಪರ್ಕ ಮಾಡಿಲ್ಲ, ಪದೇ ಪದೇ ನಮ್ಮ ಹೆಸರನ್ನೂ ಇಂಥಹ ವಿಚಾರಗಳಲ್ಲಿ ಎಳೆದು ತರುತ್ತಿದ್ದಾರೆ, ಕಾಂಗ್ರೆಸ್ ಗೆ ಹೋಗುವ ಅನಿವಾರ್ಯತೆ ಇಲ್ಲ, ಬಿಜೆಪಿ ನನ್ನ ಗೌರವದಿಂದ ನಡೆಸಿಕೊಂಡಿದೆ ಎಂದು ತಿಳಿಸಿದರು.

More News

You cannot copy content of this page