ಬೆಂಗಳೂರು : ವಿಧಾನಸಭೆಯಲ್ಲಿ ಇಂದು ವಿಚಿತ್ರವಾದ ಪ್ರಸ್ತಾಪವನ್ನ ಸದನದ ಮುಂದೆ ಹಿರಿಯ ಶಾಸಕ ರಮೇಶ್ ಕುಮಾರ್ ಇಟ್ಟಿರು. ರಸ್ತೆಗಳಿಗೆ ಅವೈಜ್ಞಾನಿಕ ಹಂಪ್ ಗಳನ್ನು ಹಾಕಲಾಗಿದೆ. ಇವುಗಳನ್ನು ತೆಗೆಯಿರಿ ಇಲ್ಲಾ, ಹಂಪ್ ಗಳನ್ನು ಹಾಕಿರುವ ಪಿಡಬ್ಲುಡಿ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿ ಎಂದು ಸಚಿವರನ್ನು ಒತ್ತಾಯಿಸಿದರು.
ವಿಧಾನ ಸಭೆಯಲ್ಲಿ ಮುಳುಬಾಗಿಲಿನಿಂದ ಚಿಕ್ಕಬಳ್ಳಾಪುರ ರಸ್ತೆಯಲ್ಲಿನ ಹಂಪ್ ಗಳ ಬಗ್ಗೆ ನಡೆದ ಚರ್ಚೆ ಸಂದರ್ಭದಲ್ಲಿ ಶಾಸಕ ರಮೇಶ್ ಕುಮಾರ್ ಅವರು ಆಕ್ರೋಶಭರಿತರಾಗಿ ಈ ಮಾತನ್ನು ಆಡಿದರು. ಅವೈಜ್ಞಾನಿಕವಾಗಿರುವ ಹಂಪ್ ಗಳ ಬಗ್ಗೆ ರಮೇಶ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.
ಹಂಪ್ ಹಾಕುವ ಮತ್ತು ತೆಗೆಯುವ ನಿರ್ಧಾರ ಪಿಡಬ್ಲುಡಿ ಅಧಿಕಾರಿಗಳ ಜವಾಬ್ದಾರಿಯಲ್ಲವೇ…? ಹಾಗಾದ್ರೆ, ರಸ್ತೆಗಳಿಗೆ ಪಿಡಬ್ಲುಡಿ ಅಧಿಕಾರಿಗಳು ಹೋಗಿ ನೋಡಿದ್ದಾರಾ…? ಎಂದು ಪ್ರಶ್ನಿಸಿದರಲ್ಲದೆ, ನಿಮ್ಮ ಅಧಿಕಾರಿಗಳನ್ನು ಈ ಸದನ ಮುಗಿಯುವ ಒಳಗೆ ಸಸ್ಪೆಂಡ್ ಮಾಡಿ ಒತ್ತಾಯಿಸಿದರು.
ಮಧ್ಯೆ ಪ್ರವೇಶ ಮಾಡಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಕೆಲವು ಸಂದರ್ಭಗಳಲ್ಲಿ ಸ್ಥಳಿಯರ ಬೇಡಿಕೆ ಮೇಲೆ ಹಂಪ್ ಹಾಕಲಾಗುತ್ತದೆ, ಅದಕ್ಕೆ ಸ್ಥಳೀಯ ಶಾಸಕರು, ಸಂಸದರು ಹೇಳಿಯೇ ಹಂಪ್ ಹಾಕಿದ್ದಾರೆ, ಇದನ್ನು ನಾನು ಕೂಡ ಗಮನಿಸಿದ್ದೇನೆ ಎಂದು ಮನವರಿಕೆ ಮಾಡಿದರು.
ಎಂ.ಪಿ. ಎಂ.ಎಲ್ ಎ ಗಳು ಹೇಳಿದ್ದರಿಂದ ಹಂಪ್ ಹಾಕಲು ಅನುಮತಿ ಕೊಡಲಾಗಿದೆ ಎಂದು ಸ್ಪೀಕರ್ ತಿಳಿಸಿದರು. ಇದರಿಂದ ಸ್ಪೀಕರ್ ಮಾತಿನಿಂದ ಬೇಸರಗೊಂಡ ರಮೇಶ್ ಕುಮಾರ್, ಹಾಗಾದರೆ ನಾನು ಹೇಳಿದ್ರೆ ಕೇಳಿ ಬಿಡ್ತೀರಾ…? ನನಗೆ ಐದು ಜನರ ತಲೆ ತೆಗೆಯಬೇಕು ಅಂದರೆ ಅನುಮತಿ ಕೊಡ್ತೀರಾ…? ಎಂದು ರಮೇಶ್ ಕುಮಾರ್ ಸಿಟ್ಟಿಗೆದ್ದರು.
ರಮೇಶ್ ಕುಮಾರ್ ಮಾತಿಗೆ ಸಹಮತ ವ್ಯಕ್ತಪಡಿಸಿ ಎದ್ದು ನಿಂತ ಅನೇಕ ಶಾಸಕರು. ಎಲ್ಲಾ ಕಡೆ ಇಂತಹ ವ್ಯವಸ್ಥೆ ಇರೋದ್ರಿಂದ ಅವೈಜ್ಞಾನಿಕ ಹಂಪ್ ತೆಗೆಯಬೇಕು. ತಕ್ಷಣವೇ ಸಚಿವರು ಮಧ್ಯ ಪ್ರವೇಶ ಮಾಡಲು ಎಲ್ಲಾ ಪಕ್ಷಗಳ ಶಾಸಕರ ಆಗ್ರಹಿಸಿದರು. ದೇವನಹಳ್ಳಿ ವಿಮಾನನಿಲ್ದಾಣಕ್ಕೆ ಒಳ್ಳೆಯ ರಸ್ತೆ ಮಾಡಿ ಹಂಪ್ಸ್ ಹಾಕಿದ್ರೆ ಹೇಗೇ…? ಇಂಟರ್ ನ್ಯಾಷನಲ್ ಪ್ಲೈಟ್ ಹಿಡಿಯೋನು ಏನು ಮಾಡಬೇಕು..?, ಇಲಾಖಾ ಅಧಿಕಾರಿಗಳನ್ನು ತಕ್ಷಣ ಅಮಾನತು ಮಾಡಬೇಕೆಂದು ಆಗ್ರಹಿಸಿದರು.
ಆದರೆ ಡಿಸಿ, ಎಸ್ ಪಿ ಗಳ ಗಮನಕ್ಕೆ ತಂದು ಸೂಕ್ತ ಕ್ರಮ ತೆಗೆದುಕೊಳ್ಳೋದಾಗಿ ಸಚಿವ ಸಿ.ಸಿ. ಪಾಟೀಲ್ ಭರವಸೆ ನೀಡಿದರು. ಸಚಿವರ ಉತ್ತರಕ್ಕೆ ಸಿಟ್ಟಾದ ರಮೇಶ್ ಕುಮಾರ್ ರಿಂದ ಪ್ರಶ್ನೆ ಹಿಂಪಡೆಯುವ ಬೆದರಿಕೆ. ಇಂತಹ ಪ್ರಶ್ನೆ ಇನ್ಮುಂದೆ ಕೇಳೋದಿಲ್ಲ – ಇಡೀ ನಡಾವಳಿ ಹಿಂದಕ್ಕೆ ಪಡೆಯುತ್ತೇನೆ ಎಂದು ರಮೇಶ್ ಕುಮಾರ್ ಹೇಳಿದರು.
ರಮೇಶ್ ಕುಮಾರ್ ಬೆಂಬಲಕ್ಕೆ ನಿಂತ ಕೆ.ಜಿ.ಬೋಪಯ್ಯ, ಕೃಷ್ಣಾರೆಡ್ಡಿ, ರಾಜೇಗೌಡ. ಅಧಿಕಾರಿಗಳನ್ನು ಅಮಾನತು ಮಾಡಲು ನಿಮಗೇನು ತೊಂದರೆ ಎಂದು ರಮೇಶ್ ಕುಮಾರ್ ಪ್ರಶ್ನಿಸಿದರು. ಮಧ್ಯೆ ಪ್ರವೇಶ ಮಾಡಿದ ಸ್ಪೀಕರ್, ಶಾಸಕ ರಮೇಶ್ ಕುಮಾರ್ ಅವರಿಗೆ ಮನವರಿಕೆ ಮಾಡಿದ ಬಳಿಕ ಗೊಂದಲಕ್ಕೆ ತೆರೆ ಬಿದ್ದಿತು.