ಚಾಣಕ್ಯ ವಿವಿಗೆ ನಿಯಮ ಮೀರಿ ಭೂಮಿ ನೀಡಿದ್ದರ ವಿರುದ್ಧ ಕಾನೂನು ಹೋರಾಟ: ಸಿದ್ದರಾಮಯ್ಯ

ಬೆಂಗಳೂರು: ಆರ್ ಎಸ್ ಎಸ್ ಮುಖಂಡರನ್ನು ಒಳಗೊಂಡ ಚಾಣಕ್ಯ ವಿಶ್ವವಿದ್ಯಾಲಯಕ್ಕೆ ಆತುರ ಆತುರವಾಗಿ ರಾಜ್ಯ ಬಿಜೆಪಿ ಸರ್ಕಾರ ವಿಧಾನಸಭೆಯಲ್ಲಿ ಅನುಮೋದನೆ ನೀಡಿರುವದರ ವಿರುದ್ಧ ಕಾನೂನು ಹೋರಾಟ ನಡೆಸಲಾಗುವುದು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ಸುದ್ದಿಗೋಷ್ಠಿಯನ್ನು ವಿಕ್ಷೀಸಲು ಈಕೆಳಗಿನ ಲಿಂಕ್ ಒತ್ತುವುದು.

https://www.youtube.com/watch?v=DM_ZZiPE7DQ


ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಅವರು, ನಿನ್ನೆ ವಿಧಾನಸಭೆಯಲ್ಲಿ ಬಿಜೆಪಿ ಸರ್ಕಾರ ಆತುರ ಆತುರವಾಗಿ ಚಾಣಕ್ಯ ವಿಶ್ವವಿದ್ಯಾಲಯ ಬಿಲ್ಲನ್ನು ದ್ವನಿಮತದಿಂದ ಅಂಗೀಕರಿಸಿದೆ. ಚರ್ಚೆಗೆ ಅವಕಾಶ ನೀಡದೇ ಪಾಸ್ ಮಾಡಿಕೊಂಡಿದೆ. ಸೆಂಟರ್ ಫಾರ್ ಎಜುಕೇಶನ್ ಅಂಡ್ ಸೋಶಿಯಲ್ ಸ್ಟಡೀಸ್ (ಸೆಸ್) ಅನ್ನುವ ಸಂಸ್ಥೆ ಇದನ್ನು ನಡೆಸುತ್ತಿದೆ. ಈ ಸಂಸ್ಥೆಯಲ್ಲಿ ಇರುವವರೆಲ್ಲಾ ಆರ್ ಎಸ್ ಎಸ್ ನವರು. ಇಲ್ಲಿ ವಿಸ್ಯಾಸಂಸ್ಥೆಗೆ ಅಗತ್ಯವಿರುವ ಮೂಲಸೌಕರ್ಯ ಇಲ್ಲ.
ಈ ಸೆಸ್ ಸಂಸ್ಥೆಗೆ ಬಿಜೆಪಿ ಸರ್ಕಾರ ಕಳೆದ ಏಪ್ರಿಲ್26 ರಂದು ನಡೆಸಿದ ಸಚಿವ ಸಂಪುಟ ಸಭೆಯಲ್ಲಿ ಕೆಐಎಡಿಬಿಗೆ ಸೇರಿದ ಭೂಮಿ ನೀಡಿದೆ. ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬಳಿ ಹರಳೂರು ಎಂಬಲ್ಲಿ 116 ಎಕರೆ 16 ಗುಂಟೆ ಭೂಮಿ‌ಮೀಸಲಿಟ್ಟಿದೆ.ಕೇವಲ 50 ಕೋಟಿ ರೂ.ಗೆ ನೀಡಲು ತೀರ್ಮಾನಿಸಿದೆ.
ಈ ಜಮೀನನ್ನು ಕೆಐಎಡಿಬಿಯವರು ರೈತರಿಂದ ವಶಪಡಿಸಿಕೊಂಡು, ಪರಿಹಾರ ಕೂಡ ವಿತರಿಸಿದೆ. ಭೂ ಸ್ವಾದೀನಕ್ಕೆ 175 ಕೋಟಿ ರೂ. ವೆಚ್ಚ ಮಾಡಲಾಗಿದೆ. ಇದು 300-400 ಕೋಟಿ ರೂ. ಬೆಲೆಬಾಳುವ ಜಮೀನಾಗಿದೆ. ಸರ್ಕಾರ ಆರ್ ಎಸ್ ಎಸ್ ಗೆ ಬಳುವಳಿಯಾಗಿ ಈ ಭೂಮಿ ನೀಡಿದೆ ಎಂದರು.
ನಿಯಮಾವಳಿ ಪ್ರಕಾರ ಖಾಸಗಿ ವಿವಿ ಎಂದು ಘೋಷಿಸಿ ಅನುಮತಿ ನೀಡಿದ್ದರೆ ಅಭ್ಯಂತರ ಇಲ್ಲ. ನಿಯಮ ಗಾಳಿಗೆ ತೂರಲಾಗಿದೆ. ನಿಬಂಧನೆಗೆ ಅನುಸಾರವಾಗಿ ಜಮೀನು ನೀಡಿದ್ದರೆ ನಮ್ಮ ತಕರಾರು ಇರಲಿಲ್ಲ. ನಿಗದಿತ ಬೆಲೆ ಇರುವಾಗ ಈ ತೀರ್ಮಾನ ಕೈಗೊಂಡಿದ್ದು ತಪ್ಪು. ಕೊರೊನಾ ಎರಡನೇ ಅಲೆ ಇರುವ ಸಂದರ್ಭದಲ್ಲಿ ಇಂತಹ ನಿರ್ಧಾರ ಕೈಗೊಳ್ಳಬಾರದಿತ್ತು.
ಇದು ಮನುವಾದಿಗಳ ವಿಶ್ವವಿದ್ಯಾಲಯ ಆಗಲಿದೆ. ಚಾಣಕ್ಯ ಕೂಡ ಮನುವಾದಿ ಕುಟುಂಬಕ್ಕೆ ಸೇರಿದವರಾಗಿದ್ದರು. ಚತುರ್ವರ್ಣ ಪದ್ದತಿಯು ಮರು ಅಳವಡಿಕೆಯ ಹೈರಾರ್ಕಿ ಮತ್ತೆ ಬರಲಿದೆ. ಶ್ರೇಣಿಕೃತ ವ್ಯವಸ್ಥೆ ಮತ್ತೆ ತರಲಾಗುತ್ತಿದೆ. ನಮ್ಮ ಸ್ಪೀಕರ್ ಸಹ ಇದಕ್ಕೆ ಬೆಂಬಲ ಕೊಡುತ್ತಾರೆ. ಬಹಳ ಒಳ್ಳೆ ವಿಚಾರ ಎಂದು ಐದಾರು ಬಿಲ್ ನಂತರ ಬರಬೇಕಾದ ಬಿಲ್ ಮೊದಲೇ ತೆಗೆದುಕೊಂಡು ಚರ್ಚಿಸಿದ್ದಾರೆ. ಸ್ಪೀಕರ್ ಈ ವಿಚಾರದಲ್ಲಿ ಪಕ್ಷಪಾತ ಧೋರಣೆ ತೋರಿಸಿದ್ದಾರೆ. ಪಕ್ಷಾತೀತರಾಗಿ ಇರಬೇಕಿದ್ದವರು ಹೀಗೆ ನಡೆದುಕೊಂಡಿದ್ದು ಸರಿಯಲ್ಲ. ಇದು ಸ್ವಜನ ಪಕ್ಷಪಾತ ಎಂದು ಬೇಸರ ವ್ಯಕ್ತಪಡಿಸಿದರು.
ಬಿಲ್ ಪಾಸ್ ಆಗಿರಬಹುದು ಆದರೆ ಇದಕ್ಕೆ ನೀಡಿದ ಭೂಮಿ‌ವಾಪಸ್ ಪಡೆಯಬೇಕು. ಚಾಣಕ್ಯ ವಿವಿ ಸ್ಥಾಪನೆಗೆ ಸರ್ಕಾರ ಅವಕಾಶ ನೀಡಬಾರದು. ಮನುವಾದಿಗಳಿಗೆ ನೀಡಲು ಹೊರಟ ಭೂಮಿಯ ನಿಲುವನ್ನು ಜನಪರವಾಗಿ ತೀವ್ರವಾಗಿ ವಿರೋಧಿಸುತ್ತೇನೆ.
ನಮಗೆ ಚರ್ಚೆಗೆ ಅವಕಾಶ ನೀಡಬೇಕಿತ್ತು. ಆತುರ ಏನಿತ್ತು. ಅಂತಹ ತುರ್ತು ಸ್ಥಿತಿ ಏನಿತ್ತು. ಸಮಾಜದ, ಜನರ ತುರ್ತು ಇತ್ತಾ. ಆರ್ ಎಸ್ ಎಸ್ ಬಲವಂತಕ್ಕೆ ಸ್ಪೀಕರ್ ಸಹ ಬೆಂಬಲ ನೀಡಿದ್ದು ಸರಿಯಲ್ಲ. ಇಂತಹ ವಿವಿ ಸ್ಥಾಪನೆ ಆಗಬಾರದು ಮತ್ತು ಬಹುಬೆಲೆಯ ಭೂಮಿ ನೀಡಿದ್ದು, ಎರಡನ್ನೂ ವಿರೋಧಿಸುತ್ತೇನೆ. ಇವರಿಗೆ ಖಾಸಗಿ ವಿವಿ ಮಾಡುವ ಅರ್ಹತೆ ಇಲ್ಲ ಎಂದು ಟಿಕೀಸಿದರು. ಈ ಸರ್ಕಾರ ಕೈಗೊಂಡ ತೀರ್ಮಾನ ಪ್ರಶ್ನಿಸುತ್ತೇವೆ. ಕಾನೂನು ಹೋರಾಟ ನಡೆಸುತ್ತೇವೆ ಎಂದರು.
ಕೈಗಾರಿಕಾ ಭೂಮಿ ಏಕೆ?
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾತನಾಡಿ, ಖಾಸಗಿ ವಿಶ್ವವಿದ್ಯಾಲಯ ಸ್ಥಾಪನೆಗೆ ಇರುವ ನಿಯಮಾವಳಿ ಪರಿಶೀಲನೆ ಮಾಡಿದಾಗ ಈ ಸಂಸ್ಥೆಗೆ ನೀಡಿದ ಪರವಾನಗಿಯಲ್ಲಿ ಅದೆಲ್ಲದರ ಉಲ್ಲಂಘನೆ ಆಗಿದೆ. ಒಂದು ಸಂಸ್ಥೆಯೇ ಇಲ್ಲ. ಜಮೀನು ಕಡಿಮೆ ಬೆಲೆಗೆ ನೀಡುತ್ತಾರೆ ಎಂದು ಪಡೆಯುವುದು ಸರಿಯಲ್ಲ.
ಏರ್ಪೋರ್ಟ್ ಪಕ್ಕ ಏರೋಸ್ಪೇಸ್ ಗೋಸ್ಕರ ಕೊಂಡುಕೊಂಡ ಭೂಮಿಯನ್ನು ಶಿಕ್ಷಣ ಸಂಸ್ಥೆಗೆ ನೀಡಿದ್ದು ಸರಿಯಲ್ಲ. ಸಿದ್ದರಾಮಯ್ಯ ನವರಿಗೆ ಮಾಹಿತಿ ಇಲ್ಲವೇನೋ, ಇಲ್ಲಿ ಒಂದು ಎಕರೆಭೂಮಿಗೆ 10 ಕೋಟಿ ರೂ.ವರೆಗೂ ಮಾರುಕಟ್ಟೆ ಮೌಲ್ಯ ಇದೆ.
ಮಾಗಡಿ ಬಳಿ ಸಂಸ್ಕೃತ ವಿಶ್ವವಿದ್ಯಾಲಯ ಕ್ಕೆ ಭೂಮಿ ನೀಡಿದ್ದೀರಿ ಅದರ ಪಕ್ಕದಲ್ಲೇ ಸರ್ಕಾರಿ ಭೂಮಿ ಇದ್ದರೆ ಈ ವಿವಿಗೆ ನೀಡಿ. ಕೈಗಾರಿಕೆಗಳು ಬಂದರೆ ನೀಡಬೇಕೆಂದು‌ ಕೊಂಡ ಭೂಮಿಯಲ್ಲಿ ಆರ್ ಎಸ್ ಎಸ್ ವಿಶ್ವವಿದ್ಯಾಲಯ ಸ್ಥಾಪನೆ ಏಕೆ? ನಾವು ಸಹ ಸಾಕಷ್ಟು ಭೂಮಿ ನೀಡಿದ್ದೇವೆ. ಸರ್ಕಾರಿ ಭೂಮಿ ರಾಜ್ಯದ ಯಾವುದೇ ಭಾಗದಲ್ಲಿದ್ದರೆ ನೀಡಿ. ಕೈಗಾರಿಕಾ ಭೂಮಿ ಬಳಕೆ ಸರಿಯಲ್ಲ ಎಂದು ಆರೋಪಿಸಿದರು.

More News

You cannot copy content of this page