ಬೆಳಗಾವಿ : ದಕ್ಷಿಣ ಭಾರತದಲ್ಲಿ ಅಪಾರ ಭಕ್ತಗಣ ಹೊಂದಿರುವ ಸವದತ್ತಿಯ ಯಲಮ್ಮಗುಡ್ಡದ ಶ್ರೀ ರೇಣುಕಾದೇವಿ ದೇಗುಲ ಸೆಪ್ಟಂಬರ್ 28 ರಿಂದ ಭಕ್ತರ ಪ್ರವೇಶಕ್ಕೆ ಮುಕ್ತವಾಗಲಿದೆ. 16 ಷರತ್ತು ವಿಧಿಸಿ ದೇಗುಲ ತೆರೆಯಲು ಜಿಲ್ಲಾಧಿಕಾರಿ ಎಂ ಜಿ ಹಿರೇಮಠ ಆದೇಶ ಹೊರಡಿಸಿದ್ದಾರೆ.
ಎರಡನೇ ಅಲೆ ಭೀತಿ ಹುಟ್ಟಿಸಿದ ಕಾರಣ ದೇವಸ್ಥಾನಕ್ಕೆ ಭಕ್ತರ ಪ್ರವೇಶ ನಿಷೇಧಿಸಲಾಗಿತ್ತು. ಕೊರೊನಾ ಹಿನ್ನೆಲೆ ಈ ದೇವಸ್ಥಾನ ಒಟ್ಟು 17 ತಿಂಗಳು ಬಂದ್ ಮಾಡಲಾಗಿತ್ತು. ಭಕ್ತರ ಕೋರಿಕೆ ಹಾಗೂ ಗಡಿ ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣಕ್ಕೆ ಬರುತ್ತಿರುವ ಹಿನ್ನೆಲೆಯಲ್ಲಿ ದೇಗುಲ ತೆರೆಯಲು ಷರತ್ತುಬದ್ಧ ಅನುಮತಿ ನೀಡಲಾಗಿದೆ.
ಜನಸಂದಣಿ ಆಗುವಂತಹ ಉತ್ಸವ, ಜಾತ್ರೆ ಕಾರ್ಯಕ್ರಮ ನಡೆಸದಂತೆ ನಿರ್ಬಂಧ ಹೇರಲಾಗಿದೆ. ಕಡ್ಡಾಯವಾಗಿ ಕೋವಿಡ್ ನಿಯಮ ಪಾಲಿಸುವಂತೆ ದೇವಸ್ಥಾನ ಟ್ರಸ್ಟ್ಗಳಿಗೆ ಸೂಚಿಸಲಾಗಿದೆ. ಇದರಿಂದ ಭಕ್ತಾಧಿಗಳ ದರ್ಶನಕ್ಕೆದೇವಸ್ಥಾನ ತೆರಯಲಾಗುವುದು. ಸರ್ಕಾರ ಮತ್ತು ಜಿಲ್ಲಾಡಳಿತ ವಿಧಿಸಿರುವ ಎಲ್ಲಾ ರೀತಿಯ ಕೊರೊನಾ ನಿಯಮಗಳನ್ನು ಚಾಚುತಪ್ಪದೇ ಪಾಲಿಸಲಾಗುವುದು ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.