ವೀರಶೈವ ಲಿಂಗಾಯುತರನ್ನು ಬಿಜೆಪಿ ದುರ್ಬಳಕೆ ಮಾಡಿಕೊಂಡು ಅಧಿಕಾರ ಅನುಭವಿಸಿದೆ : ಬಸವನಗೌಡ ಬಾದರ್ಲಿ ಟೀಕೆ

ಬೆಂಗಳೂರು : ವೀರಶೈವ ಲಿಂಗಾಯತರನ್ನು ಬಿಜೆಪಿ ಮತ್ತು ಆರ್.ಎಸ್.ಎಸ್ ನವರು ದುರ್ಬಳಕೆ ಮಾಡಿಕೊಂಡು, ಅಧಿಕಾರಕ್ಕೆ ತರುತ್ತಿದ್ದಾರೆ, ಯಡಿಯೂರಪ್ಪ ಅವರನ್ನು ಕೆಳಗಿಳಿಸಿದ್ರು, ಹೀಗಾಗಿ ಕಾಂಗ್ರೆಸ್ ನಿಂದ ದೂರವಾದ  ಸಮುದಾಯವನ್ನು ಸೆಳೆಯಬೇಕು ಎಂಬ ಉದ್ದೇಶದಿಂದ ಕಾಂಗ್ರೆಸ್ ನ ಲಿಂಗಾಯತ ಮುಖಂಡರಗಳ ಸಭೆ ನಡೆಸಲಾಗಿದೆ ಎಂದು ಶಾಸಕ   ಬಸವನಗೌಡ ಬಾದರ್ಲಿ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ  ಇಂದು ಖಾಸಗಿ ಹೊಟೇಲ್ ನಲ್ಲಿ ಸುಮಾರು ಮೂರು ಗಂಟೆಗೂ ಅಧಿಕ ಕಾಲ ಸಭೆ ನಡೆಸಿದ ಮುಖಂಡರು, ಪಕ್ಷಕ್ಕೆ ವೀರಶೈವ ಲಿಂಗಾಯತರನ್ನು ಸೆಳೆಯಬೇಕು, ಮತ್ತೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎನ್ನುವ ಉದ್ದೇಶದಿಂದ ಸಭೆ ನಡೆಸಲಾಗಿದೆ ಎಂದು ಸ್ಪಷ್ಟಪಡಿಸಿದರು.

ಆದರೆ ಸಭೆ ನಡೆದ್ದಾದ್ರು ಏನು

ಕಾಂಗ್ರೆಸ್ ಪಕ್ಷದಲ್ಲಿ ಎರಡನೆಯ ಹಂತದ ಲಿಂಗಾಯತ ನಾಯಕರ ಕಡಗಣನೆಯಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಸಭೆ ನಡೆಸಲಾಗಿದೆ ಎಂದು ತಿಳಿದುಬಂದಿದೆ. ಪಕ್ಷದಲ್ಲಿ ಹುದ್ದೆ ನೀಡುವಾಗಲೂ ತಾರತಮ್ಯ ಆಗ್ತಿದೆ. ಚುನಾವಣೆ ತಯಾರಿ ಹಾಗೂ ಸಂಘಟನೆಯ ವಿಚಾರದಲ್ಲಿ ಎರಡನೇಯ ಹಂತದ ನಾಯಕರ ಕಡೆಗಣನೆ ಮಾಡಲಾಗುತ್ತಿದೆ, ಪಕ್ಷದಲ್ಲಿ ಲಿಂಗಾಯತರ ಕಡೆಗಣನೆಗೆ ಬ್ರೇಕ್ ಹಾಕಬೇಕು, ಹಾಗೂ ಇದನ್ನು ವರಿಷ್ಠರ‌ ಗಮನಕ್ಕೆ ತರಬೇಕು ಮತ್ತಿತರ ವಿಚಾರಗಳ ಬಗ್ಗೆ ಚರ್ಚೆ ನಡೆದಿದೆ ಎಂದುತಿಳಿದುಬಂದಿದೆ.

ಕಾಂಗ್ರೆಸ್ ಪಕ್ಷಕ್ಕೆ ವೀರಶೈವ ಲಿಂಗಾಯತ ಸಮುದಾಯದ ಮತಗಳನ್ನು ಸೆಳೆಯುವುದು, ಅಲ್ಲದೆ ಈ ಬಗ್ಗೆ ಮಠಾದೀಶರನ್ನು ಮನವೊಲಿಸುವುದು, ಮುಂದಿನ ಚುನಾವಣೆಯಲ್ಲಿ ಎರಡನೇ ಹಂತದ ನಾಯಕರಿಗೆ ಟಿಕೆಟ್ ನೀಡುವುದು, KPCC ಮತ್ತು AICC ಮಟ್ಟದಲ್ಲಿ ಪದಾಧಿಕಾರಿಗಳು ಆಯ್ಕೆ ಪ್ರಕ್ರಿಯೆ ನಡೆಯುವಾಗ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಬೇಕು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳ ನೇಮಕದ ಸಂದರ್ಭದಲ್ಲಿ ಸಮುದಾಯ ಆದ್ಯತೆ ನೀಡಬೇಕು ಎನ್ನುವುದರ ಕುರಿತೂ ಸಭೆಯಲ್ಲಿ ಮಹತ್ವದ ಚರ್ಚೆ ನಡೆಸಲಾಗಿದೆ ಎಂದು ತಿಳಿದುಹಂದಿದೆ.

More News