ರೇವತಿಗೆ ಗಂಡು ಮಗು : ತಾತನಾದ ಹೆಚ್ ಡಿ ಕುಮಾರಸ್ವಾಮಿ

ಬೆಂಗಳೂರು : ನಟ ನಿಖಿಲ್​ ಕುಮಾರಸ್ವಾಮಿ ಹಾಗೂ ರೇವತಿ ದಂಪತಿಗೆ ಗಂಡು ಮಗು ಜನನವಾಗಿದೆ. ಈ ಮೂಲಕ ಮಾಜಿ ಪ್ರಧಾನ ಮಂತ್ರಿ ಎಚ್.ಡಿ.ದೇವೇಗೌಡ ಅವರ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ.

ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ರೇವತಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ, ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ತಿಳಿದುಬಂದಿದೆ.

2020ರ ಏಪ್ರಿಲ್​ನಲ್ಲಿ ರೇವತಿ ಜೊತೆ ನಿಖಿಲ್​ ಕುಮಾರಸ್ವಾಮಿ ಸಪ್ತಪದಿ ತುಳಿದಿದ್ದರು. ಲಾಕ್​ಡೌನ್​ ನಿಯಮಗಳ ಅನುಸಾರ ಈ ಹೈಪ್ರೊಫೈಲ್​ ಕುಟುಂಬದಲ್ಲಿ ವಿವಾಹ ಸಮಾರಂಭ ನೆರವೇರಿತ್ತು. ಬಿಡದಿ ಬಳಿ ಇರುವ ಫಾರ್ಮ್​ಹೌಸ್​ನಲ್ಲಿ ರೇವತಿ ಮತ್ತು ನಿಖಿಲ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

ರೇವತಿ ಪ್ರೆಗ್ನೆಂಟ್​ ಎಂಬ ಸುದ್ದಿ ಇತ್ತೀಚಿನ ಕೆಲವು ತಿಂಗಳುಗಳಿಂದ ಕೇಳಿಬರುತ್ತಿತ್ತು. ಈ ವರ್ಷ ಜೂನ್​ನಲ್ಲಿ ಆ ಬಗ್ಗೆ ಸ್ವತಃ ನಿಖಿಲ್​ ಪ್ರತಿಕ್ರಿಯೆ ನೀಡಿದ್ದರು. ‘ಕೇಳಿಬರುತ್ತಿರುವ ಸುದ್ದಿ ನಿಜ. ನಾವು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದೇವೆ ಎಂದಿದ್ದರು.

ಶೀಘ್ರದಲ್ಲಿ ನಮ್ಮ ಕುಟುಂಬಕ್ಕೆ ಹೊಸ ಅತಿಥಿ ಬರಲಿದ್ದಾರೆ’ ಎಂದು ನಿಖಿಲ್​ ಹೇಳಿದ್ದರು. ಈಗ ಅವರಿಗೆ ಗಂಡು ಮಗು ಜನನವಾಗಿದೆ. ಮಗುವನ್ನು ಮುತ್ತಾತ, ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು, ತಾತ ಹೆಚ್ ಡಿ ಕುಮಾರಸ್ವಾಮಿ, ತಂದೆ ನಿಖಿಲ್ ಎತ್ತಿ ಮುದ್ದಾಡುತ್ತಿರುವ ಫೋಟೋ ಎಲ್ಲೆಡೆ ವೈರಲ್ ಆಗಿದೆ.  

More News

You cannot copy content of this page