ನವದೆಹಲಿ : ಹಣಕಾಸು ಸಚಿವಾಲಯದ ವೆಚ್ಚ ಇಲಾಖೆಯು, 2021-22ರ ಬಂಡವಾಳ ವೆಚ್ಚಕ್ಕಾಗಿ ರಾಜ್ಯಗಳಿಗೆ ವಿಶೇಷ ನೆರವು ಯೋಜನೆ ಯಡಿಯಲ್ಲಿ 8 ರಾಜ್ಯಗಳಿಗೆ 2,903.80ಕೋಟಿ ರೂಪಾಯಿಗಳ ಬಂಡವಾಳ ಯೋಜನೆಗಳಿಗೆ ಅನುಮೋದನೆ ನೀಡಿದೆ. ಸಚಿವಾಲಯವು 1,393.83 ಕೋಟಿ ರೂಪಾಯಿಗಳನ್ನು ಬಿಹಾರ,ಛತ್ತೀಸ್ಗಢ,ಹಿಮಾಚಲ ಪ್ರದೇಶ,ಮಧ್ಯಪ್ರದೇಶ,ಮಹಾರಾಷ್ಟ್ರ, ಪಂಜಾಬ್,ಸಿಕ್ಕಿಂ ಮತ್ತು ತೆಲಂಗಾಣ ರಾಜ್ಯಗಳಿಗೆ ಬಿಡುಗಡೆ ಮಾಡಿದೆ.
ಬಂಡವಾಳ ವೆಚ್ಚದ ಹೆಚ್ಚಾದ ಬೇಡಿಕೆಗಳು ಮತ್ತು ಕೋವಿಡ್ -19 ಸಾಂಕ್ರಾಮಿಕ ರೋಗದ 2 ನೇ ಅಲೆಯಿಂದಾಗಿ ರಾಜ್ಯಕ್ಕೆ ಅಗತ್ಯ ವಾದ ಸಂಪನ್ಮೂಲಗಳನ್ನು ಒದಗಿಸಲು 2021-22ರ ಬಂಡವಾಳ ವೆಚ್ಚಕ್ಕಾಗಿ ರಾಜ್ಯಗಳಿಗೆ ವಿಶೇಷ ನೆರವು ಯೋಜನೆಯನ್ನು 29 ಏಪ್ರಿಲ್,2021ರಂದು ಆರಂ ಭಿಸಲಾಯಿತು.ಈ ಯೋಜನೆಯಡಿ,2021-22ರ ಪ್ರಸಕ್ತ ವರ್ಷದಲ್ಲಿ ಒಟ್ಟಾರೆ ಮೊತ್ತವು ರೂ15, 000 ಕೋಟಿ ರೂಪಾಯಿಗಳನ್ನು ಮೀರದಂತೆ ರಾಜ್ಯ ಸರ್ಕಾರಗಳಿಗೆ 50ವರ್ಷಗಳ ಬಡ್ಡಿರಹಿತ ಸಾಲದ ರೂಪದಲ್ಲಿ ವಿಶೇಷ ನೆರವು ನೀಡ ಲಾಗುತ್ತಿದೆ.
ಭಾಗ -1: ಈ ಯೋಜನೆಯ ಭಾಗವು 8 ಈಶಾನ್ಯ ರಾಜ್ಯಗಳು ಅಂದರೆ ಅಸ್ಸಾಂ,ಅರುಣಾಚಲ ಪ್ರದೇಶ,ಮೇಘಾಲಯ,ಮಣಿಪುರ, ಮಿಜೋರಾಂ,ನಾಗಾಲ್ಯಾಂಡ್,ಸಿಕ್ಕಿಂ ಮತ್ತು ತ್ರಿಪುರಾ ಹಾಗೂ ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶ ರಾಜ್ಯಗಳಿನ್ನು ಒಳ ಗೊಂಡಿದೆ.ಈ ಭಾಗದ ಅಡಿಯಲ್ಲಿ ರೂ.7 ಈಶಾನ್ಯ ರಾಜ್ಯಗಳಲ್ಲಿ ತಲಾ 200 ಕೋಟಿ ಹಂಚಿಕೆ ಮಾಡಲಾಗಿದೆ ಮತ್ತು ರೂ. ಅಸ್ಸಾಂ, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡ ರಾಜ್ಯಗಳಿಗೆ ತಲಾ 400ಕೋಟಿಗಳನ್ನು ಹಂಚಿಕೆ ಮಾಡಲಾಗಿದೆ.
ಭಾಗ- 2 : ಭಾಗ -1ರಲ್ಲಿ ಇರದ ರಾಜ್ಯಗಳನ್ನು ಬಿಟ್ಟು ಉಳಿದ ರಾಜ್ಯಗಳು ಭಾಗ-2ರಲ್ಲಿ ಇವೆ. ಈ ಭಾಗಕ್ಕೆ ರೂಪಾಯಿ 7,400ಕೋಟಿ ಹಂಚಿಕೆ ಮಾಡಲಾಗಿದೆ.2021-22 ನೇ ಸಾಲಿನ 15 ನೇ ಹಣಕಾಸು ಆಯೋಗದ ಶಿಫಾರಸಿನ ಪ್ರಕಾರ ಈಮೊತ್ತವನ್ನು ಕೇಂದ್ರ ತೆರಿಗೆ ಗಳ ಪಾಲಿನ ಅನು ಗುಣವಾಗಿ ಈ ರಾಜ್ಯಗಳ ನಡುವೆ ಹಂಚಿಕೆ ಮಾಡಲಾಗಿದೆ.
ಭಾಗ- 3 : ಯೋಜನೆಯ ಈ ಭಾಗವು ರಾಜ್ಯ ಸರ್ಕಾರಗಳಿಗೆ ರಾಜ್ಯ ಸಾರ್ವಜನಿಕ ವಲಯದ ಉದ್ಯ ಮಗಳ(ಎಸ್ಪಿಎಸ್ಇ)ಖಾಸಗೀ ಕರಣ/ಮರುಹೂಡಿಕೆ ಮತ್ತು ಪ್ರೋತ್ಸಾಹಕಗಳನ್ನು ಒದಗಿ ಸುವುದು ಮತ್ತು ಸ್ವತ್ತುಗಳ ನಗದೀಕರಣ /ಮರುಬಳಕೆಗಾಗಿ.ಈ ಭಾಗದ ಅಡಿಯಲ್ಲಿ,ರಾಜ್ಯಗಳು ಭಾಗ-1 ಅಥವಾ ಭಾಗ-2ರ ಅಡಿಯಲ್ಲಿ ತಮ್ಮ ಹಂಚಿಕೆಯ ಮೇಲೆ ಮತ್ತು ಅದಕ್ಕಿಂತ ಹೆಚ್ಚಿನ ಯೋಜನೆ ಯ ಅಡಿಯಲ್ಲಿ ಹೆಚ್ಚುವರಿ ಹಣವನ್ನು ಒದಗಿಸಲಾಗುವುದು.ಯೋಜನೆಯ ಈ ಭಾಗಕ್ಕೆ ರೂ.5,000 ಕೋಟಿ ಮೊತ್ತವನ್ನು ನಿಗದಿ ಪಡಿಸಲಾಗಿದೆ.ಈ ಭಾಗಕ್ಕೆ,ಯಾವುದೇ ರಾಜ್ಯಕ್ಕೆ ನಿರ್ದಿಷ್ಟ ಹಂಚಿಕೆ ಇಲ್ಲ ಮತ್ತು ಹಣವನ್ನು ಮೊದಲು ಬಂದವರಿಗೆ ಆದ್ಯತೆಯ ಮೇಲೆ ನೀಡಲಾಗುವುದು.
ಇದೇ ರೀತಿಯ 2020-21ಕ್ಕೆ ಬಂಡವಾಳ ವೆಚ್ಚಕ್ಕಾಗಿ ರಾಜ್ಯಗಳಿಗೆ ವಿಶೇಷ ನೆರವು ಎನ್ನುವ ಯೋಜನೆಯನ್ನು ಹಣಕಾಸು ಸಚಿವಾ ಲಯವು ಕಳೆದ ಹಣಕಾಸು ವರ್ಷದಲ್ಲಿ ಆರಂಭಿಸಿತು.ಆ ಯೋಜ ನೆಯಡಿಯಲ್ಲಿ,ಬಂಡವಾಳ ವೆಚ್ಚದ ಪ್ರಸ್ತಾವನೆಗಳು 27ರಾಜ್ಯಗಳ ರೂ.11,911.79ಕೋಟಿ ಗಳನ್ನು ವೆಚ್ಚ ಇಲಾಖೆಯು ಅನುಮೋದಿಸಿದೆ ಮತ್ತು 2020-21ರಲ್ಲಿ ರೂ.11,830.29 ಕೋಟಿಗಳ ನ್ನು ರಾಜ್ಯಗಳಿಗೆ ಬಿಡುಗಡೆ ಮಾಡಲಾಗಿದೆ.




