ಕೊವಿಡ್ ಎರಡನೇ ಅಲೆ ಕಾಣಿಸಿಕೊಂಡ ಬಳಿಕ, ಈಗ ಸ್ಯಾಂಡಲ್ವುಡ್ ನಲ್ಲಿ ಈಗ ಚೇತರಿಕೆ ಕಂಡುಬಂದಿದೆ. ರಾಜ್ಯ ಸರ್ಕಾರ ಚಿತ್ರಮಂದಿರಗಳಲ್ಲಿ ಹೌಸ್ ಫುಲ್ ಗೆ ಅವಕಾಶ ನೀಡುತ್ತಿದ್ದಂತೆ ಗಾಂಧಿನಗರಕ್ಕೆ ಹೊಸ ಕಳೆ ಬಂದಿದೆ.
ಸರ್ಕಾರದ ಹೊಸ ಘೋಷಣೆಯಾಗುತ್ತಿದ್ದಂತೆ ದೊಡ್ಡ ದೊಡ್ಡ ಸ್ಟಾರ್ ಗಳ ದೊಡ್ಡ ಬಜೆಟ್ ನ ಸಿನಿಮಾಗಳ ರಿಲೀಸ್ ಗೆ ಡೇಟ್ ಘೋಷಣೆ ಮಾಡಿಕೊಳ್ಳುತ್ತಿವೆ. ಈಗ ಮೂವರು ಸ್ಟಾರ್ ನಟರ ಚಿತ್ರಗಳು ರಿಲೀಸ್ ಗೆ ರೆಡಿ ಆಗಿವೆ.
ದುನಿಯಾ ವಿಜಯ್ ನಿರ್ದೇಶಿಸಿ, ನಟಿಸಿರುವ ‘ಸಲಗ’ ಸಿನಿಮಾ ಈಗಾಗಲೇ ಹಾಡು ಹಾಗೂ ಪೋಸ್ಟರ್ ಗಳ ಮೂಲಕ ಸಾಕಷ್ಟು ಹವಾ ಸೃಷ್ಟಿ ಮಾಡಿದೆ. ಈ ಸಿನಿಮಾ ಮೂಲಕ ದುನಿಯಾ ವಿಜಯ್ ಡೈರೆಕ್ಟರ್ ಆಗಿ ಬಡ್ತಿ ಪಡೆದಿದ್ದಾರೆ.
ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಈಗಾಗಲೇ ಸಿನಿಮಾ ರಿಲೀಸ್ ಆಗಿರಬೇಕಿತ್ತು. ಆದರೆ, ಕೊವಿಡ್ ಕಾರಣದಿಂದ ಸಿನಿಮಾ ರಿಲೀಸ್ ದಿನಾಂಕ ಮುಂದೂಡಲ್ಪಡುತ್ತಲೇ ಇತ್ತು. ಈಗ ‘ಸಲಗ’ ರಿಲೀಸ್ ಆಗೋಕೆ ಮುಹೂರ್ತ ಫಿಕ್ಸ್ ಆಗಿದೆ. ಅಕ್ಟೋಬರ್ 14ರಿಂದ ಸಲಗದ ಅಬ್ಬರ ಸಿನೆಮಾ ಮಂದಿರಗಳಲ್ಲಿ ಆರಂಭಗೊಳ್ಳಲಿದೆ.
ಕೊವಿಡ್ ಎರಡನೇ ಅಲೆ ಕಾಣಿಸಿಕೊಂಡ ನಂತರದಲ್ಲಿ ರಿಲೀಸ್ ಆಗುತ್ತಿರುವ ದೊಡ್ಡ ಬಜೆಟ್ ನ ಮೊದಲ ಸಿನಿಮಾ ದುನಿಯಾ ವಿಜಯ್ ಅವರ ಸಲಗ.