ಪ್ರವಾಸೋದ್ಯಮ ಉದ್ಯೋಗ ಮತ್ತು ಆದಾಯ ವೃದ್ಧಿಸಲು ಮಿಷನ್ – 25 ಘೋಷಣೆ : ಸಚಿವ ಆನಂದ್ ಸಿಂಗ್

ಬೆಂಗಳೂರು : ಕೊರೊನಾದ ಎರಡು ಅಲೆಗಳಿಂದ ಪ್ರವಾಸೋದ್ಯಮ ಸಾಕಷ್ಟು ಸಂಕಷ್ಟಕ್ಕೆ ಸಿಲುಕಿದೆ. ಇದರಿಂದ ಹೋಟೆಲ್ ಉದ್ಯಮ, ಸಣ್ಣ ಪುಟ್ಟ ಕೆಲಸ ಮಾಡುವವರು, ಗೈಡ್ ಗಳು ತೊಂದರೆಗೆ ಒಳಗಾಗಿದ್ದಾರೆ, ಇವರಿಗೆ ಅಗತ್ಯ ಸಹಕಾರ ನೀಡಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಪ್ರವಾಸಿ ತಾಣಗಳ ಚಿತ್ರೀಕರಣಕ್ಕೆ ಸಿನೆಮಾ ರಂಗದವರಿಗೆ ಸಿಂಗಲ್ ವಿಂಡೊ ವ್ಯವಸ್ಥೆಯನ್ನು ಜಾರಿ ಮಾಡಲು ಅಗತ್ಯ ಕ್ರಮಕೈಗೊಳ್ಳಲಾಗಿದೆ ಎಂದರು.
ಪ್ರವಾಸೋದ್ಯಮ ವಲಯ ಉದ್ಯೋಗ ಮತ್ತು ಆದಾಯ ಸೃಷ್ಟಿಸುವ ವಲಯವಾಗಿದೆ, 30 ಲಕ್ಷ ನೇರ ಮತ್ತು ಪರೋಕ್ಷ ಉದ್ಯೋಗಿಗಳು ಅವಲಂಬಿತರಾಗಿದ್ದಾರೆ. ಇದಕ್ಕಾಗಿ ವಿಷನ್ 25 ಘೋಷಣೆ ಮಾಡಲಾಗಿದೆ. 2025 ಕ್ಕೆ ಪ್ರವಾಸೋದ್ಯಮ ಕೊಡುಗೆ ಜಿಡಿಪಿ ಗೆ ಶೇ 20 ರಷ್ಟಾಗಲು ಎಲ್ಲ ರೀತಿಯ ಕ್ರಮಕೈಗೊಳ್ಳಲಾಗಿದೆ ಎಂದರು.
ಕರ್ನಾಟಕದಲ್ಲಿ ಪ್ರವಾಸೋದ್ಯಮ ವಲಯದಲ್ಲಿ ಅನುಕೂಲಕರ ವಾತಾವಾರಣ ಸೃಷ್ಟಿಸಲು ಬಂಡವಾಳ ಆಕರ್ಷಿಸಲು ಹೂಡಿಕೆದಾರರ ಸಭೆ ಕರೆಯಲಾಗಿದೆ. ಫೆಬ್ರವರಿ 23.25 2022ನಲ್ಲಿ ಪ್ರವಾಸೋದ್ಯಮ ಎಕ್ಸಪೋ ನಡೆಸಲಾಗುವುದು ಎಂದು ವಿವರಿಸಿದರು.
ಕೋವಿಡ್ ಸಮಸ್ಯೆಯಿಂದ ಪ್ರವಾಸೋದ್ಯಮ ಇಲಾಖೆಯೊದರಲ್ಲೇ ಸರ್ಕಾರಕ್ಕೆ ೨೫ ಸಾವಿರ ಕೋಟಿ ನಷ್ಟವಾಗಿದೆ ಎಂದು ತಿಳಿಸಿದ ಆನಂದ್ ಸಿಂಗ್, ಹೋಟೆಲ್, ರೆಸಾರ್ಟ್ ಆಸ್ತಿ ತೆರಿಗೆ ೫೦% ಕಡಿತಗೊಳಿಸಿ, ಹೋಟೆಲ್ ಪರವಾನಗಿ ಶುಲ್ಕ ಮನ್ನಾ ಹಾಗೂ ಏಪ್ರಿಲ್, ಜೂನ್ ವಿದ್ಯುತ್ ಶುಲ್ಕ ಮನ್ನಾ ಮಾಡಲಾಗಿದೆ, ೩೬೪ ಪ್ರವಾಸಿ ಗೈಡ್ ಗಳಿಗೆ ೫೦೦೦ ಸಹಾಯಧನ ನೀಡಲಾಗಿದೆ ಎಂದುತಿ ಳಿಸಿದರು
ಫೆಬ್ರವರಿಯಲ್ಲಿ ಕೈಟ್ ಉತ್ಸವ ಆಚರಣೆ ಮಾಡಲು ತೀರ್ಮಾನಿಸಲಾಗುವುದು ಎಂದು ತಿಳಿಸಿದ ಅವರು, ಟೂರಿಸಂ ಸೊಸೈಟಿ ಸಹಯೋಗದಲ್ಲಿ ಆಯೋಜಿಸಲಾಗಿದೆ, ೨೪ರಿಂದ ೨೬ ರವರೆಗೆ ಕೈಟ್ ಉತ್ಸವ ನಡೆಯಲಿದೆ ಎಂದು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ತಿಳಿಸಿದರು.
ಸಿನಿಮಾದವರಿಗೆ ಕೆಲವು ಕಡೆ ಚಿತ್ರೀಕರಣಕ್ಕೆ ನಿರ್ಬಂಧವಿದೆ, ಈ ಹಿನ್ನೆಲೆಯಲ್ಲಿ ಸಿಂಗಲ್ ವಿಂಡೋ ವ್ಯವಸ್ಥೆಯಡಿ ಅವಕಾಶ ನೀಡುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು, ಪ್ರಾಚ್ಯವಸ್ತು, ಅರಣ್ಯ, ಪ್ರವಾಸೋದ್ಯಮ ಇಲಾಖೆ ಈ ಮೂರು ಇಲಾಖೆಗಳ ಅನುಮತಿ ಏಕಗವಾಕ್ಷಿ ವ್ಯವಸ್ಥೆಯಡಿ ನೀಡಲಾಗುವುದು ಎಂದು ತಿಳಿಸಿದರು.

More News

You cannot copy content of this page