ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣರಿಂದ ಮೈಸೂರು ದಸರಾ ಉದ್ಘಾಟನೆ : ನಾಡಹಬ್ಬಕ್ಕೆ ರಾಜಕೀಯ ರಂಗು

ಬೆಂಗಳೂರು : ಇತಿಹಾಸ ಪ್ರಸಿದ್ದ ಮೈಸೂರು ದಸರಾ ಉದ್ಘಾಟನೆಯನ್ನು ಹಿರಿಯ ರಾಜಕಾರಣಿ,ಮುತ್ಸದ್ದಿಯನ್ನು ರಾಜ್ಯ ಸರ್ಕಾರ ಆಯ್ಕೆ ಮಾಡಿದೆ.ಆಮೂಲಕ ಹೊಸ ಸಂಸ್ಕೃತಿಗೆ ಬಿಜೆಪಿ ಸರ್ಕಾರ ನಾಂದಿ ಹಾಡಿದೆ.

ಮಾಜಿ ಮುಖ್ಯಮಂತ್ರಿ,ಕೇಂದ್ರದ ಮಾಜಿ ಸಚಿವ,ಮಾಜಿ ರಾಜ್ಯಪಾಲ ಎಸ್.ಎಂ.ಕೃಷ್ಣ ಅವರು ಈ ಬಾರಿಯ ಮೈಸೂರು ದಸರಾ ಉದ್ಘಾಟನೆ ಮಾಡಲಿದ್ದಾರೆ.ಇದೇ ಪ್ರಥಮ ಬಾರಿಗೆ ರಾಜಕಾರಣಿಯೊಬ್ಬರಿಂದ ದಸರಾ ಗೆ ಚಾಲನೆ ನೀಡುತ್ತಿರುವುದು ವಿವಾದ ಮತ್ತು ವಿಶೇಷತೆಗೆ ಕಾರಣವಾಗಿದೆ.

ರಾಷ್ಟ್ರಪತಿ ರಮನಾಥ್ ಕೋವಿಂದ್ ಅವರಿಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಪತ್ರ ಬರೆದು ದಸರಾ ಉದ್ಘಾಟನೆಗೆ ಆಗ ಮಿಸಬೇಕೆಂದು ಮನವಿ ಮಾಡಿದ್ದರು.ಆದರೆ ರಾಷ್ಟ್ರಪತಿ ಕಚೇರಿಯಿಂದ ಅಧಿಕೃತ ಸಂದೇಶ ನಿನ್ನೆ ಮುಖ್ಯಮಂತ್ರಿ ಅವರ ಕೈಸೇರಿದೆ. ಅಕ್ಟೋಬರ್ 7ರಂದು ಚಾಮರಾಜನಗರದ ಬಿಳಿಗಿರಿ ರಂಗನ ಬೆಟ್ಟಕ್ಕೆ ಆಗಮಿಸಲಿರುವ ರಾಷ್ಟ್ರಪತಿಗಳು ಬಳಿಕ ಚಾಮರಾಜನಗರ ದಲ್ಲಿ ಆಸ್ಪತ್ರೆ ಉದ್ಘಾಟಿಸಿ ಬಳಿಕ ಶೃಂಗೇರಿಗೆ ತೆರಳಲಿದ್ದಾರೆ.ಹೀಗಾಗಿ ಸಮಾಯಾವಕಾಶ ಹೊಂದಾಣಿಕೆಯಾಗದ ಕಾರಣ ದಸರಾ ಉದ್ಘಾಟನೆಗೆ ಆಗಮಿಸಲು ಸಾಧ್ಯವಿಲ್ಲವೆಂದು ರಾಷ್ಟ್ರಪತಿ ಭವನ ತಿಳಿಸಿದೆ.

ಇದರಿಂದಾಗಿ ನಿನ್ನೆ ಸಂಜೆಯವರೆಗೂ ದಸರಾ ಉದ್ಘಾಟಕರಾಗಿ ಯಾರನ್ನು ಆಯ್ಕೆ ಮಾಡದಿದ್ದ ಮುಖ್ಯಮಂತ್ರಿಗಳು ತಂಡರಾತ್ರಿ ಸಚಿವ ಎಸ್.ಟಿ.ಸೋಮಶೇಖರ್ ಜೊತೆ ಸಭೆ ನಡೆಸಿ ಎಸ್.ಎಂ.ಕೃಷ್ಣಾ ರಿಂದ ದಸರಾ ಉದ್ಘಾಟನೆಗೆ ಆಯ್ಕೆ ಮಾಡಲು ತೀರ್ಮಾನಿ ಸಲಾಗಿದೆ ಎನ್ನಲಾಗಿದೆ.ಎಸ್.ಎಂ.ಕೃಷ್ಣಾರ ಹೆಸರಿನ ಬದಲು ಕೋವಿಡ್ ಲಸಿಕೆ ಸಿದ್ದಪಡಿಸಿದ ವೈದ್ಯರು,ವೈರಾಣು ತಜ್ಞರು,ಕೋವಿಡ್ ಸಂಬಂಧಿತ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದವರಿಂದ ದಸರಾ ಉದ್ಘಾಟನೆಗೆ ತೀರ್ಮಾನಿಸಲಾಗಿದೆ.ಆದರೆ ಮೈಸೂರಿನ ಸಂಸ್ಕೃತ ಪತ್ರಿಕೆಯ ಮಾಲೀಕರೋರ್ವರು ಎಸ್.ಎಂ.ಕೃಷ್ಣಾರಿಂದ ಉದ್ಘಾಟನೆ ಮಾಡಿಸುವಂತೆ ಸೂಚಿಸಿದ್ದರು.ಅದರಂತೆ ಬಿಜೆಪಿ ಯ ಹಿರಿಯ ನಾಯಕ ಹಾಗೂ ರಾಜಕೀಯ ಲಾಭ ನಷ್ಟದ ಲೆಕ್ಕಾಚಾರವನ್ನು ತಲೆಯಲ್ಲಿಟ್ಟುಕೊಂಡು ಅವರನ್ನು ಆಯ್ಕೆ ಮಾಡಿ ಮುಖ್ಯಮಂತ್ರಿ ಅವರು ಪ್ರಕಟಿಸಿದ್ದಾರೆ.

ಸಂಜೆ ಮುಖ್ಯಮಂತ್ರಿ ಗೃಹ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಈ ಮಾಹಿತಿಯನ್ನು ಪ್ರಕಟಿಸಿದರು.ಈ ಭಾರಿಯ ದಸರಾ ಮಹೋತ್ಸವವನ್ನು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ‌ ಅವರು ಉದ್ಘಾ ಟನೆಗೆ ಆಯ್ಕೆ ಮಾಡಲಾಗಿದೆ.ಅವರು ಕೇವಲ ಮುಖ್ಯಮಂತ್ರಿ ಮಾತ್ರವಲ್ಲದೆ,ರಾಜ್ಯಕ್ಕೆ ಹಲವು ಉತ್ತಮ ಸೇವೆಗಳನ್ನು ಸಲ್ಲಿಸಿದ್ದಾರೆ. ಓರ್ವ ಮುತ್ಸದ್ಧಿ ರಾಜಕಾರಣಿ,ರಾಜ್ಯ ಮತ್ತು ದೇಶಕ್ಕೆ ಅವರು ಸಲ್ಲಿಸಿದ ಕೊಡುಗೆಯನ್ನು ಗಮನದಲ್ಲಿರಿಸಿಕೊಂಡು ಆಯ್ಕೆ ಮಾಡ ಲಾಗಿದೆ ಎಂದು ಅವರು ತಿಳಿಸಿದರು.

ಎಸ್.ಎಂ.ಕೃಷ್ಣ ಅವರು ರಾಜ್ಯದಲ್ಲಿ,ಕೇಂದ್ರದಲ್ಲಿ ಎಲ್ಲಾ ಉನ್ನತ ಸ್ಥಾನಮಾನಗಳನ್ನು ಅನುಭವಿಸಿ ನಂತರ ಕಾಂಗ್ರೆಸ್ ಪಕ್ಷ ತೊರೆ ದು ಬಿಜೆಪಿಗೆ ಸೇರಿದ್ದರು.ಆದರೆ ಇಂತಹ ಹಿರಿಯ ರಾಜಕಾರಣಿಗೆ ಬಿಜೆಪಿಯಲ್ಲಿ ಯಾವುದೇ ಪ್ರಮುಖ ಸ್ಥಾನಮಾನ ನೀಡದೆ ಕಡೆಗಣಿ ಸಲಾಗಿತ್ತು ಎಂಬ ಆರೋಪವಿತ್ತು.ಅಂತೆಯೇ ಅವರು ಸಹ ಚುನಾವಣಾ ಪ್ರಚಾರಕ್ಕೆ ಸೀಮಿತರಾಗಿದ್ದರಲ್ಲದೆ,ಸಕ್ರಿಯ ರಾಜಕೀಯ ಕಾರಣದಿಂದ  ದೂರವೇ ಉಳಿದಿದ್ದರು.

ಎಸ್.ಎಂ.ಕೃಷ್ಣಾ ಅವರು ರಾಜ್ಯಕ್ಕೆ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಅವರನ್ನ ದಸರಾ ಉದ್ಘಾಟನೆಗೆ ಆಯ್ಕೆ ಮಾಡಲಾಗಿದೆ ಎನ್ನುವುದು ಬಿಜೆಪಿ ಸರ್ಕಾರದ ವಾದ.ಇದುವರೆಗೆ ಸಾಹಿತಿಗಳು,ಲೇಖಕರು,ಬುದ್ಧಿ ಜೀವಿಗಳು,ಸ್ವಾತಂತ್ರ್ಯ ಹೋರಾಟಗಾರರು,ರಾಷ್ಟ ಮತ್ತು ಅಂತರ ರಾಷ್ಟ್ರೀಯ ಖ್ಯಾತಿಯ ಗಣ್ಯರಿಂದ ಉದ್ಘಾಟನೆ ಮಾಡುತ್ತಾರೆಂಬ ಮಾತು ಸುಳ್ಳಾಗಿದೆ.ಅದಕ್ಕೆ ತದ್ವಿರುದ್ಧವಾಗಿ ಈ ಭಾರಿಯ ಸಾಂಸ್ಕೃತಿಕ ಉತ್ಸವವನ್ನು ರಾಜಕಾರಣಿಯೊಬ್ಬರು ಉದ್ಘಾಟನೆ ಮಾಡುತ್ತಿರುವುದು ವಿಪರ್ಯಾಸವೇ ಸರಿ.

ವಿಚಿತ್ರ ಮತ್ತು ವಿಪರ್ಯಾಸ ಎಂದರೆ  ಎಸ್.ಎಂ.ಕೃಷ್ಣ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಎರಡು ವರ್ಷ ಸರಳ  ದಸರಾ ಉತ್ಸ ವ ಆಚರಣೆ ಮಾಡಲಾಗಿತ್ತು.ಒಂದು ವರ್ಷ ಭೀಕರ ಬರಗಾಲದಿಂದ,ಮರು ವರ್ಷ ವರನಟ ಡಾ.ರಾಜ್ ಕುಮಾರ್ ಅವರ ಅಪಹರಣ ದಿಂದಾಗಿ ಸರಳ ದಸರಾ ನಡೆಸಲಾಗಿತ್ತು.ಈ ಭಾರಿ ಅವರೇ ಸರಳ ದಸರಾಕ್ಕೆ ಚಾಲನೆ ನೀಡುತ್ತಿರುವುದು ಬಿಜೆಪಿ ಮತ್ತು ಎಸ್.ಎಂ. ಕೃಷ್ಣಾ ಪಾಲಿಗೆ ಅದೃಷ್ಟವೇ ಸರಿ.

ಮತ್ತೊಂದು ವಿಚಾರವೆಂದರೆ ಎಸ್.ಎಂ.ಕೃಷ್ಣ ಅವರನ್ನು ಆಯ್ಕೆ ಮಾಡಿದರೆ ಕಾಂಗ್ರೆಸ್ ಸೇರಿದಂತೆ ವಿಪಕ್ಷ ಗಳು ವಿರೋಧ ಮಾಡು ವುದಿಲ್ಲವೆಂಬ ನಂಬಿಕೆ ಸರ್ಕಾರದ್ದು.ಇನ್ನು ಆಶ್ಚರ್ಯಕರ ವಿಚಾರವೆಂದರೆ ಈ ಭಾರಿ ಎಸ್.ಎಂ.ಕೃಷ್ಣ,ಮುಂದಿನ ವರ್ಷ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು  ದಸರಾ ಉದ್ಘಾಟನೆಗೆ ಆಯ್ಕೆ ಮಾಡಲು ವೇದಿಕೆ ಸಿದ್ದಗೊಳಿಸಿದ್ದಾರೆಂಬ ಮಾತುಗಳು ಕೇಳಿ ಬರುತ್ತಿವೆ.

More News