ಬೆಂಗಳೂರು : ತಾಲಿಬಾನಿಯರು ಎಲ್ಲಾ ಪಾರ್ಟಿಯಲ್ಲೂ ಇದ್ದಾರೆ. ಯಾರು ಯಾರನ್ನ ಮುಗಿಸಿದ್ದಾರೆ ಎನ್ನುವುದು ಪ್ರತಿಯೊಬ್ಬರಿಗೂ ತಿಳಿದಿದೆ ಎಂದು ಮಾಜಿ ಸಚಿವ ವಿಶ್ವನಾಥ್ ಹೇಳಿಕೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಲಿಬಾನ್ ಗಳು ಬಿಜೆಪಿ ಸೇರಿದಂತೆ ಎಲ್ಲಾ ಪಾರ್ಟಿಯಲ್ಲೂ ಇದ್ದಾರೆ ಎಂದು ತಿಳಿಸಿದರು. ಯಾವ ನಾಯಕರು ಯಾರನ್ನು ಹೇಗೆ ನಿರ್ನಾಮ ಮಾಡಿದ್ದಾರೆ ಅನ್ನೋದು ಜನಸಾಮಾನ್ಯರಿಗೆ ತಿಳಿದಿದೆ ಎಂದರು.
ಅವರು ಹೇಳಿರುವ ಹೇಳಿಕೆ ತಮ್ಮ ಪಕ್ಷದಲ್ಲಿರುವ ತಾಲಿಬಾನಿಯರು ಯಾರು, ವಿಶ್ವನಾಥ್ ಯಾರನ್ನು ಗುರಿಮಾಡಿಈಹೇಳಿಕೆ ನೀಡಿದ್ದಾರೆ ಅನ್ನೋದು ಮಾತ್ರ ಬಹಿರಂಗಪಡಿಸಲಿಲ್ಲ. ಆರ್ ಎಸ್ ಎಸ್ ಅನ್ನು ತಾಲಿಬಾನ್ ಗೆ ಹೋಲಿಕೆ ಮಾಡಿರುವ ಸಿದ್ದರಾಮಯ್ಯ ಹೇಳಿಕೆಗೆ ನನ್ನ ಸಂಪೂರ್ಣ ವಿರೋಧ ಇದೆ ಎಂದು ತಿಳಿಸಿದರು.
ಶೆಪರ್ಡ್ ಇಂಡಿಯನ್ ಇಂಟರ್ನ್ಯಾಷನಲ್ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಮಾಜಿ ಸಿದ್ದರಾಮಯ್ಯ ಬರ್ತಾರಾ ಅನ್ನೋ ಪ್ರಶ್ನೆಗೆ ಉತ್ತರಿಸಿದ ವಿಶ್ವನಾಥ್, ನಾವು ಸಿದ್ದರಾಮಯ್ಯ ಅವರನ್ನು ಸಮಾವೇಶಕ್ಕೆ ಕರೆಯುತ್ತೇವೆ, ಬರುವುದು ಬಿಡುವುದು ಅವರಿಗೆ ಬಿಟ್ಟದ್ದು ಎಂದು ತಿಳಿಸಿದರು.
ಅವರನ್ನು ಎಲ್ಲಾ ಕಾರ್ಯಕ್ರಮಗಳಿಗೂ ಕರೆದಿದ್ದೇವೆ. ಅವರನ್ನು ಯಾರೂ ದೂರ ಇಟ್ಟಿಲ್ಲ, ಅವರು ಬ್ಯುಸಿ ಇರಬಹುದು ಎಂದು ಸ್ಪಷ್ಟಪಡಿಸಿದರು. ನಾನಾಗಲೀ ಸಿದ್ದರಾಮಯ್ಯ ಆಗಲಿ ಸಮುದಾಯದಿಂದಲೇ ಸಾರ್ವಜನಿಕ ಜೀವನದಲ್ಲಿ ಬೆಳೆದಿದ್ದೇವೆ, ಸಿದ್ದರಾಮಯ್ಯ ಹಿಂದುಳಿದ ವರ್ಗಗಳ ನಾಯಕ ಎಂದು ತಿಳಿಸಿದರು.
ಶೆಪರ್ಡ್ ಇಂಡಿಯಾ ಇಂಟರ್ ನ್ಯಾಷನಲ್ ನ ಆರನೇ ವಾರ್ಷಿಕೋತ್ಸವ ಸಮಾರಂಭ ಗುಜರಾತ್ ನ ಅಹಮದ್ ಬಾದ್ ನಗರದಲ್ಲಿ ನಡೆಯಲಿದೆ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷ ಹೆಚ್. ವಿಶ್ವನಾಥ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುರುಬ ಜನಾಂಗದಲ್ಲಿ ಇತಿಹಾಸ ಕುರಿತು ಅರಿವು ಮೂಡಿಸಲು 2015 ಅಕ್ಟೋಬರ್ ಎರಡರಂದು ಸಂಘಟನೆ ವಿದ್ಯುಕ್ತವಾಗಿ ಪ್ರಾರಂಭಿಸಲಾಗಿತ್ತು ಎಂದು ತಿಳಿಸಿದರು. ವಿವಿಧ ಹೆಸರುಗಳಿಂದ ಭಾರತದಲ್ಲಿ ಬದುಕು ಮಾಡುತ್ತಿರುವ 12ಕೋಟಿಗೂ ಅಧಿಕ ಸಮುದಾಯವನ್ನು ಒಂದೇ ವೇದಿಕೆಗೆ ತರುವ ಪ್ರಮಾಣಕ ಪ್ರಯತ್ನಕ್ಕಾಗಿ ಶೆಪರ್ಡ್ ಇಂಡಿಯಾ ಇಂಟರ್ ನ್ಯಾಷನಲ್ ಹುಟ್ಟು ಹಾಕಲಾಗಿದೆ ಎಂದರು.
ಅಂದು ನಡೆಯುವ ಕಾರ್ಯಕ್ರಮದಲ್ಲಿ ಕೇಂದ್ರ ಸರ್ಕಾರದ ಉಕ್ಕು ಮತ್ತು ಗಣಿ ರಾಜ್ಯ ಸಚಿವರಾದ ಘಗನ್ ಸಿಂಗ್, ಕಾನೂನು ರಾಜ್ಯ ಸಚಿರಾದ ಎಸ್.ಪಿ.ಸಿಂಗ್ ಬಘೇರ್, ಲೋಕೋಪಯೋಗಿ ರಾಜ್ಯ ಸಚಿವ ದತ್ತಾತ್ರೇಯ ಭರಣಿ, ಗುಜರಾತ್ ನ ಉಪ ಸಭಾಪತಿ ಜೆಟಾ ಬಾಯಿ ಬಾರವಾಡೆ ರಾಜ್ಯದ ಕುರುಬ ಸಮುದಾಯದ ಮುಖಂಡರಾದ ಎಚ್.ಎಂ.ರೇವಣ್ಣ ಸೇರಿದಂತೆ ಅನೇಕರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಎಸ್ ಎಂ ಕೃಷ್ಣ ದಸರಾ ಉದ್ಘಾಟಿಸುವುದು ಸ್ವಾಗತ
ಮೈಸೂರು ದಸರಾ ಉತ್ಸವಕ್ಕೆ ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಅವರಿಂದ ಉದ್ಘಾಟಿಸಿತ್ತಿರುವುದು ಅತ್ಯಂತ ಸ್ವಾಗತಾರ್ಹವಾದದ್ದು. ಮೈಸೂರು ದಸರಾವನ್ನು ಅತ್ಯಂತ ಚಂದವಾಗಿ ವೈವಿದ್ಯಮಯವಾಗಿ ಆಚರಿಸಲು ಕಾರಣಕರ್ತರು ಎಂದು ಹೇಳಿದರು.