6 ತಿಂಗಳೂಳಗೆ ಮೀಸಲಾತಿ ನೀಡುವ ಭರವಸೆ: ಸತ್ಯಾಗ್ರಹ ಕೈಬಿಟ್ಟ ಬಸವ ಮೃತ್ಯುಂಜಯ ಸ್ವಾಮೀಜಿ

ಬೆಂಗಳೂರು : ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ಹಾಗೂ 2 ಎ ವರ್ಗಕ್ಕೆ ಸೇರಿಸುವ ಸಂಬಂಧ ಎರಡು ದಿನಗಳಲ್ಲಿ ರಾಜ್ಯ ಸರ್ಕಾರ ಬೇಡಿಕೆ ಈಡೇರಿಸದಿದ್ದಲ್ಲಿ ಧರಣಿ ಸತ್ಯಾಗ್ರಹ ಕೈಗೊಳ್ಳುವುದಾಗಿ ಪಂಚಮಸಾಲಿ ಪೀಠಾಧಿಪತಿಗಳಾದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ನೀಡಿದ್ದ ಹೇಳಿಕೆಯಿಂದ ಹಿಂದೆ ಸರಿದಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಇಂದು ಭೇಟಿಯಾಗಿ ಸುದೀರ್ಘ ಮಾತುಕತೆ ನಡೆಸಿದ ಬಳಿಕ ಸ್ವಾಮೀಜಿ ಈ ಹೇಳಿಕೆನೀಡಿದ್ದಾರೆ. ಸರ್ಕಾರ ಮೀಸಲಾತಿಯನ್ನ 6 ತಿಂಗಳೊಳಗೆ ಈಡೇರಿಸುವ ಭರವಸೆ ನೀಡಿರುವ ಹಿನ್ನೆಲೆಯಲ್ಲಿ ಸತ್ಯಾಗ್ರಹವನ್ನು ಹಿಂಪಡೆದಿದ್ದೇವೆ ಆದರೆ, ಜಿಲ್ಲಾ ಮಟ್ಟದ ಅಭಿಯಾನವನ್ನು ಮುಂದುವರೆಸುವುದಾಗಿ ಅವರು ತಿಳಿಸಿದ್ದಾರೆ.

ಹಿಂದುಳಿದ ವರ್ಗ ಆಯೋಗದ ವರದಿ ಬಂದ 3 ತಿಂಗಳ ಒಳಗೆ ಮೀಸಲಾತಿ ನೀಡುವ ಭರವಸೆಯನ್ನು ಮುಖ್ಯಮಂತ್ರಿ ಅವರು ನೀಡಿದ್ದಾರೆ ಈ ಹಿನ್ನೆಲೆಯಲ್ಲಿ ಮೂರು ತಿಂಗಳು ಕಾದು ನೋಡಲಾಗುವುದು, ಮೀಸಲಾತಿ ನೀಡದಿದ್ದರೆ ಹೋರಾಟ ಮುಂದುವರೆಸಲಾಗುವುದು ಎಂದು ಸ್ವಾಮೀಜಿ ತಿಳಿಸಿದ್ದಾರೆ.

ಅಭಿಯಾನ ಮೂಲಕ ಹೋರಾಟ ಜೀವಂತವಾಗಿರುತ್ತೆ, ತಾಲೂಕು ಮಟ್ಟದಲ್ಲಿ ಅಭಿಯಾನ ಮುಂದುವರೆಯುತ್ತೆ. 3 ತಿಂಗಳಲ್ಲಿ ಮೀಸಲಾತಿ ಸಿಗದಿದ್ದರೆ ಸತ್ಯಾಗ್ರಹ ಮುಂದುವರೆಸ್ತೇವೆ ಎಂದು ಜಯಮೃತ್ಯುಂಜಯ ಸ್ವಾಮೀಜಿ ತಿಳಿಸಿದ್ದಾರೆ.

ಹೋರಾಟಕ್ಕೆ ಮತ್ತೊಂದು ಹೆಸರು ಜಯ ಮೃತ್ಯುಂಜಯ ಸ್ವಾಮೀಜಿ, ಅವರೀಗೆ ಪಾದಯಾತ್ರೆ ಕೈ ಬಿಡಿ ಎಂದು ಸ್ವಾಮಿಜಿಯವರಿಗೆ ಮನವಿ ಮಾಡಿದ್ವಿ, ಪಾದಯಾತ್ರೆ ಕೈ ಬಿಡಬೇಕಾದರೆ ಮೀಸಲಾತಿ ಘೋಷಣೆ ಮಾಡಿ ಎಂದು ಹೇಳಿದ್ರು. ಅದೇ ರೀತಿಯಲ್ಲಿ ಇಂದು ಮುಖ್ಯಮಂತ್ರಿ ಅವರೊಂದಿಗೆ ಸುಮಾರು  1 ಗಂಟೆ 10 ನಿಮಿಷ ಸುದೀರ್ಘ ಚರ್ಚೆ ಮಾಡಲಾಯಿತು. ಈ ಸಂದರ್ಭದಲ್ಲೂ ಸ್ವಾಮೀಜಿ ತಮ್ಮ ಹಕ್ಕು ಒತ್ತಾಯ ಮಾಡಿದ್ದಾರೆ ಎಂದು ಸಚಿವ ಸಿ ಸಿ ಪಾಟೀಲ್ ತಿಳಿಸಿದ್ದಾರೆ.

ನಾವು ಹೋರಾಟ ಕೈಬಿಡಬೇಕೆಂದು ಮನವಿ ಮಾಡಿದ್ದೇವು. ಹಿಂದೆ ಮೀಸಲಾತಿಯ ನಿರ್ಧಾರ ಕೇಂದ್ರದ ಕೈಯಲ್ಲಿತ್ತು, ಈಗ ರಾಜ್ಯ ಸರ್ಕಾರಕ್ಕೆ ಅವಕಾಶವಿದೆ. ಹಿಂದುಳಿದ ವರ್ಗದ ಆಯೋಗದ ವರದಿ ಬಂದ ತಕ್ಷಣವೇ ಸಿಎಂ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತಾರೆ. ಮೀಸಲಾತಿ ಸಿಗುವ ದಿನ  ಹತ್ತಿರ ಬಂದಿದೆ. ನಾಳೆ ನ್ಯಾಯಾಲಯದಲ್ಲಿ ಸರ್ಕಾರದ ನಿಲುವನ್ನ ಯಾರು ಪ್ರಶ್ನೆ ಮಾಡಬಾರದು. ಆ ರೀತಿಯ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಸಿ ಸಿ ಪಾಟೀಲ್ ತಿಳಿಸಿದರು.

ಸ್ವಾಮೀಜಿ ಅವರ ಪಾದಯಾತ್ರೆ ಫಲವಾಗಿಯೇ ನಮೆಗೆ ಮೀಸಲಾತಿ ದೊರಕುವ ವಿಶ್ವಾಸವಿದೆ, ಈ ಸಂಬಂಧ ಸರ್ಕಾರದ ಮೇಲೆ ವಿಶ್ವಾಸವಿರಸಲಾಗಿದೆ, ಒಂದು ಕಾಲಮಿತಿಯೊಳಗೆ ಮೀಸಲಾತಿ ನೀಡುವ ಭರವಸೆ ನೀಡಬೇಕು. ಹಾಗೆಯೇ ಕೂಡಲ ಸಂಗಮ ಪೀಠಕ್ಕೆ 15 ಕೋಟಿ ಅನುದಾನ ನೀಡಬೇಕು ಎಂದು ಮಾಜಿ ಸಚಿವ ವಿನಯ್ ಕುಲಕರ್ಣಿ ಇದೇ ಸಂದರ್ಭದಲ್ಲಿ ಮನವಿ ಮಾಡಿದರು.

More News