ಬೆಂಗಳೂರು : ನಿಷೇಧ ಹೇರುವುದು ಸರ್ಕಾರದ ಕೆಲಸ.ಆದರೆ ತಾವೇ ರೂಪಿಸಿದ ನಿಯಮಾವಳಿಗಳನ್ನು ಉಲ್ಲಂಘಿಸುವುದು ಮುಖ್ಯಮಂತ್ರಿ,ಸಂಪುಟದ ಸಚಿವರಿಗೆ ಸುಲಭದ ಕೆಲಸ.ಕಾನೂನು,ನಿಯಮಗಳನ್ನು ಮೀರಿದರೂ ಅವರನ್ನು ಪ್ರಶ್ನಿಸಲು ,ದಂಡಿಸಲು ಸಾಧ್ಯವಿಲ್ಲವೇ ಅದಕ್ಕಾಗಿ ಎಲ್ಲಾ ತಪ್ಪುಗಳಿಗೂ ಕಾನೂನು ವಿನಾಯಿತಿ ನೀಡಿದೆ.

ರಾಜ್ಯ ಬಿಜೆಪಿ ಸರ್ಕಾರದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸೇರಿದಂತೆ ಸಚಿವರು ಸಭೆ ಸಮಾರಂಭ,ಖಾಸಗಿ ಭೇಟಿ ಸಂದರ್ಭದಲ್ಲಿ ಸನ್ಮಾನ,ಅಭಿನಂದನೆ,ಗೌರವ ಕಾಣಿಕೆ ಸ್ವೀಕಾರ ಮತ್ತು ಸಲ್ಲಿಸುವು ದನ್ನು ನಿರ್ಬಂಧಿಸಿ ಮೇಲ್ಪಂಕ್ತಿಯನ್ನು ಹಾಕಿರುವುದಾಗಿ ಸರ್ಕಾರಿ ಆದೇಶ ಹೊರಿಡಿಸಿದರು.ಅಂತೆಯೇ ಹೂವು,ಹಣ್ಣು,ಶಾಲು ,ಮಾಲೆ,ಪೇಟ,ಕಾಣಿಕೆಗಳನ್ನು ಸ್ವೀಕರಿಸು ವುದಿಲ್ಲವೆಂದು ಪುಕ್ಕಟೆ ಪ್ರಚಾರವನ್ನು ಪಡೆದರು.

ಆದರೆ ದಿನ ಕಳೆದಂತೆಲ್ಲಾ ತಾವೇ ರೂಪಿಸಿದ ನಿಯಮ,ಕಾನೂನು,ಆದೇಶಗಳನ್ನು ಗಾಳಿಗೆ ತೂರಿದ್ದಾರೆ. ಸನ್ಮಾನ ಸ್ವೀಕಾರ, ಅಭಿನಂದನೆ,ಶುಭಾಶಯಗಳು,ಸಭೆ ಸಮಾರಂಭಗಳಲ್ಲಿ ಭರ್ಜರಿ ಕಾಣಿಕೆ ಸ್ವೀಕಾರ ಸೇರಿದಂತೆ ಎಲ್ಲವನ್ನು ನಿರ್ಬೀತರಾಗಿ ,ನಿರಂತರವಾಗಿ,ಸಾಂಗೋಪಾಂಗವಾಗಿ ನಡೆಸುತ್ತಿದ್ದಾರೆ.

ಶಪಥ ಮುರಿದ ಕನ್ನಡ ಮತ್ತು ಸಂಸ್ಕೃತಿ ಸಚಿವರು : ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರು ಆದೇಶ ಹೊರಡಿಸಿದ ನಾಲ್ಕೈದು ವಾರಗಳಲ್ಲೆ ಮುಖ್ಯಮಂತ್ರಿ ಆದಿಯಾಗಿ ಎಲ್ಲಾ ಸಚಿವರು ಗಾಳಿಗೆ ತೂರಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಸಚಿವರಂತೂ ಕಾಣಿಕೆ, ಹಾರ, ತುರಾಯಿ ಬದಲಾಹಿ ಪುಸ್ತಕ ನೀಡಿ ಎಂದು ಆದೇಶ ಹೊರಡಿಸಿದರು.ಅಂತೆಯೇ ಸಂಘ ಸಂಸ್ಥೆಗಳಿಂದ,ಸಭೆ ಸಮಾರಂಭ, ಖಾಸಗಿ ಭೇಟಿಗಳಲ್ಲಿಯೂ ಭರ್ಜರಿ ಸನ್ಮಾನ,ಸತ್ಕಾರ ಕಾಣಿಕೆ,ಅಭಿನಂದನೆಗಳ ಮಾಹಪೂರ ವನ್ನು ಕಡೆದುಕೊಂಡು ಕೃತಜ್ಞತೆ ಸಲ್ಲಿಸಿದ್ದಾರೆ.

ಸಿಎಂ ಸನ್ಮಾನ-ಕಾಣಿಕೆ ಸ್ವೀಕಾರಕ್ಕೆ ಮಿತಿಯೇ ಇಲ್ಲ : ಕಳೆದ ಕೆಲ ವಾರಗಳಿಂದ ಮುಖ್ಯಮಂತ್ರಿ ಅವರು ಭಾಗವಹಿಸಿದ ಸರ್ಕಾ ರಿ,ಖಾಸಗಿ,ವೈಯಕ್ತಿಕ ಹಾಗೂ ಸಾರ್ವಜನಿಕ,ಗಣ್ಯರ ಭೇಟಿ ಸೇರಿದಂತೆ ಎಲ್ಲಾ ಕಡೆಗಳಲ್ಲಿಯೂ ಎಲ್ಲವನ್ನು ತಮ್ಮದಲ್ಲ ವೆಂಬಂತೆ ಸ್ವೀಕರಿಸಿ ಸಾರ್ಥಕತೆ ಮೆರೆದಿದ್ದಾರೆ.

ಪ್ಲಾಸ್ಟಿಕ್ ಬಳಕೆ ನಿಷೇಧಿಸಿಯೂ ಬಳಸುತ್ತಿರುವ ಸಿಎಂ,ಸಚಿವರು : ಪ್ಲಾಸ್ಟಿಕ್ ಉತ್ಪಾದನೆ,ಮರು ಬಳಕೆ, ಸಾಗಾಣಿಕೆ,ಮಾರಾಟ ವನ್ನು ಸರ್ಕಾರ ನಿಷೇಧ ವಿಧಿಸಿತ್ತು.ಆದರೆ ಸರ್ಕಾರದ ಕಾರ್ಯಕ್ರಮಗಳಲ್ಲಿ ಪ್ಲಾಸ್ಟಿಕ್ ಕವರ್,ಗಿಫ್ಟ್ ಪ್ಯಾಕಿಂಗ್,ಹಣ್ಣು ಹಂಪಲಿನ ಬುಟ್ಟಿ ,ಪುಸ್ತಕ ಬಿಡುಗಡೆಗಾಗಿ ಪ್ಯಾಕಿಂಗ್ ವ್ಯವಸ್ಥೆ,ಸರ್ಕಾರಿ ಕಾರ್ಯಕ್ರಮಗಳಲ್ಲಿ ಪ್ಲಾಸ್ಟಿಕ್ ಬಾಟಲ್ ಬಳಕೆ ಸೇರಿದಂತೆ ಎಲ್ಲವನ್ನು ಸಚಿ ವರು,ಶಾಸಕರು, ಸರ್ಕಾರದ ಅಧಿಕಾರಿಗಳು ಎಗ್ಗಿಲ್ಲದೆ ನಿರಂತರವಾಗಿ ನಡೆಸುತ್ತಿದ್ದಾರೆ.

ದಂಡ ಪಾವತಿಸಿದ್ದ ಮೇಯರ್ ಗಂಗಾಬಿಕೆ : ಹಿಂದೆ ಮುಖ್ಯಮಂತ್ರಿ ಯಡಿಯೂರಪ್ಪಅವರಿಗೆ ಸನ್ಮಾನಿಸಿದ ಅಂದಿನ ಬಿಬಿಎಂಪಿ ಮೇಯರ್ ಗಂಗಾಬಿಕಾ ಮಲ್ಲಿಕಾರ್ಜುನ್ ಪ್ಲಾಸ್ಟಿಕ್ ಬಳಸಿದ್ದಕ್ಕಾಗಿ 500ರೂ ದಂಡ ತೆತ್ತಿದ್ದರು.ಮುಖ್ಯಮಂತ್ರಿಗೆ ಹಣ್ಣನ್ನು ಪ್ಲಾಸ್ಟಿಕ್ ಬುಟ್ಟಿಯಲ್ಲಿ,ಮೇಲೊದಿಕೆಯನ್ನು ಪ್ಲಾಸ್ಟಿಕ್ ಕವರ್ ಮುಚ್ಚಿದ್ದಕ್ಕಾಗಿ 500 ರೂ ದಂಡ ಪಾವತಿಸಿದ್ದರು

.ಆದರೀಗ ಮುಖ್ಯಮಂತ್ರಿಗಳು ಸೇರಿದಂತೆ ಸಚಿವರೆಲ್ಲಾ ದಂಡನಾರ್ಹ ತಪ್ಪುನ್ನೆ ಮಾಡಿದ್ದಾರೆ.ಇವರಿಗೆಲ್ಲಾ ದಂಡ ಹಾಕುವ ಶಕ್ತಿ,ಕಾನೂನು ಬಿಬಿಎಂಪಿ ಅಧಿಕಾರಿಗಳಿಗೆ ಇಲ್ಲವೇ ಅಥವಾ ಇವರಿಗೆಲ್ಲಾ ಕಾನೂನಿಂದ ವಿನಾಯಿತಿ ಏನಾದರೂ ನೀಡಿದ್ದಾರೆಯೇ ತಿಳಿಯದಂತಾಗಿದೆ.