ಬೆಂಗಳೂರು : ವಿಧಾನ ಸಭೆ ಎರಡು ಕ್ಷೇತ್ರಗಳ ಉಪ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ.ಸಿಂಧಗಿ ಕ್ಷೇತ್ರಕ್ಕೆ ಅಶೋಕ್ ಮನಗೂಳಿ ಹಾಗೂ ಹಾನಗಲ್ ಕ್ಷೇತ್ರಕ್ಕೆ ಶ್ರೀನಿವಾಸ್ ಮಾನೆಗೆ ಎಐಸಿಸಿ ಟಿಕೆಟ್ ಪ್ರಕಟಿಸಿದೆ

ಸಿಂಧಿಗಿ ಕ್ಷೇತ್ರಕ್ಕೆ ಅಶೋಕ್ ಮನುಗೊಳಿ ಟಿಕೆಟ್ ನೀಡುವುದು ಮೊದಲೇ ಕಾಂಗ್ರೆಸ್ ನಿರ್ಧಿಸಿತ್ತು.ಅಂತೆಯೇ ಎಂ.ಸಿ.ಮನುಗೂಳಿ ನಿಧನದ ಬಳಿಕಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿತ್ತು.ಆದರೆ ಹಾನಗಲ್ ಕ್ಷೇತ್ರಕ್ಕೆ ಮಾಜಿ ಸಚಿವ ಮನೋಹರ್ ತಹಶೀಲ್ದಾರ್,ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಸೇರಿದಂತೆ ಹಲವಾರು ಹಿರಿಯ ಕಾಂಗ್ರೆಸ್ ನಾಯಕರು ಟಿಕೆಟ್ ಗಾಗಿ ಪೈಪೋಟಿ ನಡೆಸಿದ್ದರು.

ಅಂತಿಮವಾಗಿ ಹಾಲಿ ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ್ ಮಾನೆಗೆ ಕಾಂಗ್ರೆಸ್ ಟಿಕೆಟ್ ಪ್ರಕಟಿಸಿದೆ. ಆ ಮೂಲಕ ಕಾಂಗ್ರೆಸ್ ಮುಂಚೂಣಿ ನಾಯಕನಿಗೆ ಟಿಕೆಟ್ ನೀಡಿ ಚುನಾವಣೆ ಕಣವನ್ನು ರಂಗೇರುವಂತೆ ಮಾಡಿದೆ.