ಬಹುನಿರೀಕ್ಷಿತ ಕೋಟಿಗೊಬ್ಬ -3 ಸಿನಿಮಾದ ಟ್ರೈಲರ್ ಬಿಡುಗಡೆ

ಸ್ಯಾಂಡಲ್​ವುಡ್​ನ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿರುವ ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ -3 ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. ಈ ಹಿಂದಿನ ಕೋಟಿಗೊಬ್ಬ1 ಮತ್ತು 2 ಸಿನಿಮಾಗಳ ಸಕ್ಸಸ್​ಗಿಂತಲೂ ಹೆಚ್ಚಿನದ್ದು ನಿರೀಕ್ಷಿಸಬಹುದು ಅಂತ ನಿರ್ದೇಶಕರು ಟ್ರೈಲರ್​ನಲ್ಲೇ ಹೇಳಿದ್ದಾರೆ.

ಯೂಟ್ಯೂಬ್​ನಲ್ಲಿ ಬಿಡುಗಡೆಯಾದ ಒಂದು ಗಂಟೆಯಲ್ಲೇ ಕೋಟಿಗೊಬ್ಬ ಟ್ರೈಲರ್ 3.5 ಲಕ್ಷದಷ್ಟು ವೀಕ್ಷಣೆ ಕಂಡಿದೆ. ಸಿನಿಮಾದಲ್ಲಿ ಸತ್ಯ ಮತ್ತು ಶಿವನ ಪಾತ್ರಗಳು ಮುಂದುವರೆಯುತ್ತಿರುವುದಕ್ಕೆ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

ಶಿವ ಕಾರ್ತಿಕ್ ನಿರ್ದೇಶನ ಕೋಟಿಗೊಬ್ಬ ಸಿನಿಮಾದ ಮೇಲೆ ಹೆಚ್ಚಿನ ಭರವಸೆ ಮೂಡಿಸಿದೆ. ಇನ್ನು ಅರ್ಜುನ್ ಜನ್ಯಾರ ಸಂಗೀತವೂ ಸಿನಿಮಾದ ಜೀವಾಳವಾಗಿರಲಿದೆ ಎನ್ನಬಹುದು. ಕಿಚ್ಚ ಸುದೀಪ್​ಗೆ ನಟಿಯಾಗಿ ಮಡೋನಾ ಸೆಬಾಸ್ಟಿಯನ್ ಅತ್ಯುತ್ತಮವಾಗಿ ನಟಿಸಿದ್ದಾರೆ. ಇನ್ನು ಶ್ರದ್ಧಾ ದಾಸ್, ಅಫ್ತಬ್ ಶಿವದಾಸಿನಿ, ರವಿಶಂಕರ್, ನವಾಬ್ ಶಾ ಚಿತ್ರದ ಮುಖ್ಯ ಭೂಮಿಕೆಯಲ್ಲಿರಲಿದ್ದಾರೆ. ಸೂರಪ್ಪ ಬಾಬು ಈ ಸಿನಿಮಾಗೆ ಬಂಡವಾಳ ಹೂಡಿದ್ದಾರೆ.

More News

You cannot copy content of this page