ಯಾದಗಿರಿ: ಮಾಜಿ ಶಾಸಕನ ರಂಪಾಟ ಮತ್ತು ಪ್ರತಿಷ್ಠೆಗಾಗಿ ಏಕಲವ್ಯ ಶಾಲೆ ಉದ್ಘಾಟನೆಗೆ ತಡೆ ಬಿದ್ದಿದೆ.ವಸತಿ ಶಾಲೆ ಉದ್ಘಾಟನೆ ಕಾರ್ಯಕ್ರಮಕ್ಕೆ ಬಂದಿದ್ದ ಸಚಿವ ಶ್ರೀರಾಮುಲುಗೆದಾರಿ ಮಧ್ಯದಲ್ಲಿ ಅವರದ್ದೇ ಪಕ್ಷದ ಮಾಜಿ ಶಾಸಕನ ಶಾಕ್ ನೀಡಿದ ಘಟನೆ ನಡೆದಿದೆ.
ಯಾದಗಿರಿ ತಾಲೂಕಿನ ಬಂದಳ್ಳಿ ಹೊರವಲಯದಲ್ಲಿರುವ ಏಕಲವ್ಯ ವಸತಿ ಶಾಲೆಯ ಉದ್ಘಾಟನಾ ಕಾರ್ಯಕ್ರಮ ನಡೆಯ ಬೇಕಿತ್ತು.ಕಾರ್ಯಕ್ರಮದ ಉದ್ಘಾಟನೆಗೆ ಪರಿಶಿಷ್ಠ ವರ್ಗಗಳ ಕಲ್ಯಾಣ ಸಚಿವ ಶ್ರೀರಾಮುಲು ಬಂದಿದ್ದರು.ಆದ್ರೆ, ಏಕಲವ್ಯ ವಸತಿ ಶಾಲೆ ಉದ್ಘಾಟನೆಯ ಆಹ್ವಾನ ನೀಡದ ಜಿಲ್ಲಾಡಳಿತ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ಶಾಸಕ ಬಾಬುರಾವ್ ಚಿಂಚನಸೂರ್, ಸಚಿವರ ಕಾರನ್ನು ಅಡ್ಡಗಟ್ಟಿ ನಿಲ್ಲಿಸಿ ಆಕ್ರೋಶ ವ್ಯಕ್ತಪಡಿಸಿದರು.

ಕಾರ್ಯಕ್ರಮಕ್ಕೆ ಸಚಿವರನ್ನು ಹೋಗಲು ಬಿಡದ ಬಾಬುರಾವ್ ಚಿಂಚನಸೂರ್, ಅವರಲ್ಲಿ ಕೈ ಮುಗಿದು ಹಿಂದಿರುಗುವಂತೆ ಮನವಿ ಮಾಡಿದರು.ಈ ಶಾಲೆಗಾಗಿ ನಾನು ಅನೇಕಬಾರಿ ದೆಹಲಿಗೆ ಹೋಗಿ ಮಂಜೂರು ಮಾಡಿಸಿದ್ದೇನೆ.ನನಗೆ ಆಹ್ವಾನ ನೀಡದ ಮೇಲೆ ಜಿಲ್ಲಾಡಳಿತ ಕಾರ್ಯಕ್ರಮ ನಡೆಸಬಾರದು ಎಂದು ಮನವಿ ಮಾಡಿದರು.
ಇದರಿಂದಾಗಿ ಕಾರ್ಯಕ್ರಮ ರದ್ದು ಮಾಡಿ ಸಚಿವರು ಯಾದಗಿರಿಯತ್ತ ಪ್ರಯಾಣ ಬೆಳೆಸಿದರು. ಇದರಿಂದ ಏಕಲವ್ಯ ವಸತಿ ಶಾಲೆ ಉದ್ಘಾಟನೆ ಕಾರ್ಯಕ್ರಮ ರದ್ದಾಯಿತು.ನಡು ರಸ್ತೆಯಲ್ಲಿಯೇ ಶಾಸಕರು ಆಕ್ರೋಶ ವ್ಯಕ್ತಪಡಿಸಿದ್ದರಿಂದ ಟ್ರಾಫಿಕ್ ಜಾಮ್ ಒಂದೆಡೆಯಾದರೆ, ಅವರ ಆಕ್ರೋಶಭರಿತರಾಗಿದ್ದರಿಂದ , ಅವರ ಬೆಂಬಲಿಗರು ಅವರನ್ನು ಸಮಾಧಾನ ಮಾಡುತ್ತಿದ್ದು ಕಂಡು ಬಂದಿತ್ತು.