ಬೆಂಗಳೂರು : ಬೆಂಗಳೂರಿನ ಯಶವಂತಪುರದಲ್ಲಿರುವ ಬ್ರಿಗೇಡ್ ಗೇಟ್ ವೇ ಆಪಾರ್ಟ್ ಮೆಂಟ್ ನಿವಾಸಿಗಳ ಸಂಘವು ಗ್ರೀನ್ ಇನಿಶಿಯೇಟಿವ್ ಯೋಜನೆಯಡಿಯಲ್ಲಿ ಕ್ರಾಂತಿಕಾರಿ ಹೆಜ್ಜೆ ಇಟ್ಟಿದೆ. ಬೆಂಗಳೂರಿನಲ್ಲಿ ಮೊಟ್ಟ ಮೊದಲ ಬಾರಿ ಬ್ರಿಗೇಡ್ ಗೇಟ್ ವೇ ಆಪಾರ್ಟ್ ಮೆಂಟ್ ನ ಮೇಲ್ಛಾವಣಿಯಲ್ಲಿ ರೆನ್ ಎಕ್ಸೆಲ್ ಇಕೊಟೆಕ್ ಸಂಸ್ಥೆಯು ನಿರ್ಮಾಣ ಮಾಡಿರುವ ಬೃಹತ್ ಸೌರ ವಿದ್ಯುತ್ ಸ್ಥಾವರನ್ನು ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಉನ್ನತ ಶಿಕ್ಷಣ ಸಚಿವರಾದ ಡಾ. ಸಿ.ಎನ್. ಅಶ್ವಥ ನಾರಾಯಣ ಅವರು ಉದ್ಘಾಟಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮಾಜಕ್ಕೆ ಒಳ್ಳೆ ಸಂದೇಶ ಕೊಡುವ ಕೆಲಸ ಅಪಾರ್ಟ್ ಮೆಂಟ್ ನಿವಾಸಿಗಳು ಮಾಡಿಕೊಂಡು ಬಂದಿದ್ದಾರೆ. ಪ್ರಕೃತಿಯನ್ನು ಕಾಪಾಡುವುದು, ನೀರನ್ನು ರೀಸೈಕಲ್ , ಕಸವನ್ನು ರೀಸೈಕಲ್ ಮಾಡುತ್ತಿದ್ದಾರೆ. ಅದಲ್ಲದೆ ಕರೆಂಟ್ ಉತ್ಪಾದನೆ ಕೂಡ ಮಾಡುತ್ತಿದ್ದಾರೆ. ಭಾರತದಲ್ಲಿ ಅತಿ ಹೆಚ್ಚು ಕರೆಂಟ್ ಉತ್ಪಾದನೆ ಮಾಡುತ್ತಿರುವ ಅಪಾರ್ಟ್ ಮೆಂಟ್ ಇದು. ಇಲ್ಲಿ ೩೫೪.೪ ಕಿಲೊ ವ್ಯಾಟ್ ಕರೆಂಟ್ ಉತ್ಪಾದನೆ ಮಾಡುತ್ತಿದ್ದಾರೆ ಎಂದು ಅಪಾರ್ಟ್ ಮೇಂಟ್ ಜನರ ಕಾರ್ಯವನ್ನು ಶ್ಲಾಘಿಸಿದರು.

ಬಳಿಕ ರೆನ್ಎಕ್ಸ್‌ಸೋಲ್ ಇಕೋಟೆಕ್ ಸಂಸ್ಥೆಯ ಮಾಲೀಕರು ಹಾಗೂ ಮ್ಯಾನೇಜಿಂಗ್ ಡೈರೆಕ್ಟರ್ ಶ್ರೀನಿವಾಸ್ ಕುಮಾರ್ ಮಾತನಾಡಿ, “ಹಸಿರು ಮೂಲಸೌಕರ್ಯವನ್ನು ನಿರ್ಮಿಸಲು ಅಪಾರ್ಟ್‌ಮೆಂಟ್ ಸಂಘದ ಜೊತೆ ಪಾಲುದಾರಿಕೆ ಹೊಂದಿದ್ದಕ್ಕೆ ತಮಗೆ ಸಂತೋಷವಾಗಿದೆ ಮತ್ತು ಈ ಪ್ರಕ್ರಿಯೆಯಲ್ಲಿ ಬೆಂಗಳೂರು ಅಥವಾ ಭಾರತದಲ್ಲಿ ಅಪಾರ್ಟ್‌ಮೆಂಟ್ ಛಾವಣಿಯ ಮೇಲ್ಭಾಗದ ಜಾಗ ಅಥವಾ ವಸತಿ ಮೇಲ್ಛಾವಣಿಯ ಜಾಗವನ್ನು ಹೇಗೆ ಸೋಲಾರ್ ಶಕ್ತಿಯ ಉತ್ಪಾದನೆಗೆ ಉಪಯೋಗಿಸಬಹುದು ಎನ್ನುವುದನ್ನು ಸಾಬೀತು ಮಾಡಿದಂತಾಗಿದೆ ಎಂದಿದ್ದಾರೆ. ಹೀಗೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಇಂಧನ ಉತ್ಪದನೆ ಮಾಡುವ ಮೂಲಕ ನಾವು ನೇರವಾಗಿ ಸರ್ಕಾರಕ್ಕೆ ಸಹಾಯ ಮಾಡಬಹುದಾಗಿದೆ. ಭವಿಷ್ಯದಲ್ಲಿ ಸೌರವಿದ್ಯುತ್ ನಮ್ಮ ಏಕೈಕ ನವೀಕರಿಸಬಹುದಾದ ಶಕ್ತಿ ಮೂಲವಾದ ಕಾರಣ ಸಾಧ್ಯವಾದಷ್ಟು ನಾವು ನಮ್ಮ ಸಂಪನ್ಮೂಲಗಳನ್ನು ಬಳಸಿಕೊಳ್ಳುವತ್ತ ಚಿಂತಿಸಬೇಕು ಎಂದಿದ್ದಾರೆ.
ಒಂದು ಅಂದಾಜಿನ ಪ್ರಕಾರ ಈ ಪ್ಲಾಂಟ್‌ನಲ್ಲಿ ಉತ್ಪತ್ತಿಯಾಗುವ ನವೀಕರಿಸಬಹುದಾದ ವಿದ್ಯುತ್ ಅಂದಾಜು ವಾರ್ಷಿಕ ಉತ್ಪಾದನೆಗೆ 4.78 ಲಕ್ಷ ಯೂನಿಟ್ ಎಂದು ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ಅಧ್ಯಕ್ಷ ಮಹೇಶ್ ಕುಮಾರ್ ಎನ್ ಎಲ್. ಆಧುನಿಕ ತಾಂತ್ರಿಕತೆಯ ವೇಗದಲ್ಲಿ ನಾಗಾಲೋಟದಿಂದ ಚಲಿಸುತ್ತಿರುವ ವಿಶ್ವದರ್ಜೆಯ ನಗರಿ ಬೆಂಗಳೂರಿನಲ್ಲಿ ಈ ಬಗೆಯ ಸುಸ್ಥಿರ ಅಭಿವೃದ್ಧಿಯ ಪರಿಕ್ರಮಗಳು ನಿಜಕ್ಕೂ ಶ್ಲಾಘನೀಯವೆಂದು ತಿಳಿಸಿದರು.
ಈ ಬೃಹತ್ ಹಸಿರು ಶಕ್ತಿ ಉಪಕ್ರಮ ವಿದ್ಯುತ್ ಬಿಲ್ ಉಳಿತಾಯದ ಜೊತೆಗೆ ಮುಂದಿನ ಪೀಳಿಗೆಯ ಭವಿಷ್ಯವನ್ನು ರಕ್ಷಿಸಲು ಸಹಾಯ ಮಾಡುತ್ತದೆ. ಇದು ಪರೋಕ್ಷವಾಗಿ “ಇಂಧನ ಉಳಿತಾಯ, ನವೀಕರಿಸಬಹುದಾದ ಇಂಧನ ಉತ್ಪಾದಿನೆ” ಪರಿಕಲ್ಪನೆಯನ್ನು ಜಾರಿಗೆ ತಂದಿದೆ. ಆ ಮೂಲಕ ಉಳಿತಾಯದ ಶಕ್ತಿಯ ಉದ್ಯಮದ ಅಗತ್ಯವಿರುವ ಇತರ ಪ್ರದೇಶಗಳಲ್ಲಿ ಅಥವಾ ರೈತರು ಅಥವಾ ಇತರ ವಸತಿ ನಿವಾಸಗಳಲ್ಲಿ ಇಂಧನ ಉತ್ಪಾದನೆಗೆ ಬಳಸಲು ಅನುವು ಮಾಡಿಕೊಡುತ್ತದೆ ಎನ್ನಲಾಗುತ್ತಿದೆ.
ಇನ್ನು ಡೀಸೆಲ್ ಜನರೇಟರ್‌ಗಳನ್ನು ಬಳಸುವ ಗ್ರಾಹಕರು ಸಹ ಸೌರಶಕ್ತಿ ಅಳವಡಿಸಿಕೊಂಡು ಉಳಿತಾಯದ ಜೊತೆ ಹೆಚ್ಚು ಲಾಭ ಪಡೆದುಕೊಳ್ಳಬಹುದು. ಈಗಾಗಲೆ ಅಸ್ತಿತ್ವದಲ್ಲಿರುವ ಗ್ರಿಡ್ ಅಥವಾ ಡೀಸೆಲ್ ಜೆನ್‌ಸೆಟ್‌ಗಳೊಂದಿಗೆ ಸೌರಶಕ್ತಿ ಸಂಯೋಜನೆಯ ಸಿಂಕ್ರೊನೈಸೇಷನ್ ನಿಂದ ಕನಿಷ್ಠ 0.99 ಪ್ಲಸ್ ಅಧಿಕ ವಿದ್ಯುತ್ ಉಳಿಕೆ ಸಾಧ್ಯವಿದೆ.