ಚಿತ್ರದುರ್ಗ : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಿಎಂ ಆಗಬೇಕು ಎಂಬ ಕಾರಣದಿಂದ ಪಂಜಾಬ್ ಮಾಡೆಲ್ ಅನುಸರಿಸಲು ಹೊರಟಿದ್ದಾರೆ ಎಂದು ಸಾರಿಗೆ ಸಚಿವ ಶ್ರೀರಾಮುಲು ಆರೋಪಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲ್ಲೂಕಿನ ದೇವಸಮುದ್ರ ಗ್ರಾಮದಲ್ಲಿ ಮಾತನಾಡಿದ ಅವರು, ಪಂಜಾಬ್ ನಲ್ಲಿ ಒಬ್ಬ ಸಿದ್ದು ಇದ್ದಾರೆ, ರಾಜ್ಯದಲ್ಲಿ ಒಬ್ಬ ಸಿದ್ದು ಇದ್ದಾರೆ. ಅಲ್ಲಿ ಅವರು ಕ್ಯಾಪ್ಟನ್ ಆಗಲು ಹೊರಟಿದ್ದಾರೆ, ಇಲ್ಲಿ ಸಿದ್ದರಾಮಯ್ಯ ಸಿಎಂ ಆಗಲು ಹೊರಟಿದ್ದಾರೆ ಎಂದು ಟಿಕೀಸಿದರು.
ಕಾಂಗ್ರೆಸ್ ಮನೆಯೊಂದು ಮೂರು ಬಾಗಿಲು ಆಗಿದೆ, ಸಿದ್ದರಾಮಯ್ಯ, ಡಿಕೆಶಿ, ಪರಮೇಶ್ವರ ಎಂಬ ಮೂರು ಬಣಗಳಾಗಿವೆ ಎಂದು ಟಿಕೀಸಿದ ಅವರು, ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆ ಸೋಲುವ ಭೀತಿ ಕಾಡುತ್ತಿದೆ ಎಂದು ಟಿಕೀಸಿದರು. ಸಿದ್ದರಾಮಯ್ಯಗೆ ಬೈ ಎಲೆಕ್ಷನ್ ಗೆಲ್ಲಿಸುವ ಮನಸ್ಸಿಲ್ಲ, ಸೋಲಬೇಕು ಎಂದು ಹೇಳುತ್ತಿದ್ದಾರೆ ಎಂದರು.
ರಾಜಕಾರಣ ಬಂದಾಕ್ಷಣ ಅವರಿಗೆ ಅಹಿಂದ, ದಲಿತ ನೆನಪಾಗುತ್ತದೆ, ಚುನಾವಣೆ ಮುಗಿದ ಬಳಿಕ ಅವೆಲ್ಲವನ್ನು ಮರೆಯುತ್ತಾರೆ, ದಲಿತರ ಹೆಸರ ಮೇಲೆ ಮತ ಗಳಿಸಲು ಹೊರಟಿದ್ದಾರೆ, ಕಾಂಗ್ರೆಸ್ ನಾಯಕರಿಗೆ ತಾಕತ್ ಇದ್ದರೆ, ದಲಿತ ನಾಯಕರ ಹೆಸರನ್ನ ಮುಂದಿನ ಸಿಎಂ ಎಂದು ಘೋಷಣೆ ಮಾಡಲಿ ಎಂದು ತಿಳಿಸಿದರು.
ಬೆಂಗಳೂರು ಉಸ್ತುವಾರಿ ತಿಕ್ಕಾಟ ಸಂಬಂಧ ಮಾತನಾಡಿದ ಅವರು, ನಮ್ಮ ಮುಖ್ಯಮಂತ್ರಿ ಸಮರ್ಥರಿದ್ದಾರೆ, ಈ ವಿಷಯವನ್ನು ಸರಿಪಡಿಸುತ್ತಾರೆ ಎಂಬ ಆಶಾವಾದ ವ್ಯಕ್ತಪಡಿಸಿದರು. ಕಲ್ಲಿದ್ದಲು ಸಮಸ್ಯೆ ಆಗದಂತೆ ನಮ್ಮ ಸರ್ಕಾರ ಸಮರ್ಥವಾಗಿ ನಿಭಾಯಿಸುತ್ತದೆ ಎಂದು ತಿಳಿಸಿದರು.
KSRTC ನೌಕರರ ವೇತನ ಪಾವತಿಯಾಗದೇ ಇರುವ ವಿಚಾರವಾಗಿ ಮಾತನಾಡಿದ ಅವರು, ಈ ಕುರಿತು ನಾನು ಸಿಎಂ ಬಳಿ ಮಾತನಾಡಿದ್ದೇನೆ. ದಸರಾ ಹಬ್ಬದ ಒಳಗಾಗಿ ಸಂಬಳ ನೀಡಲಾಗುವುದು, ಪೂರ್ತಿ ಸಂಬಳ ನೀಡುತ್ತೇವೆ ಯಾವುದೇ ಸಮಸ್ಯೆ ಇಲ್ಲ ಎಂದರು.