ದೇವನಹಳ್ಳಿ : ಬೆಂಗಳೂರಿಗೆ ಮುಕುಟಪ್ರಾಯವಾಗಿರುವ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರಾತ್ರಿ ಇಡೀ ಅಯೋಮಯ ಸ್ಥಿತಿ. ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ವಿಮಾನ ನಿಲ್ದಾಣಕ್ಕೆ ತೆರಳುವ ರಸ್ತೆಯೇ ಕಾಣದಂತಾಗಿತ್ತು. ಎತ್ತ ನೋಡಿದರೂ ನೀರು ತುಂಬಿತ್ತು. ವಿಮಾನ ನಿಲ್ದಾಣದಲ್ಲಿ ನೀರು ತುಂಬಿ ಪ್ರವಾಹದಂತೆ ಭಾಸವಾಗಿತ್ತು.

ರಸ್ತೆಯಲ್ಲಿ ವಾಹನಗಳು ತೆರಳದೆ, ಅಲ್ಲಿಯೇ ನಿಂತಿದ್ದರಿಂದ ರಸ್ತೆ ಸಂಚಾರ ಅಸ್ತವ್ಯಸ್ಥಗೊಂಡಿತ್ತು. ಅನೇಕರು ಟ್ಯಾಕ್ಟರ್ ವನ್ನೇರಿ ವಿಮಾನ ನಿಲ್ದಾಣಕ್ಕೆ ತೆರಳಿದ ಘಟನೆಯೂ ನಡೆಯಿತು.
ಇದು ಬೆಂಗಳೂರಿನಲ್ಲಿ ರಾತ್ರಿ ಸುರಿದ ಧಾರಾಕಾರ ಮಳೆಯಿಂದ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆಗಿರುವ ಅನಾಹತು. ಎಲ್ಲೆಡೆ ನೀರು ತುಂಬಿ, ಪ್ರಮಾಣಿಕರು, ವಾಹನ ಸವಾರರು ಪರದಾಡುವಂತಾಗಿತ್ತು.

ಏರ್ ಪೋರ್ಟ್ ಒಳಗೆ ಹೋಗುವ ದ್ವಾರದಲ್ಲಿ ಮೊಣಕಾಲಿನವರೆಗೆ ನೀರು ತುಂಬಿದ್ದರಿಂದ ವಿಮಾನ ಏರಲು ತೆರಳುತ್ತಿದ್ದವರು ಪರದಾಡುವಂತಾಗಿತ್ತು. ಹಾಗೆಯೇ ಏರ್ ಪೋರ್ಟ್ ಗೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣವಾಗಿ ಜಲಾವೃತಗೊಂಡಿತ್ತು.

ನಾನಾ ಸ್ಥಳಗಳಿಗೆ ತೆರಳು ವಿಮಾನ ನಿಲ್ದಾಣಕ್ಕೆ ತೆರಳಲವು ಪರದಾಡಿದ ಪ್ರಯಾಣಿಕರು ಟ್ಯಾಕ್ಟರ್ ನಲ್ಲಿ ಪ್ರಯಾಣ ಬೆಳೆಸಿದರು. ವಿಮಾನ ನಿಲ್ದಾಣಕ್ಕೆ ಸರಿಯಾದ ತೆರಳಲು ಆಗದೇ ಇರುವವರು ಸ್ಥಳೀಯ ಜಿಲ್ಲಾಡಳಿತಕ್ಕೆ ಹಿಡಿ ಶಾಪ ಹಾಕುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದೆ ಇರುವುದು ಇದಕ್ಕೆಲ್ಲಾ ಕಾರಣ ಎಂದು ಸ್ಥಳೀಯರು ದೂರಿದರು.