ಮೈತ್ರಿ ಸರ್ಕಾರ ಬೀಳಲು ಕುಮಾರಸ್ವಾಮಿಯೇ ಕಾರಣ: ಹೋಟೆಲ್ ನಿಂದ ಸರ್ಕಾರ ನಡೆಸೋದಲ್ಲ : ತಿರುಗೇಟು ನೀಡಿದ ಸಿದ್ದರಾಮಯ್ಯ

ಬೆಂಗಳೂರು : ಮಾಜಿ ಮುಖ್ಯಮಂತ್ರಿಗಳಿಬ್ಬರ ಮಾತನ ಸಮರ ಮತ್ತಷ್ಟು ವಿಷಮಿಸಿದೆ. ಸಂವಿಧಾನಾತ್ಮಕ ಹುದ್ದೆಯಾಗಿರುವ ಪ್ರತಿಪಕ್ಷದ ಸ್ಥಾನಕ್ಕೆ ಒಬ್ಬ ಸಿಎಂ ಆಗಿದ್ದವರು ಹೀಗೆ ಮಾತಾಡೋದಾ?ಎಂದು ಪ್ರಶ್ನಿಸಿದ್ದಾರಲ್ಲದೆ, ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ಇದೇ ಸ್ಥಾನದಲ್ಲಿದ್ದರು, ಹಾಗಾದ್ರೆ ಅವರದು ನೀವು ಹೇಳಿದಾ ಸ್ಥಾನವಾಗಿತ್ತೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಇದು ವಿರೋಧಪಕ್ಷದ ಸ್ಥಾನಕ್ಕೆ ಮಾಡಿದ ಅಪಮಾನ ಅಲ್ಲವೆ ? ಎಂದಿದ್ದಾರೆ. ಸಮ್ಮಿಶ್ರ ಸರಕಾರ ನಾನು ಬೀಳಿಸಬೇಕಿದ್ದರೆ ಸರ್ಕಾರ ರಚನೆ ಮಾಡಲೇ ಬಿಡುತ್ತಿರಲಿಲ್ಲ ಎಂದು ತಿಳಿಸಿದರು.
ಕುಮಾರಸ್ವಾಮಿ ಅಧಿವೇಶನದಲ್ಲಿ ಯಡಿಯೂರಪ್ಪ ಶಾಸಕರನ್ನು ಖರೀದಿ ಮಾಡಿ ಸರ್ಕಾರ ಬೀಳಿಸಿದರು ಎಂದು ಹೇಳಿದ್ದಾರೆ, ಈಗ ಸರ್ಕಾರ ಬೀಳಲು ನಾನೇ ಕಾರಣ ಎನ್ನುತ್ತಿದ್ದಾರೆ, ಹಾಗಾದ್ರೆ ಕುಮಾರಸ್ವಾಮಿಗೆ ಎರಡು ನಾಲಿಗೆಗಳು ಇವೆಯಾ ? ಎಂದು ಗರಂ ಆಗಿ ಪ್ರಶ್ನಿಸಿದ್ರು.
ಕುಮಾರಸ್ವಾಮಿ ಕಾಂಗ್ರೆಸ್ ಗಿಂತ ನಾನೆ ಟಾರ್ಗೇಟ್ ಅಂತಿದ್ದಾರೆ. ಹಾಗಾದ್ರೆ, ಅವರಿಗೆ ನನ್ನ ಭಯ ಅಷ್ಟೊಂದು ಇದೆ ಎಂದು ವ್ಯಂಗ್ಯವಾಡಿದರು. ಕುಮಾರಸ್ವಾಮಿ ಆರೋಪಗಳೆಲ್ಲಾ ಅಪ್ಪಟ ಸುಳ್ಳು, ಅವರಿಗೆ ಜೀವನದಲ್ಲಿ ಸತ್ಯ ಹೇಳಿ ಗೊತ್ತೇ ಇಲ್ಲ ಎಂದ ಸಿದ್ದರಾಮಯ್ಯ, ಅಂತಹವರಿಂದ ನಾನು ಪಾಠ ಕಲಿಬೇಕಾಗಿದೆಯಲ್ವಾ ? ಇದು ದೇಶದ ದುರ್ದೈವ ಎಂದರು.


ಜನರನ್ನ ನನ್ನ ವಿರುದ್ದ ಎತ್ತಿಕಟ್ಟಲು ಮೈಸೂರಿಗೆ ಹೋಗಿ ಮಾತಾಡಿದ್ದಾರೆ ಎಂದು ಟಿಕೀಸಿದ ಸಿದ್ದರಾಮಯ್ಯ, ಜನ ಇವರ ಡೋಂಗಿತನ ಒಪ್ಪಿಕೊಳ್ಳಲು ತಯಾರಿಲ್ಲ, ಸರಕಾರ ಬೀಳುವ ಹಿಂದಿನ ಒಂಬತ್ತು ದಿನ ಕುಮಾರಸ್ವಾಮಿ ಅಮೇರಿಕಾದಲ್ಲಿ ಕೂತಿದ್ದು ಯಾಕೆ ? ಎಂದು ಪ್ರಶ್ನಿಸಿದ್ದಾರೆ.
ಸರಕಾರ ನಡೆಯೋದು ವೆಸ್ಟೆಂಡ್ ಹೋಟೆಲ್ ನಲ್ಲಾ ?
ಯಾವ ಸಿಎಂ ಹೋಟೆಲ್ ನಲ್ಲಿ ಕೂತು ಸರ್ಕಾರ ನಡೆಸಿದ್ದಾರೆ ? ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಸರಕಾರ ನಡೆಯೋದು ವೆಸ್ಟೆಂಡ್ ಹೋಟೆಲ್ ನಲ್ಲಾ ? ಎಂದು ಕಿಡಿಕಾರಿದರು. ಅಲ್ಲಿ ಒಬ್ಬ ಶಾಸಕ, ಮಂತ್ರಿಗೂ ಭೇಟಿಗೆ ಅವಕಾಶ ಇರಲಿಲ್ಲ ಎಂದು ಆರೋಪಿಸಿದರು.
ಯಡಿಯೂರಪ್ಪ ಅವರನ್ನ ಕದ್ದು ಮುಚ್ಚಿ ಭೇಟಿಮಾಡಿಲ್ಲ
ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರನ್ನ ನಾನು ಕದ್ದು ಮುಚ್ಚಿ ಭೇಟಿ ಆಗಿಲ್ಲ, ಅವರನ್ನು ನಾನು ಹುಟ್ಟು ಹಬ್ಬದ ಸಂದರ್ಭ ಬಿಟ್ರೆ ಬೇರೆಲ್ಲೂ ಭೇಟಿನೇ ಮಾಡಿಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು. ಐಟಿ ದಾಳಿಗೆ ನಾನು ಹೇಗೆ ಹೊಣೆ ಆಗ್ತಿನಿ? ಎಂದು ಪ್ರಶ್ನಿಸಿದ ಅವರು ಮೋದಿ ಸರಕಾರ ಯಾವ ಪಕ್ಷದ್ದು.. ? ಎಂದು ಕೇಳಿದ್ದಾರೆ.
ಪ್ರಧಾನಿ ಮೋದಿಯಿಂದ ರಾಜ್ಯಕ್ಕೆ ನಿರಂತರ ಅನ್ಯಾಯ
ಕೇಂದ್ರದಿಂದ ಜಿಎಸ್‌ಟಿ ಬಾಕಿ ಹಣ ಇನ್ನೂ ರಾಜ್ಯಕ್ಕೆ ಬಿಡುಗಡೆಯಾಗಿಲ್ಲ ಎಂದು ಆರೋಪಿಸಿದ ಅವರು, ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಕರ್ನಾಟಕ ರಾಜ್ಯಕ್ಕೆ ಬಹಳಷ್ಟು ಅನ್ಯಾಯವಾಗಿದೆ ಎಂದರು. 5495 ಕೋಟಿ ಹಣ ರಾಜ್ಯಕ್ಕೆ 15 ನೇ ಹಣಕಾಸು ಯೋಜನಡೆಯಡಿಯಲ್ಲಿ ಬಿಡುಗಡೆಯಾಗಬೇಕಿತ್ತು, ಆದರೆ ನಯಾ ಪೈಸೆನೂ ಬಿಡುಗಡೆಯಾಗಿಲ್ಲ, ಇದಕ್ಕೆ ರಾಜ್ಯದ ಹಾಲಿ ಮತ್ತು ಮಾಜಿ ಮುಖ್ಯಮಂತ್ರಿಗಳು ಕಾರಣ ಎಂದು ಆರೋಪಿಸಿದರು.
ರೈತರಿಗೆ ಸ್ಪಂದಿಸಲ ಸರ್ಕಾರ
ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ 2019 ರಲ್ಲಿ ಮಳೆ ಬಂದು ಸಾಕಷ್ಟು ಮನೆಗಳು ಬಿದ್ದು, ಬೆಳೆ ಹಾಳಾಗಿದ್ದವು, ಆದರೆ ಇದುವರೆಗು ಪರಿಹಾರ ಹಣ ಯಾರಿಗೂ ವಿತರಣೆಯಾಗಿಲ್ಲ, ಈ ಸರ್ಕಾರ ರೈತರ ಸಮಸ್ಯೆಗಳಿಗೆ ಸ್ಪಂದಿಸುವ ಸರ್ಕಾರವಲ್ಲ ಎಂದು ಆರೋಪಿಸಿದರು.


ಭೂಕಂಪನ ಸರ್ಕಾರ ಸ್ಪಂದಿಸುತ್ತಿಲ್ಲ
ಸೇಡಂ ಹಾಗೂ ಚಿಂಚೋಳಿಯಲ್ಲಿ 50 ಕ್ಕೂ ಅಧಿಕ ಗ್ರಾಮಗಳಲ್ಲಿ ಭೂಕಂಪನವಾಗಿದೆ, ಆದರೆ ಇದುವರೆಗೆ ಉಸ್ತುವಾರಿ ಸಚಿವರು, ಎಂಪಿ ಯಾರು ಸಹ ಭೇಟಿ ನೀಡಿಲ್ಲ ಎಂದು ಟಿಕೀಸಿದ ಅವರು, ಅಲ್ಲಿಯ ಜನರು ನಿತ್ಯ ಹೇಗೆ ಬದುಕಬೇಕು, ನಿದ್ರೆ ಹೇಗೆ ಮಾಡಬೇಕು? ಎಂದು ಪ್ರಶ್ನಿಸಿದ್ದಾರೆ.

More News

You cannot copy content of this page