ಮಾರುಕಟ್ಟೆಯಲ್ಲಿ ಜನಜಾತ್ರೆ, ಗಗನಕ್ಕೇರಿದ ಬೆಲೆ: ಆಡಳಿತಗಾರರಿಗೆ ಹಿಡಿಶಾಪ ಹಾಕುತ್ತಾ ಖರೀದಿಗೆ ಮುಂದಾದ ಜನರು

ಬೆಂಗಳೂರು : ಇಂದು ವಿಜಯದಶಮಿ ಹಬ್ಬ, ಎಲ್ಲೆಲ್ಲೂ ನೋಡಿದರೂ ಅಲ್ಲಿ ಸಡಗರ ಸಂಭ್ರಮ, ಇಂದು ವಿಶೇಷವಾಗಿ ತಮ್ಮ ವಾಹನಗಳನ್ನು, ಕಚೇರಿಗಳನ್ನು ಅಲಂಕರಿಸಿ ಪೂಜೆ ಮಾಡುವ ಆಯುಧ ಪೂಜಾ ದಿನ. ಈ ಹಿನ್ನೆಲೆಯಲ್ಲಿ ಕೆ.ಆರ್.ಮಾರ್ಕೆಟ್ ನಲ್ಲಿ ಜನವೋ ಜನ. ಈ ಬಾರಿಯ ದಸರಾ ಸಂಭ್ರಮಕ್ಕೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಆದರೆ, ಹಣ್ಣು, ಹಂಪಲು, ಹೂವು, ತರಕಾರಿ ಬೆಲೆ ಗಗನಕ್ಕೇರಿದ್ರು, ಜನರ ಉತ್ಸಾಹಕ್ಕೇನು ಕಡಿಮೆ ಇರಲಿಲ್ಲ. ಹಬ್ಬ ಆಚರಣೆಗಾಗಿ ಹೂವು,ಹಣ್ಣು ಖರೀದಿ ಬಲು ಜೋರಾಗಿಯೇ ನಡೆದಿದೆ.


ನಗರದ ಕೆ ಆರ್ ಮಾರುಕಟ್ಟೆಯಲ್ಲಿ ಖರೀದಿಗೆ ಜನರು ಮುಗಿಬಿದ್ದದ್ದರು. ದರವನ್ನು ಕೇಳಿ ಹೌಹಾರಿದರೂ, ಆಡಳಿತ ನಡೆಸುತ್ತಿರುವ ಸರ್ಕಾರಗಳಿಗೆ ಹಿಡಿ ಶಾಪ ಹಾಕಿ ಖರೀದಿ ಮಾಡುತ್ತಿದ್ದರು. ಇಂದು ಮಾತ್ರ ಇಲ್ಲಿ ಯಾವುದೇ ರೀತಿಯ ಕೊರೊನಾ ನಿಯಮವಳಿಗಳನ್ನು ಪಾಲಿಸಿದ್ದು ಕಂಡುಬಂದಿಲ್ಲ.
ಗಗನಕ್ಕೇರಿದ ಹೂವುಗಳ ಬೆಲೆ…
ಹೂವು ಹಿಂದಿನ ದರ(ಕೆ.ಜಿ) ಈಗಿನ ದರ(ಕೆ.ಜಿ)
ದುಂಡುಮಲ್ಲಿಗೆ 400 1000ರೂ

ಕನಕಾಂಬರ 600 1500ರೂ
ಕಾಕಡ 200 500ರೂ
ಜಾಜಿ ಮಲ್ಲಿಗೆ 150 200ರೂ
ಸೇವಂತಿಗೆ 60 150ರೂ
ಸುಗಂಧರಾಜ 100 300ರೂ
ಗುಲಾಬಿ 150 200ರೂ
ತುಳಸಿ 50ರೂ(ಒಂದು ಮಾರು)
ಮಾವಿನ ಎಲೆ 40ರೂ(ಒಂದು ಕಟ್ಟಿಗೆ)
ಹಣ್ಣು ಹಂಪಲುಗಳ ಬೆಲೆ ನೋಡೋದಾದ್ರೇ

Fruit on display at La Boqueria market in Barcelona, Spain


ಹಣ್ಣುಗಳು ಹಿಂದಿನ ಬೆಲೆ ಈಗಿನ ಬೆಲೆ(ಕೆ.ಜಿ)
ಸೇಬುಹಣ್ಣು 80 120ರೂ
ಕಿತ್ತಳೆ 60 80ರೂ
ಮೊಸಂಬಿ 70 100ರೂ
ಬಾಳೆಹಣ್ಣು 50 80ರೂ
ಅನಾನಸ್ 30 60ರೂ
ದ್ರಾಕ್ಷಿ 90 120ರೂ
ದಾಳಿಂಬೆ 80 100ರೂ
ಬಾಳೆಕಂಬ ಒಂದು ಜೊತೆಗೆ 50 ರಿಂದ 100, ನಿಂಬೆ ಹಣ್ಣು ಒಂದಕ್ಕೆ 5 ರಿಂದ 10 ರೂಪಾಯಿ, ದೃಷ್ಟಿ ತೆಗೆಯಲು ಬಳಕೆ ಮಾಡುವ ಬೂದುಕುಂಬಳ ಕಾಯಿಗೆ ಈ ಬಾರಿ ಡಿಮ್ಯಾಂಡ್ ಸ್ವಲ್ಪ ಕಮ್ಮಿಯಾಗಿದೆ. ಬೆಲೆಯೂ ಕಡಿಮೆ ಇದ್ದು, ಕೆ.ಜಿ ಬೂದುಕುಂಬಳ 30 ರೂಪಾಯಿಯಾಗಿದೆ.
ಇವೆಲ್ಲದ್ದಕ್ಕೂ ಪೆಟ್ರೋಲ್ ಮತ್ತು ಡೀಸಲ್ ಬೆಲೆ ಏರಿಕೆ ಕಂಡಿರುವುದೇ ಕಾರಣ ಅನ್ನುತ್ತಿದ್ದಾರೆ ಮಾರಾಟಗಾರರು. ಇಷ್ಟೊಂದು ಬೆಲೆ ನೀಡಿ ಖರೀದಿ ಮಾಡುವವರ ಸಂಖ್ಯೆ ಕಡಿಮೆಯಾಗಿದೆ ಎನ್ನುತ್ತಾರೆ. ಈ ಹಿಂದೆ 500ರೂಪಾಯಿಗೆ ಎಲ್ಲಾವನ್ನು ಖರೀದಿ ಮಾಡಬಹುದಿತ್ತು. ಆದರೆ, ಈಗ ಅದನ್ನೇ ಖರೀದಿ ಮಾಡಲು ಎರಡು ಸಾವಿರ ರೂಪಾಯಿ ಬೇಕು, ಆದ್ದರಿಂದ ಎಲ್ಲಾವನ್ನು ಕಡಿಮೆ ಖರೀದಿಸಲಾಗುತ್ತಿದೆ ಎಂದು ಖರೀದಿದಾರರು ತಿಳಿಸಿದ್ದಾರೆ.
ಒಟ್ಟಿನಲ್ಲಿ ಕೆ ಆರ್ ಮಾರುಕಟ್ಟೆಯಲ್ಲಿ ಮಾತ್ರ ಜನವೋ ಜನ. ಆದರೆ, ಇಲ್ಲಿ ಕೊರೊನಾ ನಿಯಮವನ್ನು ಪಾಲಿಸುವವರೇ ಇಲ್ಲ. ಜನರು ಅತೀ ವಿರಳವಾಗಿ ಮಾಸ್ಕ್ ಧರಿಸಿದರೆ, ಸಾಮಾಜಿಕ ಅಂತರವನ್ನು ಪ್ರತಿಯೊಬ್ಬರು ಮರೆತೆಬಿಟ್ಟಿದ್ದಾರೆ.

ರು, ನನಗೆ ಜಿಲ್ಲಾಧ್ಯಕ್ಷ ಸ್ಥಾನ ಬೇಡ ಎಂದು ಸ್ಪಷ್ಟಪಡಿಸಿದರು.

More News