ನಾಡಿನ ಜನತೆಗೆ ಶುಭ ಕೋರಿದ ಮೂರು ಪಕ್ಷದ ನಾಯಕರು, ಭಕ್ತಿ, ಭಾವದಿಂದ ವಿಜಯದಶಮಿ ಆಚರಣೆ

ಬೆಂಗಳೂರು : ನಾಡಿನ ಸಮಸ್ತ ಜನತೆಗೆ ಮಹಾನವಮಿ ಹಾಗೂ ಆಯುಧ ಪೂಜೆಯ ಶುಭಾಶಯಗಳು. ಈ ಶುಭ ಸಂದರ್ಭದಲ್ಲಿ ಎಲ್ಲರಿಗೂ ಒಳ್ಳೆಯದಾಗಲಿ ಎಂದು ಆ ತಾಯಿ ಚಾಮುಂಡೇಶ್ವರಿಯನ್ನು ಭಕ್ತಿಪೂರ್ವಕವಾಗಿ ಪ್ರಾರ್ಥನೆ ಮಾಡಲಾಗುವುದು ಎಂದು ರಾಜ್ಯದ ಮೂರು ಪ್ರಮುಖ ಪಕ್ಷದ ಮುಖಂಡರು ಕೋರಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಎಲ್ಲರಿಗೂ ಹಬ್ಬದಶುಭಾಶಯಗಳ ಜತೆ, ಚಾಮುಂಡೇಶ್ವರಿ ಸಕಲ ಕಷ್ಟಗಳನ್ನು ದೂರ ಮಾಡಿ ಸುಖ ತರಲಿ ಎಂದು ಆಶಿಸಿದರು. ರಾಜ್ಯ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಆಯುಧ ಪೂಜೆ ನಡೆಯಿತು.

ಪೂಜೆಯಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಗಳಾದ ಬಿ.ಎಲ್ ಸಂತೋಷ್ ರವರು ಭಾಗವಹಿಸಿದ್ದರು.  ಬಿಜೆಪಿ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿಗಳಾದ ಅರುಣ್‌ ಕುಮಾರ್‌, ರಾಜ್ಯ ಉಪಾಧ್ಯಕ್ಷರಾದ ನಿರ್ಮಲ್‌ ಕುಮಾರ್‌ ಸುರಾನ ಸೇರಿದಂತೆ ಕಾರ್ಯಕರ್ತರು ಭಾಗಿಯಾಗಿದ್ದರು.

ಕಾಂಗ್ರೆಸ್ ನಿಂದ ಶುಭಾಶಯ

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಸದಾಶಿವನಗರ ನಿವಾಸದ ಬಳಿ ಗುರುವಾರ ಬಸವನಿಗೆ ನಮಿಸಿ, ಪೂಜೆ ಸಲ್ಲಿಸಿದರು. ರಾಜ್ಯದ ಮಹಾ ಜನತೆಗೆ ಆಯುಧ ಪೂಜೆ ಹಾಗೂ ವಿಜಯದಶಮಿ ಹಬ್ಬದ ಹಾರ್ದಿಕ ಶುಭಾಶಯಗಳನ್ನು ಅವರು ಕೋರಿದ್ದಾರೆ.

ಕಳೆದ ಎರಡು ವರ್ಷಗಳಿಂದ ಜನ ಸಂಕಷ್ಟ ಅನುಭವಿಸಿದ್ದು, ತಾಯಿ ಚಾಮುಂಡೇಶ್ವರಿ ಈ ಸಂಕಷ್ಟ ಬಗೆಹರಿಸಿ ಎಲ್ಲರಿಗೂ ಒಳ್ಳೆಯದನ್ನು ಮಾಡಲಿ. ಆರ್ಥಿಕ ವ್ಯವಸ್ಥೆ ಉತ್ತಮವಾಗಲಿ. ಆರೋಗ್ಯ, ಸಾಮಾಜಿಕ, ಶೈಕ್ಷಣಿಕವಾಗಿ ಎಲ್ಲರಿಗೂ ಒಳ್ಳೆಯದಾಗಲಿ. ಮಕ್ಕಳ ಶಾಲೆ ಆರಂಭವಾಗಿದ್ದು, ಅವರು ಶಿಕ್ಷಣದ ಬಗ್ಗೆ ಗಮನಹರಿಸಲಿ ಎಂದು ಕೋರಿದ್ದಾರೆ.

ಜೆಡಿಎಸ್ ನಿಂದ ಶುಭ ಕೋರಿಕೆ

ಮಹಾನವಮಿ ಹಾಗೂ ಆಯುಧ ಪೂಜೆ ಅಂಗವಾಗಿ ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಅವರು ಬಿಡದಿಯ ತೋಟದ ಮನೆಯಲ್ಲಿ ಹಬ್ಬವನ್ನು ಆಚರಿಸಿದರು.

ತಮ್ಮ ಆಯುಧಗಳಿಗೆ, ವಾಹನಗಳಿಗೆ ಪೂಜೆ  ಜತೆಗೆ ಗಂಗಾ ಪೂಜೆ ಹಾಗೂ ಗೋವಿನ ಪೂಜೆ ನೆರವೇರಿಸಿದರು. ತೋಟದಲ್ಲಿ ಕೆಲಸ ಮಾಡುವ ಎಲ್ಲರಿಗೂ ಸಿಹಿ ಹಂಚಿ ಸಂಭ್ರಮಿಸಿ, ನಾಡಿನ ಜನತೆಗೆ ಒಳಿತಾಗಲಿ ಎಂದು ಶುಭ ಕೋರಿದರು.

More News

You cannot copy content of this page