ಹುಬ್ಬಳ್ಳಿ : ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತ ೧೦೧ ನೇ ಸ್ಥಾನ ಪಡೆದಿದೆ, ಇದು ಪ್ರಧಾನಿ ಮೋದಿಯವರ ಕೊಡುಗೆ, ನಾನು ದೇಶ ಉದ್ದಾರ ಮಾಡುತ್ತೇನೆ, ಸ್ವರ್ಗ, ಅಚ್ಚೇ ದಿನ್ ಮಾಡ್ತಿನಿ ಎಂದವರು, ಇವಾಗ ಜನ ಹಸಿವಿನಿಂದ ಬಳಲುವಂತೆ ಮಾಡಿದ್ದಾರೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಅನ್ನಭಾಗ್ಯ ಯೋಜನೆ ಸೋಮಾರಿಗಳನ್ನ ಮಾಡ್ತಿದೆ ಎನ್ನೋ ಹೆಚ್ ಡಿಕೆ ಆರೋಪಕ್ಕೆ ಉತ್ತರ ನೀಡಿದ ಅವರು, ಹೊಟ್ಟೆ ತುಂಬಿದವರು ಹಾಗೇ ಹೇಳ್ತಾರೆ. ಹಸಿವು ಯಾರು ಅನುಭವಿಸಿದ್ದಾರೆ, ಅವರು ರ್ಯಾರು ಈ ರೀತಿ ಹೇಳಲ್ಲ, ಅವರು ಹೇಳಿದ್ದೆಲ್ಲಾ ವೇದ ವ್ಯಾಕ್ಯವಲ್ಲ ಎಂದು ಟಿಕೀಸಿದರು.
ಅಲ್ಪ ಸಂಖ್ಯಾತರಿಗೆ ಕಾಂಗ್ರೆಸ್ ನಲ್ಲಿ ಸ್ಥಾನಮಾನ ನೀಡ್ತಿಲ್ಲ ಎನ್ನೋ ಕಾಂಗ್ರೆಸ್ ಮುಖಂಡ ಸಿಎಂ ಇಬ್ರಾಹಿಂ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಇಬ್ರಾಹಿಂಗೆ ಎಂಎಲ್ ಸಿ ಮಾಡಿರೋದು ಯಾರು ಎಂದು ಪ್ರಶ್ನಿಸುವುದರ ಮೂಲಕ ಇಬ್ರಾಹಿಂಗೆ, ಸಿದ್ದರಾಮಯ್ಯ ಟಾಂಗ್ ನೀಡಿದರು.
ನಂಗೆ ಇಬ್ರಾಹಿಂ, ರಿಜ್ವಾನ್, ಜಮೀರ್ ಎಲ್ಲರೂ ಆಪ್ತರೇ, ಇಬ್ರಾಹಿಂ ನಂಗೆ ಸಿಕ್ಕಾಗ ಟಿಪ್ಪು ಬಗ್ಗೆ ಓದಿಕೊಳ್ಳಲು ಹೇಳ್ತಿನಿ, ಸುಮ್ನೆ ಇವಾಗ ಟಿಪ್ಪು ಜಯಂತಿ ವಿರೋಧ ಮಾಡೋದು ಸರಿಯಲ್ಲ ಎಂದು ತಿಳಿಸಿದರು.
ಶೆಟ್ಟರ್ – ಬೊಮ್ಮಾಯಿ ಒಂದೇ ಕಡೆ ಹೋಗ್ತಾರಾ ?
ಸಿದ್ದರಾಮಯ್ಯ ಮತ್ತು ಡಿಕೆಶಿವಕುಮಾರ್ ಬೇರೆ ಕಡೆ ಪ್ರಚಾರ ಮಾಡುತ್ತಿಲ್ಲ ಎಂಬ ವಿಚಾರಕ್ಕೆ ಮಾತನಾಡಿದ ಸಿದ್ದರಾಮಯ್ಯ, ಜಗದೀಶ್ ಶೆಟ್ಟರ್- ಸಿಎಂ ಬಸವರಾ ಬೊಮ್ಮಾಯಿ ಒಂದೇ ಕಡೆ ಹೋಗ್ತಾರಾ..? ಎಂದು ಪ್ರಶ್ನಿಸಿದರಲ್ಲದೆ, ಎಲ್ಲಾ ಕಡೆ ಕವರ್ ಮಾಡಬೇಕು ಅಂದ್ರೆ ಬೇರೆ ಬೇರೆ ಕಡೆ ಪ್ರಚಾರ ಮಾಡ್ಲೇಬೇಕು ಎಂದರು.
ಹಾನಗಲ್, ಸಿಂದಗಿ ನಮಗೆ ಒಳ್ಳೆಯ ವಾತಾವರಣವಿದೆ, ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲಲಿದ್ದಾರೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.
ಆರ್ ಎಸ್ ಎಸ್ ಹೊಗಳದಿದ್ರೇ ಖುರ್ಚಿ ಉಳಿಯಲ್ಲ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪದೇ ಪದೇ ಆರ್ ಆರ್ ಎಸ್ ನ ಹೊಗಳದಿದ್ದರೇ ಅವರ ಖುರ್ಚಿ ಉಳಿಯಯಲ್ಲಾ ಎಂದು ಹೇಳಿದ ಸಿದ್ದರಾಮಯ್ಯ, ಬೊಮ್ಮಾಯಿ ಪಾಪ ಆರ್ ಎಸ್ ಎಸ್ ನಿಂದ ಬಂದವರಲ್ಲ, ಅವರ ತಂದೆ ಕೂಡಾ ಆರ್ ಎಸ್ ಎಸ್ ನವರಲ್ಲ ಎಂದು ವ್ಯಂಗ್ಯವಾಡಿದರು.
ನಾವು ಅಧಿಕಾರಕ್ಕೆ ಬಂದ ಮೇಲೆ ಯಾರನಾದ್ರು ಸಿಎಂ ಮಾಡಿದ್ರು ನಂಗೇನು ಬೇಜಾರಿಲ್ಲ ಎಂದು ತಿಳಿಸಿದ ಅವರು, ಮುಸ್ಲಿಂ ಅವರನ್ನಾದ್ರು ಮಾಡ್ಲಿ, ದಲಿತರನ್ನಾದ್ರು ಮಾಡಲಿ, ಈ ವಿಚಾರ ಹೈಕಮಾಂಡ್ ಮತ್ತು ಶಾಸಕರಿಗೆ ಬಿಟ್ಟ ವಿಚಾರ ಎಂದು ಅಭಿಪ್ರಾಯಪಟ್ಟರು.
ನಾನು ಮಾಜಿ ಮುಖ್ಯಮಂತ್ರಿ ಬಿಎಸ್ ವೈ ಅವರನ್ನು ಭೇಟಿಯಾಗಿದ್ದು ಅಪ್ಪಟ ಸುಳ್ಳು ಎಂದು ಹೇಳಿದ ಸಿದ್ದರಾಮಯ್ಯ, ಯಾರಾದ್ರು ಇದನ್ನ ಪ್ರೂವ್ ಮಾಡಿದ್ರೆ ನಾನು ರಾಜಕೀಯದಿಂದ ನಿವೃತ್ತಿ ತೆಗೆದುಕೊಳ್ಳುತ್ತೇನೆ ಎಂದು ಸವಾಲು ಹಾಕಿದರಲ್ಲದೆ, ಬಿಎಸ್ ವೈ ಆರ್ ಎಸ್ ಎಸ್ ನಿಂದ ಬಂದವರು, ನಾನು ಅವರು ತದ್ವಿರುದ್ದ, ಅವರನ್ನ ಭೇಟಿಯಾಗಿದ್ದು ಸುಳ್ಳು, ಅಆಧಿಕಾರದಲ್ಲಿರೋರ ಮನೆ ಬಾಗಿಲಿಗೆ ನಾನು ಯಾವತ್ತು ಹೋಗಿಲ್ಲ. ಅದು ನನ್ನ ಪ್ರಿನ್ಸಿಪಲ್, ಹೀಗಾಗಿ ನಾನು ಬಿಎಸ್ ವೈ ಭೇಟಿಯಾಗಿಲ್ಲ ಎಂದು ಸ್ಪಷ್ಟಪಡಿಸಿದರು.
ಸಲೀಂ – ಉಗ್ರಪ್ಪ ಸಂಭಾಷಣೆ ಕೈವಾಡದ ಬಗ್ಗೆ ಅಲ್ಲಗಳೆದ ಸಿದ್ದರಾಮಯ್ಯ
ಸಲೀಂ-ಉಗ್ರಪ್ಪ ಸಂಭಾಷಣೆ ಹಿಂದೆ ಸಿದ್ದು ಕೈವಾಡ ಇದೆ ಎನ್ನೋ ಜಗದೀಶ್ ಶೆಟ್ಟರ್ ಆರೋಪ ಸಂಬಂಧ ಮಾತನಾಡಿದ ಅವರು, ಹಾಗಾದ್ರೆ, ಯತ್ನಾಳ್, ವಿಶ್ವನಾಥ್ ಅವರಿಗೂ ನಾನೇ ಹೇಳಿದ್ನಾ..?, ಹಿಂದೆ ಅನಂತಕುಮಾರ-ಬಿಎಸ್ ವೈ ಮಾತನಾಡಿದ್ದರು ಅದಕ್ಕು ನಾನೇ ಕಾರಣನಾ..?, ಇವರೆಲ್ಲಾ ಸಿಎಂ ಆದವರು ಹೀಗೆ ಮಾತನಾಡಿದ್ರೆ ಹೇಗೆ, ಎಲ್ಲದಕ್ಕೂ ಸಿದ್ದರಾಮಯ್ಯ ಟಾರ್ಗಟ್ ಮಾಡಿದ್ರೆ ಹೇಗೆ ಎಂದು ಪ್ರಶ್ನಿಸಿದರು.