2020ನೇ ಸಾಲಿನ ಬಸವಶ್ರೀ ಪ್ರಶಸ್ತಿ ಪಡೆದ ಇಸ್ರೋ ಮಾಜಿ ಅಧ್ಯಕ್ಷರಾದ ಡಾ.ಕೆ.ಕಸ್ತೂರಿ ರಂಗನ್

ಚಿತ್ರದುರ್ಗ: ಚಿತ್ರದುರ್ಗದ ಮುರುಘ ಮಠ ನೀಡುವ ಬಸವಶ್ರೀ ಪ್ರಶಸ್ತಿಯನ್ನು ಮಾಜಿ ಇಸ್ರೋ ಅಧ್ಯಕ್ಷ ಡಾ. ಕಸ್ತೂರಿ ರಂಗನ್ ಅವರಿಗೆ ನೀಡಿ ಗೌರವಿಸಲಾಯಿತು. ಮುರುಘ ಮಠದ ಪೀಠಾಧ್ಯಕ್ಷರಾದ ಮುರುಘ ಶರಣರು ಕಸ್ತೂರಿ ರಂಗನ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.
2020ನೇ ಸಾಲಿನ ಬಸವಶ್ರೀ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ, ಇಸ್ರೋ ಮಾಜಿ ಅಧ್ಯಕ್ಷರು, ಬಾಹ್ಯಾಕಾಶ ವಿಜ್ಞಾನಿಗಳಾದ ಡಾ.ಕೆ.ಕಸ್ತೂರಿ ರಂಗನ್, ಬಸವಶ್ರೀ ಪ್ರಶಸ್ತಿ ದೊರೆತಿರುವುದು ನನ್ನ ಸೌಭಾಗ್ಯ, ಇಂತಹ ಪ್ರಶಸ್ತಿ ನೀಡಿದ್ದಕ್ಕಾಗಿ ಶ್ರೀಗಳಿಗೆ ವಂದಿಸುತ್ತೇನೆ ಎಂದರು.
ಬಸವಣ್ಣನವರು ಒಬ್ಬ ಗುರುವಾಗಿ, ಸಮಾಜ ಸುಧಾರಕ ಕಾರ್ಯಕ್ಕೆ ಮಹತ್ವವವನ್ನು, ಗೌರವವನ್ನು ನೀಡಿದವರು. ಸಮಾಜಕ್ಕೆ ವಚನ ಸಂವಿಧಾನವನ್ನು ನೀಡಿದವರು. ಅನುಭವ ಮಂಟಪದ ಮೂಲಕ ಜಗತ್ತಿಗೆ ಮೊದಲ ಪ್ರಜಾಪ್ರಭುತ್ವದ ಮೌಲ್ಯವನ್ನು ತೋರಿಸಿಕೊಟ್ಟವರು ಎಂದು ಬಸವಣ್ಣನವರ ಸೇವೆಯನ್ನು ಮೆಲುಕು ಹಾಕಿದರು. ಅದರಂತೆಯೇ ಮುರುಘ ಮಠ ಮಾಡಿರುವ ಸಾಮಾಜಿಕ ಕಾರ್ಯವನ್ನೂ ಸ್ಮರಿಸಿದರು.

More News