ಬೆಂಗಳೂರು : ರಾಜ್ಯ ಮೂನ್ ಕಮಿಟಿಯು ಈದ್ ಮಿಲಾದ್ ಹಬ್ಬವನ್ನು ಮಂಗಳವಾರ ಆಚರಣೆ ಮಾಡಲು ನಿರ್ಧರಿಸಿರುವುದರಿಂದ ಅಂದೇ, ಸಾರ್ವತ್ರಿಕ ರಜೆಯನ್ನು ಮಂಜೂರು ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ.
ಈ ಹಿನ್ನೆಲೆಯಲ್ಲಿ ಹಿಂದೆ ಘೋಷಿಸಿದ್ದ ರಜೆಯನ್ನು ಬದಲಾವಣೆ ಮಾಡಲಾಗಿದೆ. ಅಕ್ಟೋಬರ್ 21 ರಂದು ಈ ಹಿಂದೆ ರಜೆಯನ್ನು ಘೋಷಿಸಲಾಗಿತ್ತು. ಆದರೆ ಈಗ ಅಕ್ಟೋಬರ್ 19 ಕ್ಕೆ ಅದನ್ ಬದಲಾಯಿಸಲಾಗಿದೆ.