ಬೆಂಗಳೂರು : ನಳೀನ್ ಕುಮಾರ್ ಕಟೀಲ್ ಒಬ್ಬ ಅವಿವೇಕಿ, ತಲೆಕೆಟ್ಟಿರುವ ವ್ಯಕ್ತಿ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕಿಡಿಕಾರಿದ್ದಾರೆ.
ರಾಹುಲ್ ಗಾಂಧಿ ಡ್ರಗ್ ಪೆಡ್ಲರ್ ಎಂಬ ನಳೀನ್ ಕುಮಾರ್ ಕಟೀಲ್ ಹೇಳಿಕೆ ವಿಚಾರ ಖಾರವಾಗಿ ಪ್ರತಿಕ್ರಿಯೆನೀಡಿರುವ ದಿನೇಶ್ ಗುಂಡೂರಾವ್, ಇಂತಹ ತಲೆ ಕೆಟ್ಟಿರುವ ವ್ಯಕ್ತಿಯನ್ನು ಬಿಜೆಪಿ ಕೂಡಲೇ ಅಧ್ಯಕ್ಷ ಸ್ಥಾನದಿಂದ ವಜಾ ಗೊಳಿಸುಬೇಕು ಎಂದು ಆಗ್ರಹಪಡಿಸಿದರು.
ಕಟೀಲ್ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ, ಇದು ಅತ್ಯಂತ ಕೀಳುಮಟ್ಟದ ಹಾಗೂ ಆಧಾರ ರಹಿತ ಆರೋಪ, ಕೊಳಕು ಮನಸ್ಸಿನ ಸಂಸ್ಕೃತಿ ಅವರದ್ದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಬಿಜೆಪಿ ಗೆ ನೈತಿಕತೆ ಇದ್ರೆ ಅವರನ್ನು ಅಧ್ಯಕ್ಷ ಸ್ಥಾನದಿಂದ ಕಿತ್ತಾಕಬೇಕು ಎಂದರು.
ರಾಹುಲ್ ಗಾಂಧಿಯವರ ತಂದೆ ದೇಶಕ್ಕೆ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ. ಇಂತಹ ವ್ಯಕ್ತಿಯನ್ನು ಇಂತಹ ಕೀಳುಮನಸ್ಸಿನ ವ್ಯಕ್ತಿ ಟಿಕೀಸಿರೋದು ಹಾಗೂ ಆತ ರಾಷ್ಟ್ರೀಯ ಪಕ್ಷದ ಅಧ್ಯಕ್ಷರಾಗಿರೋದು ನಿಜಕ್ಕೂ ನಾಚಿಕೆಗೇಡು ಎಂದುಆಕ್ರೋಶ ವ್ಯಕ್ತಪಡಿಸಿದರು. ಒಬ್ಬ ಸಂಸದನಾಗಿ, ರಾಜ್ಯಾಧ್ಯಕ್ಷ ನಾಗಿ ಈ ರೀತಿ ಮಾತಾಡ್ತಾರೆ ಅಂದರೆ ಅವ್ರ ಕೊಳಕು ಮನಸ್ಥಿತಿ ಬಗ್ಗೆ ಜನರಿಗೆ ಗೊತ್ತಾಗಿದೆ ಎಂದರು.
ಬ್ಲೂ ಫಿಲ್ಮಂ ನೋಡಿ, ಮಾಡಿದವರ ವಿರುದ್ಧ ಕ್ರಮಗೊಳ್ಳದ ನಾಲಾಯಕ್ ಅಧ್ಯಕ್ಷ
ದೇವರು, ಸಂಸ್ಕೃತಿ ಬಗ್ಗೆ ಮಾತಾಡೋರು ಇವರು, ಬ್ಲೂ ಫಿಲ್ಮ ನೋಡೋರು, ಬ್ಲೂ ಫಿಲ್ಮ ಮಾಡಿ ಸಚಿವ ಸ್ಥಾನ ಕಳೆದುಕೊಂಡಿರುವವರ ಬಗ್ಗೆ ಏನು ಕ್ರಮ ತೆಗೆದುಕೊಂಡಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ಬಿಜೆಪಿ ಒಂದು ಭ್ರಷ್ಟ ಪಕ್ಷ, ಕೇವಲ ಹಣದಲ್ಲಿ ಅಲ್ಲ, ನೈತಿಕತೆಯಲ್ಲೂ ಭ್ರಷ್ಟ ಪಕ್ಷವಾಗಿದೆ ಎಂದರು.
ದೇವರನ್ನು ಬಂಡವಾಳ ಮಾಡಿಕೊಂಡು ದೇಶದಲ್ಲಿ ಆಡಳಿತ ನಡೆಸುತ್ತಿರುವ ಇವರು, ನಾಲಿಗೆ ಮೇಲೆ ಯಾವುದೇ ರೀತಿಯ ಲಂಗು ಲಗಾಮು ಇಲ್ಲ, ಇವರಿಗೆ ಏನಾದರೂ ರಾಜಕೀಯ ಸಂಸ್ಕೃತಿ ಗೊತ್ತಿದೆಯಾ..? ಎಂದು ಪ್ರಶ್ನಿಸಿದ್ದಾರೆ. ಅಧ್ಯಕ್ಷರನ್ನ ನೇಮಕ ಮಾಡೋದು ಬಿಡೋದು ನಮ್ಮ ಪಕ್ಷದ ತೀರ್ಮಾನ, ಆದರೆ ಇದು ಅವರಿಗೆ ಏನು ಸಂಬಂಧ ಎಂದು ಕಿಡಿಕಾರಿದ್ದಾರೆ.

ಬಿಜೆಪಿಯನ್ನು ಕಂಟ್ರೋಲ್ ಮಾಡ್ತಿರೋದೇ ಈ ಆರ್ ಎಸ್ ಎಸ್, ರಾಹುಲ್ ಗಾಂಧಿ ನೇರವಾಗಿ ರಾಜಕಾರಣ ಮಾಡ್ತಿದ್ದಾರೆ ಆದರೆ, ನರೇಂದ್ರ ಮೋದಿ ತರ ಸುಳ್ಳು ಹೇಳಿಕೊಂಡು ರಾಜಕಾರಣ ಮಾಡ್ತಿಲ್ಲ, ಬಿಜೆಪಿ ನಾಯಕರಿಗೆ ನಾಚಿಕೆಯಾಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ವಿರುದ್ದ ದಿನೇಶ್ ಗುಂಡೂರಾವ್ ಕಿಡಿ
ಕುಮಾರಸ್ವಾಮಿಯವರ ಉದ್ದೇಶನೇ ಬೇರೆ ಇದೆ, ಅವರಿಗೆ ಯಾರಿಗೂ ಬಹುಮತ ಬರಬಾರದು, ಕೇವಲ 20-25 ಸೀಟ್ ಬರಬೇಕು ಎಂಬುದು ಅವರ ಅಪೇಕ್ಷೆ, ಇದಾದಾಗ ನಾನು ಕಿಂಗ್ ಮೇಕರ್ ಆಗಿ ಇರಬಹುದು, ಎಲ್ಲರನ್ನು ಬ್ಲಾಕ್ ಮೇಲ್ ಮಾಡಿಕೊಂಡು ಇರಬಹುದು ಎನ್ನುವುದು ಅವರ ರಾಜಕಾರಣ ಎಂದು ಟಿಕೀಸಿದರು.
ಅವರಿಗೆ ಯಾವುದೇ ತತ್ವ, ಸಿದ್ಸಾಂತ ಇಲ್ಲ, ಅವರ ವ್ಯಯಕ್ತಿಕ ಲಾಭಕ್ಕಾಗಿ ಅವ್ರು ಈ ರೀತಿ ಮಾಡ್ತಿದ್ದಾರೆ ಹೊರತು ಅವರ ಪಕ್ಷದ ಬಗ್ಗೆನೂ ಅವರಿಗೆ ಕಾಳಜಿ ಇಲ್ಲ ಎಂದು ಕಿಡಿಕಾರಿದರು. ಇಂತವರಿಂದ ನಾವು ಏನು ಕಲಿಯುವ ಅವಶ್ಯಕತೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.