ಬೆಂಗಳೂರು : ಮಹರ್ಷಿ ವಾಲ್ಮೀಕಿ ಜಯಂತ್ಯೋತ್ಸವವನ್ನು ನಾಳೆ ಆಚರಣೆ ಮಾಡಲಾಗುತ್ತಿದ್ದು, ಪ್ರತೀ ವರ್ಷದಂತೆ ಈ ಬಾರಿಯೂ ವಿವಿಧ ಕ್ಷೇತ್ರದ ಗಣ್ಯರಿಗೆ ಮಹರ್ಷಿ ವಾಲ್ಮೀಕಿ ಪ್ರಶಸ್ತಿಯನ್ನು ಆರು ಗಣ್ಯ ವ್ಯಕ್ತಿಗಳಿಗೆ ನೀಡಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ತಿಳಿಸಿದರು.
ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಶಸ್ತಿಗೆ ಅರ್ಹರನ್ನು ಆಯ್ಕೆ ಮಾಡಲು ಸಮಿತಿಯೊಂದನ್ನು ರಚಿಸಲಾಗಿತ್ತು. ಸಮಿತಿ ನೀಡಿದ ಶಿಫಾರಸ್ಸಿನಂತೆ 2020-21 ನೇ ಸಾಲಿನ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಪಡೆಯುವವರ ಹೆಸರನ್ನು ಘೋಷಿಸಿದರು.
ಕೆ.ಸಿ ನಾಗರಾಜ್, ಸಾಮಾಜಿ ಕ್ಷೇತ್ರದಿಂದ. ಕಸಾಪುರ ಗ್ರಾಮದವರು, ಲಕ್ಷ್ಮೀ ಗಣಪತಿ ಸಿದ್ದಿ, ಬೆಳಗಾವಿ ವಿಭಾಗದಿಂದ. ಸಿದ್ದಿ ಜನಾಂಗದವರಾಗಿದ್ದು ನಾಟಿ ವೈದ್ಯರಾಗಿದ್ದಾರೆ, ಪ್ರೊ. ಎಸ್.ಆರ್ ನಿರಂಜನ್, ಮೈಸೂರು ವಿಭಾಗದಿಂದ. ಶಿಕ್ಷಣ ಕ್ಷೇತ್ರದಿಂದ ಆಯ್ಕೆ, ಬಟಲಿ ಗೂಳಪ್ಪ, ಬಳ್ಳಾರಿ ಜಿಲ್ಲೆ. 25ವರ್ಷದಿಂದ ಅರಣ್ಯ ಉಳಿಸೋ ಕೆಲಸ ಮಾಡುತ್ತಿದ್ದಾರೆ, ಅಶ್ವಥ್, ಸಾಮಾಜ ಸೇವೆ. ಬೆಂಗಳೂರು ಮಹರ್ಷಿ ವಾಲ್ಮೀಕಿ ಗುರು ಪೀಠದಲ್ಲಿ 1979ರಿಂದ ಸೇವೆ ಹಾಗೂ ಜಂಬಯ್ಯ ನಾಯಕ್, ಪರಿಶಿಷ್ಟ ಪಂಗಡದ ಏಳಿಗೆಗೆ ಶ್ರಮಿಸುತ್ತಿರುವ ಇವರನ್ನು ಗುರುತಿಸಲಾಗಿದೆ ಎಂದು ಶ್ರೀರಾಮುಲು ವಿವರಿಸಿದರು,
ನಾಳೆ ಮುಖ್ಯಮಂತ್ರಿ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದು, ಐದು ಲಕ್ಷ ನಗದು, 25ಗ್ರಾಂ ಚಿನ್ನದ ಪದಕ ಪ್ರದಾನ ಮಾಡಲಾಗುವುದು ಎಂದರು.
ಕಿಡ್ನಿ ಮಾರಾಟಕ್ಕಿದೆ ಎಂದು ಕೆಎಸ್ಸಾರ್ಟಿಸಿ ಡ್ರೈವರ್ ಸ್ಟೇಟಸ್ ವಿಚಾರ
ಆರ್ಥಿಕ ಸಂಕಷ್ಟದಿಂದ ಕಿಡ್ನಿ ಮಾರಾಟಕ್ಕಿದೆ ಎಂದು ಕೆಎಸ್ ಆರ್ ಟಿಸಿ ಡ್ರೈವರ್ ಸ್ಟೇಟಸ್ ಹಾಕಿರುವ ವಿಚಾರ ಸಂಬಂಧ ಮಾತನಾಡಿದ ಅವರು, ಸಾರಿಗೆ ನೌಕರರಿಗೆ ವೇತನ ಸಮಸ್ಯೆ ಆಗುತ್ತಿಲ್ಲ, ಮೊನ್ನೆ ಸರ್ಕಾರದಿಂದ 171 ಕೋಟಿ ವೇತನ ಬಿಡುಗಡೆ ಆಗಿದೆ, ನಾನು ಇಲಾಖೆ ಹೊಣೆ ತಗೊಂಡ ನಂತರ ಹಿಂದೆ ವರ್ಗಾವಣೆ, ಅಮಾನತು ಮಾಡಿರುವುದನ್ನು ರದ್ದು ಪಡಿಸಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಸ್ಟೇಟಸ್ ಹಾಕಿರುವ ಚಾಲಕನಿಗೆ ಕಿರುಕುಳ ಕೊಟ್ಟಿದ್ದಾರೆ ಎನ್ನಲಾದ ಡಿಪೋ ಮ್ಯಾನೇಜರ್ ಗೆ ನೊಟೀಸ್ ನೀಡಲಾಗಿದೆ, ಸ್ಪಷ್ಟೀಕರಣ ಬಂದ ನಂತರ ವಿಚಾರಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಶ್ರೀರಾಮುಲು ತಿಳಿಸಿದರು.
ಎಸ್ಟಿಗೆ ಮೀಸಲಾತಿ ಹೆಚ್ಚಳ
ನಮ್ಮ ಸರ್ಕಾರ ಮೀಸಲಾತಿ ವಿಚಾರಕ್ಕೆ ಬದ್ಧವಾಗಿದೆ, ನ್ಯಾಯಮೂರ್ತಿ ಸುಭಾಷ್ ಅಡಿಯವರು ವರದಿ ಸಲ್ಲಿಸಲಿದ್ದಾರೆ, ವರದಿ ಬಂದ ನಂತರ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ನಮ್ಮ ಅವಧಿಯಲ್ಲೇ ಎಸ್ಟಿಗೆ ಮೀಸಲಾತಿ ಹೆಚ್ಚಳ ಮಾಡುವ ಕೆಲಸ ಮಾಡಲಾಗುವುದು, ಸಾಧಕ ಬಾಧಕ ನೋಡಿಕೊಂಡು ಸರ್ಕಾರ ನಿರ್ಧಾರ ಕೈಗೊಳ್ಳುತ್ತೆ ಎಂದು ತಿಳಿಸಿದರು.