ದುಬೈನಲ್ಲಿ ಇಂದು ನಡೆದ ವಿಶ್ವಕಪ್ ಟಿ-20 ಟೂರ್ನಿಯ ಎರಡನೇ ಅಭ್ಯಾಸ ಪಂದ್ಯದಲ್ಲಿ ಭಾರತ –ಆಸ್ಟ್ರೇಲಿಯಾ ತಂಡದ ವಿರುದ್ಧ ಭರ್ಜರಿಯಾಗಿ ಜಯ ದಾಖಲಿಸಿದೆ.
ನಾಯಕ ವಿರಾಟ್ ಕೊಯ್ಲಿ ಅನುಪಸ್ಥಿತಿಯಲ್ಲಿ ತಂಡದ ನಾಯಕರಾಗಿ ರೋಹಿತ್ ಶರ್ಮಾ ವಹಿಸಿದ್ದರು. ಆಸೀಸ್ ತಂಡದ ವಿರುದ್ದ ಟಾಸ್ ಸೋತ ಭಾರತಕ್ಕೆ ಬೌಲಿಂಗ್ ನೀಡಿತ್ತು. ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದ ಆಸ್ಟ್ರೇಲಿಯಾ ತಂಡ 20 ಓವರ್ ಗಳಲ್ಲಿ 153 ರನ್ ಗಳ ಗುರಿಯನ್ನು ನೀಡಿತ್ತು.

ಆಸೀಸ್ ನೀಡಿದ ಸಾಧಾರಣ ಮೊತ್ತವನ್ನು ಬೆನ್ನಟ್ಟಿದ ರೋಹಿತ್ ಶರ್ಮಾ ಪಡೆ ಕೇವಲ 17.5 ಓವರ್ ಗಳಲ್ಲಿ ಗುರಿಯನ್ನು ಮುಟ್ಟಿತ್ತು. ಎರಡು ವಿಕೆಟ್ ನಷ್ಠಕ್ಕೆ ಭಾರತ ಜಯಭೇರಿ ಸಾಧಿಸಿದೆ. ಆರಂಭಿಕ ಆಟಗಾರರಾದ ಕೆ ಎಲ್ ರಾಹುಲ್ 39, ಹಾಗೂ ರೋಹಿತ್ ಶರ್ಮಾ 60 ರನ್ ಬಾರಿಸಿ ಉತ್ತಮ ಆರಂಭವನ್ನ ತಂಡಕ್ಕೆ ನೀಡಿದರು.
ನಂತರ ಬಂದ ಹಾರ್ದಿಕ್ ಪಾಂಡ್ಯ 14, ಮತ್ತು ಸೂರ್ಯ ಕುಮಾರ್ ಯಾದವ್ 38 ತಂಡವನ್ನು ಗೆಲುವಿನತ್ತ ಕೊಂಡ್ಯೊಯ್ದರು. ರವಿಚಂದ್ರನ್ ಅಶ್ವಿನ್ ಅತ್ಯುತ್ತಮ ದಾಳಿ ನಡೆಸಿದ್ದು, ಎರಡು ಓವರ್ ಗಳಲ್ಲಿ ಕೇವಲ 8 ರನ್ ನೀಡಿ ಎರಡು ಅಮೂಲ್ಯ ವಿಕೆಟ್ ಪತನಗೊಳಿಸಿದರು.