ಯ್ಯಾವ ಮುಖಂಡರ ಜಾತಕ ಇದೆಯೋ ಅದನ್ನೆಲ್ಲಾ ಬಿಚ್ಚಿಡಿ : ಮಾಜಿ ಸಿಎಂ ಹೆಚ್ ಡಿ ಕೆ ಅವರಿಗೆ ಹೆಚ್ ವಿಶ್ವನಾಥ್ ಸವಾಲ್

ಬೆಂಗಳೂರು : ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿರುವ ವ್ಯೆಯಕ್ತಿಕ ಆರೋಪ ಪ್ರತ್ಯಾರೋಪಗಳಿಗೆ ಹೆಚ್ ವಿಶ್ವನಾಥ್ ಬೇಸರ ವ್ಯಕ್ತಪಡಿಸಿದ್ದು, ಪ್ರತಿಯೊಂದು ಸಲನೂ ಮಾಜಿ ಮುಖ್ಯಮಂತ್ರಿಗಳಾದ ಹೆಚ್ ಡಿ ಕುಮಾರಸ್ವಾಮಿ ಅವ್ರು ಎಲ್ಲರ ವಿಚಾರನೂ ಬಿಚ್ಚಿಡುತ್ತೇನೆ, ಬಿಚ್ಚಿಡುತ್ತೇನೆ ಅಂತಾ ಹೇಳೋ ಬದಲು ಯಾಕೆ ಬಿಚ್ಚಿಡುವುದಿಲ್ಲ, ಈಗಲೇ ವಿಚಾರಗಳನ್ನು ಸಾರ್ವಜನಿಕರ ಮುಂದೆ ಬಿಚ್ಚಿಡಿ ಎಂದು ಸವಾಲು ಹಾಕಿದರು.

ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಪ್ರಸಕ್ತ ಸಮಯ, ಚುನಾವಣೆ ಬಂದಾಗ ಇಂತಹ ಹೇಳಿಕೆಗಳನ್ನು ನೀಡುತ್ತೀರಿ. ಆದರೆ, ಇದುವರೆಗೂ ಯಾವ ನಾಯಕರ ವಿಚಾರನೂ ಬಿಚ್ಚಿಡುತ್ತಿಲ್ಲ. ಈಗ ಮತ್ತೆ ಅದೇ ವಿಚಾರ ಹೇಳುತ್ತಿದ್ದೀರಾ, ಯ್ಯಾವ ಯ್ಯಾವ ನಾಯಕರ ಜಾತಕ ನಿಮ್ಮ ಬಳಿ ಇದೆಯೋ ಅದನ್ನೆಲ್ಲಾ ಬಯಲು ಮಾಡಲು ಇದು ಸುಸಂದರ್ಭ ಎಂದು ವಿಶ್ವನಾಥ್ ಲೇವಡಿ ಮಾಡಿದರು.

ರಾಜ್ಯದಲ್ಲಿ ಆಡಳಿತ ಮಾಡುವ ನಮ್ಮ ಪಕ್ಷ, ವಿಪಕ್ಷಗಳು ಇರಬಹುದು, ತಮ್ಮತನವನ್ನೇ ಮರೆತು ಪರಸ್ಪರ ನಿಂದನೆಯಲ್ಲಿ ತೊಡಗಿಕೊಂಡಿದ್ದು ವಿಪರ್ಯಾಸ ಎಂದರು. ರಾಜ್ಯ ರಾಜಕಾರಣಕ್ಕೆ ವಿಶಿಷ್ಟವಾದ ಸ್ಥಾನ ಇತ್ತು, ಅದನ್ನು ಇವತ್ತು ಒಂದು ರೀತಿ ಬಾವಿಕಟ್ಟೆ ಹತ್ರ ಮಾತಾಡಿದಂತೆ ಮಾತಾಡಿ, ಆ ಸ್ಥಾನಕ್ಕೆ ಕುತ್ತು ತಂದಿದ್ದಾರೆ. ಕರ್ನಾಟಕದ ಜನ ಇದನ್ನು ಮೆಚ್ಚುವುದಿಲ್ಲ ಎಂದು ವಿಶ್ವನಾಥ್ ತಿಳಿಸಿದರು.

ಅವನು ಹೆಬ್ಬೆಟ್ಟು, ಇವನು ?

ವ್ಯಕ್ತಿಯೊಬ್ಬನನ್ನು ಟೀಕಿಸಲು ಹತ್ತು ಹಲವಾರು ವಿಚಾರಗಳಿವೆ. ಅವುಗಳನ್ನೆಲ್ಲಾ ಬಿಟ್ಟು ಅವನು ಹೆಬ್ಬೆಟ್ಟು, ಇವನು ಇನ್ನೊಂದು ಅಂತ ಹೇಳೋದು ಸರಿಯಲ್ಲ, ವ್ಯಯಕ್ತಿಕ ವಿಚಾರಗಳ ಬಗ್ಗೆ ಯಾಕೆ ಇವರಿಗೆ ಅಷ್ಟೊಂದು ಕಾತರ ಎಂದು ಟಿಕೀಸಿದರು. 

ಅಭಿವೃದ್ದಿ ವಿಚಾರಗಳನ್ನು ಬದಿಗೊತ್ತಿ, ನಿಮಗೆ ಇಷ್ಟು ಹೆಂಡತಿಯರು, ಅವನು ಹೆಬ್ಬೆಟ್ಟು ಅಂತಾ ಮಾತನಾಡುತ್ತಾರೆ, ಇದು ಒಳ್ಳೆಯ ಸಂಸ್ಕೃತಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಮಾಜಿ ಸಚಿವ ಹೆಚ್ ವಿಶ್ವನಾಥ್, ತಮ್ಮ ಪಕ್ಷ ಬಿಜೆಪಿ ಮುಖಂಡರು ಹೇಳಿರುವ ಹೇಳಿಕೆಗಳಿಗೂ ಟಾಂಗ್ ನೀಡಿದ ವಿಶ್ವನಾಥ್ ಇಂತಹ ಸಂಸ್ಕೃತಿ ಸರಿಯಲ್ಲ ಎಂದು ಕಿಡಿಕಾರಿದರು.

ಭಾರತದ ಪ್ರಧಾನಿಗೆ ಹೆಬ್ಬೆಟ್ಟು ಅಂತಾರೆ. ಆದರೆ, ತಮಿಳುನಾಡಿನ ಕಾಮರಾಜ್ ನಾಡರ್ ಅವರು ಕೂಡ ಹೆಬ್ಬೆಟ್ಟು ಆಗಿದ್ದರು. ಆದ್ರೆ ಕಾಮರಾಜ ಸೂತ್ರವನ್ನ ಅದೇ ಹೆಬ್ಬೆಟ್ಟು ವ್ಯಕ್ತಿ ನೀಡಿದ್ದಾರೆ. ಒಂದು ಜಿಲ್ಲೆಗೆ ಪ್ರಿಂಟಿಂಗ್ ಟೆಕ್ನಾಲಜಿ, ಪಟಾಕಿ, ಮೋಟಾರ್ ಮುಂತಾದವುಗಳನ್ನು ಪ್ರತೀ ಜಿಲ್ಲೆಗೆ ಕೊಡುಗೆಯಾಗಿ ನೀಡಿದ್ದಾರೆ, ಅವರ ಇಂತಹ ಹಲವು ಸಾಧನೆಗೆ ಎಂದೂ ಅವರ ಹೆಬ್ಬೆಟ್ಟು ಅಡ್ಡಿಪಡಿಸಿರಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಖಡಕ್ ಎಚ್ಚರಿಕೆ ನೀಡಿದರು.

ಭಾರತದ ಪ್ರಧಾನಿ, ಅತ್ಯಂತ ಉನ್ನತವಾದ ಹುದ್ದೆ, ಆ ಹುದ್ದೆಯಿಂದ ವ್ಯಕ್ತಿಗೆ ಗೌರವ ಸಲ್ಲುತ್ತದೆ, ಆದ್ದರಿಂದ ಅಂತಹ ಪದವಿಯ ಬಗ್ಗೆ ಲಘುವಾಗಿ ಮಾತನಾಡೋದು ಸರಿಯಲ್ಲ ಎಂದು ತಾಕೀತು ಮಾಡಿದರು. ಅದರಲ್ಲೂ ಹಿಂದುಳಿದ ವರ್ಗದವರು, ಅಹಿಂದ ಅಂತೀರಾ, ಅವರೂ ಹಿಂದುಳಿದ ವರ್ಗದಿಂದ ಬಂದವರು ಅಂತಹವರ ಬಗ್ಗೆನೇ ನೀವು ಮಾತನಾಡೋದು ಸರಿಯಲ್ಲ ಎಂದು ವಿಶ್ವನಾಥ್, ಸಿದ್ದರಾಮಯ್ಯ ಅವರನ್ನು ಪರೋಕ್ಷವಾಗಿ ಮಾತಿನಲ್ಲೇ ಚುಚ್ಚಿದರು. 

ಯಡಿಯೂರಪ್ಪ ಅವರ ವಿರುದ್ಧ ಹರಿಹಾಯ್ದ ವಿಶ್ವನಾಥ್

ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ರಾಹುಲ್ ಗಾಂಧಿ ಬಗ್ಗೆ ಅಧ್ಯಕ್ಷರು ಹಾಗೆ ಹೇಳಬಾರದು ಅಂದಿದ್ದನ್ನು  ಸ್ವಾಗತ ಮಾಡ್ತುವುದಾಗಿ ಹೇಳಿದ ಹಳ್ಳಿಹಕ್ಕಿ, ಅಭಿವೃದ್ಧಿ ದೃಷ್ಟಿಯಿಂದ ಚರ್ಚೆ ಮಾಡಲು ಬೇಕಾದಷ್ಟು ವಿಷಯಗಳಿವೆ, ರೈತರ ದುಃಖ ದುಮ್ಮಾನಗಳಿವೆ ಎಂದರು.

ಇದೇ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಭ್ರಷ್ಟಾರದ ಬಗ್ಗೆ ಪರೋಕ್ಷವಾಗಿ ಹರಿಹಾಯ್ದ ವಿಶ್ವನಾಥ್, ಯಡಿಯೂರಪ್ಪ ಅವರು ಇತ್ತೀಚೆಗೆ ರಸ್ತೆ ಉದ್ಘಾಟನೆ ಮಾಡಿದ್ರು, ಆದ್ರೆ, ಅದು ನಾಲ್ಕೇ ದಿನಕ್ಕೆ ಕಿತ್ತು ಬಂತು, ಹಾಗೆಯೇ ಎಂಜಿ ರಸ್ತೆಯಲ್ಲಿ ೫ ಕೋಟಿ ಕಾಮಗಾರಿಯ ರಸ್ತೆ ಉದ್ಘಾಟಿಸಿದ್ದರು. ಅವರು ಕಾರ್ಯಕ್ರಮ ಮುಗಿಸಿ ಹೋಗುತ್ತಿರುವಾಗಲೇ ಜೋರು ಮಳೆ ಶುರವಾಯ್ತು, ಆದ್ರೆ, ರಸ್ತೆ ಮಳೆಯಲ್ಲಿ ಕೊಚ್ಚಿ ಹೋಯ್ತು ಎಂದು ಲೇವಡಿ ಮಾಡಿದರು.

ಇದರಿಂದ ಅವರು ರಾಜ್ಯದಲ್ಲಿ ಭ್ರಷ್ಟಾಚಾರ ಅದರಲ್ಲೂ ಬಿಜೆಪಿ ಸರ್ಕಾರದಲ್ಲಿ ಯಾವ ರೀತಿಯಲ್ಲಿ ಅವ್ಯವಹಾರಗಳು ನಡೆಯುತ್ತಿವೆ ಎಂಬುದನ್ನು ಉದಾಹರಣೆ ಸಹಿತ ವಿವರಿಸಿದರು.

ಬಿಜೆಪಿ ಅಧ್ಯಕ್ಷರ ಮಾತು ಅವರ ಸಂಸ್ಕೃತಿಗೆ ತಕ್ಕುದ್ದಲ್ಲ 

ಮೂರು ಪಾರ್ಟಿಯವರು ಬಾಯಿಗೆ ಬಂದಂತೆ ಮಾತನಾಡಿ,  ಯುವಕರಿಗೆ ಕಲಿಸೋದು ಇದೇನಾ? ಎಂದು ಪ್ರಶ್ನಿಸಿದ ಹೆಚ್ ವಿಶ್ವನಾಥ್, ಬಿಜೆಪಿ ಅಧ್ಯಕ್ಷರ ಮಾತು ಅವರ ಸಂಸ್ಕೃತಿಗೆ ತಕ್ಕುದ್ದಾಗಿಲ್ಲ ಎಂದು ಆರೋಪಿಸಿದರು. ತಮ್ಮ ಪಕ್ಷದವರೂ ತಪ್ಪು ಮಾಡಿದರು ಅದೂ ತಪ್ಪೇ ಎಂದು ವಿಶ್ವನಾಥ್ ಹೇಳುವುದರ ಮೂಲಕ,  ತಮ್ಮಪಕ್ಷದ ಅಧ್ಯಕ್ಷರನ್ನು ತರಾಟೆಗೆ ತೆಗೆದುಕೊಂಡರು.

More News

You cannot copy content of this page