‘ಮನ್ನತ್’ ನಿಂದ ಹೊರಬಂದ ಶಾರುಖ್ : ಅರ್ಥರ್ ಜೈಲಿಗೆ ಭೇಟಿ

ಮುಂಬೈ : ಬಾಲಿವುಡ್ ಬಾದ್ ಷಾ ಶಾರುಖ್ ಖಾನ್ ಇಂದು ತಮ್ಮ ನಿವಾಸ ಮನ್ನತ್ ನಿಂದ ಹೊರಬಂದಿದ್ದಾರೆ. ಪುತ್ರ ಆರ್ಯನ್ ಖಾನ್ ಬಂಧನದ ಬಳಿಕ ಇಂದು ಮೊದಲ ಬಾರಿಗೆ ಹೊರಬಂದು ಅರ್ಥರ್ ರೋಡೋನಲ್ಲಿರುವ ಜೈಲಿಗೆ ತೆರಳಿ ಮಗವನ್ನು ಭೇಟಿಯಾದರು.
ಕ್ರೂಸ್ ಹಡಗಿನಲ್ಲಿ ನಡೆದ ಡ್ರಗ್ಸ್ ಪಾರ್ಟಿಯಲ್ಲಿ ಭಾಗಿಯಾಗಿದ್ದಾರೆ ಎಂಬಆರೋಪದ ಹಿನ್ನೆಲೆಯಲ್ಲಿ ಆರ್ಯನ್ ಖಾನ್ ನನ್ನು ಎನ್ ಸಿ ಬಿ ಪೊಲೀಸರು ಬಂಧಿಸಿದ್ದರು. ಪ್ರಸ್ತುತ ಆರ್ಯನ್ ಖಾನ್ ನ್ಯಾಯಾಂಗ ಬಂಧನದಲ್ಲಿದ್ದು, ಅರ್ಥರ್ ರೋಡ್ ಜೈಲಿನಲ್ಲಿಡಲಾಗಿದೆ. ಬಂಧನದ ಬಳಿಕ ಪುತ್ರನನ್ನು ಮೊದಲ ಬಾರಿಗೆ ಭೇಟಿಯಾದ ಶಾರುಖ್ ಖಾನ್ ಸುಮಾರು ಅರ್ಧ ಗಂಟೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.


ಶಾರುಖ್ ಅವರು ತಮ್ಮ ಪುತ್ರನಿಗೆ ನಿನ್ನೆ ಜಾಮೀನು ಸಿಗುವ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ, ನ್ಯಾಯಾಲಯ ಆರ್ಯನ್ ಖಾನ್ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ಹಿನ್ನಲೆಯಲ್ಲಿ ಇಂದು ಪುತ್ರನನ್ನು ನೋಡಿ ಮನೆಗೆ ತೆರಳಿದ್ದಾರೆ.
ಜೈಲಿಗೆ ಶಾರುಖ್ ಖಾನ್ ಭೇಟಿ ನೀಡಿದ ಸಂದರ್ಭದಲ್ಲಿ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಲು ಅವರು ನಿರಾಕರಿಸಿದ್ದು, ಪ್ರತಿಯೊಬ್ಬರಿಂದ ಅಂತರ ಕಾಯ್ದುಕೊಂಡಿದ್ದರು.
ಶಾರುಖ್ ಮನೆ ಮೇಲೆ ಎನ್ ಸಿ ಬಿ ದಾಳಿ ನಡೆದಿಲ್ಲ
ಶಾರುಖ್ ಖಾನ್ ಮನೆಗೆ ಎನ್‌ಸಿಬಿ ಪೊಲೀಸರು ದಾಳಿ ನಡೆಸಿ, ಶೋಧ ನಡೆಸಿದ್ದಾರೆ ಎಂಬ ಮಾಹಿತಿಯನ್ನು ಎನ್ ಸಿ ಬಿ ಅಧಿಕಾರಿಗಳು ಅಲ್ಲಗಳೆದಿದ್ದಾರೆ. ಶಾರುಖ್ ಖಾನ್ ಅವರಿಗೆ ಯಾವುದೇ ರೀತಿಯ ಸಮನ್ಸ್ ನೀಡಿಲ್ಲ ಕೇವಲ ಪೇಪರ್ ವರ್ಕ್‌ಗಾಗಿ ಎನ್ ಸಿ ಬಿ ಅಧಿಕಾರಿಗಳು ತೆರಳಿರುವುದಾಗಿ ಮೂಲಗಳು ತಿಳಿಸಿವೆ.

More News

You cannot copy content of this page