ನೂರು ಕೋಟಿ ವ್ಯಾಕ್ಸನೇಷನ್ಸ್​ಗೆ ಪ್ರಧಾನಿ ಫುಲ್ ​ಖುಷ್​ : ಮೇಕ್ ಇನ್ ಇಂಡಿಯಾ ಮಂತ್ರ ಪಠಿಸಿ ಚೀನಾಗೆ ಟಾಂಗ್​

ನವದೆಹಲಿ : ಭಾರತ ದೇಶದಲ್ಲಿ ಕರೊನಾ ಮಹಾಮಾರಿ ವೈರಸ್ ಗೆ​ ಆರ್ಭಟಕ್ಕೆ ಬ್ರೇಕ್​ ಬಿದ್ದಿದೆ, ಅದಕ್ಕೆ ಕಾರಣ ದೇಶದಲ್ಲಿ ನಡೆಯುತ್ತಿರುವ ಬೃಹತ್​ ಲಸಿಕಾ ಅಭಿಯಾನ. ಜನವರಿ 16 ರಿಂದ ಆರಂಭವಾದ ವ್ಯಾಕ್ಸಿನೇಷನ್ ಡ್ರೈವ್, ಅತ್ಯಂತ ವೇಗ ಪಡೆದುಕೊಂಡಿದ್ದು, ನಿನ್ನೆಗೆ ಶತಕೋಟಿ ಡೋಸ್​ ಮೈಲಿಗಲ್ಲನ್ನ ದಾಟಿದೆ. ಇದರಿಂದ ಮೋದಿ ಲಸಿಕೆ ಎಂದು ಟಿಕೀಸುವವರಿಗೆ ಸೂಕ್ತ ರೀತಿಯಲ್ಲಿ ಜನರೇ ಉತ್ತರ ನೀಡಿದ್ದಾರೆ ಎಂದು ಹೇಳಿದ್ದಾರೆ.  

ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶದ ಜನರನ್ನು ಉದ್ದೇಶಿಸಿ ಇಂದು ಮಾತನಾಡಿದ್ರು. ದೇಶದಲ್ಲಿ 130 ಕೋಟಿಗೂ ಅಧಿಕ ಜನಸಂಖ್ಯೆ ಹೊಂದಿರೋ ಭಾರತದಲ್ಲಿ ಪ್ರತಿಯೊಬ್ಬರಿಗೂ ಲಸಿಕೆ ನೀಡುವುದು ಅಂದ್ರೆ ಸುಲಭದ ಮಾತೇ ಅಲ್ಲ. ಆದ್ರೆ, ನಿನ್ನೆಗೆ ಭಾರತದಲ್ಲಿ ಶತಕೋಟಿ ಡೋಸ್​ಗಳನ್ನ ವಿತರಿಸಲಾಗಿದೆ.

ಜಗತ್ತೇ ಅಚ್ಚರಿ ಪಡುವಂತಹ ಸಾಧನೆ

ಈ ಮೂಲಕ ಲಸಿಕಾ ಅಭಿಯಾನದಲ್ಲಿ ಜಗತ್ತೇ ಅಚ್ಚರಿಯಿಂದ ನೋಡುವಂತಹ ಸಾಧನೆ ನಮ್ಮ ದೇಶ ಮಾಡಿದೆ. ಇದು ಪ್ರಧಾನಿ ಮೋದಿ ಅವರಿಗೆ ಖುಷಿ ತಂದಿದ್ದು, ಅವರನ್ನು ಸಂತಸ ಅಲೆಯಲ್ಲಿ ತೇಲುವಂತೆ ಮಾಡಿದೆ. ವಾಕ್ಸಿನೇಷನ್ ಗೆ ಹತ್ತು ಹಲವು ಸವಾಲುಗಳು ಬಂದಿದ್ದು, ಅವುಗಳನ್ನು ಮೆಟ್ಟಿ ನಿಂತು ನೂರು ಕೋಟಿ ವ್ಯಾಕ್ಸಿನೇಷನ್ ವಿತರಿಸಿ ಹೊಸ ಮೈಲಿಗಲ್ಲಿನ ಸಾಧನೆ ಮಾಡಲಾಗಿದೆ ಎಂದು ಮೋದಿ ಹೇಳಿದರು.  

ಲಸಿಕಾ ಅಭಿಯಾನದಲ್ಲಿ ಯಾವುದೇ ರೀತಿಯ ವಿಐಪಿ ಸಂಸ್ಕೃತಿ ತೋರದೇ,  ಪ್ರತಿಯೊಬ್ಬರಿಗೂ ಶ್ರೀಸಾಮಾನ್ಯರಿಗೂ  ಲಸಿಕೆ ನೀಡಲಾಗಿದೆ. ಇದರಿಂದ ನಮ್ಮ ದೇಶ ಸದೃಢವಾಗಿದೆ ಎಂದು ಪ್ರತಿಯೊಬ್ಬರಿಗೂ ಮನವರಿಕೆ ಮಾಡಲಾಗಿದೆ ಎಂದರಲ್ಲದೆ, ಇದರಿಂದ ಸ್ವದೇಶಿ ಕರೊನಾ ಲಸಿಕೆಗಳಿಂದ ಭಾರತೀಯರಿಗೆ ಸ್ವದೇಶಿ ಉತ್ಪನ್ನದ ಮಹತ್ವದ ಬಗ್ಗೆ  ಅರಿವು ಮೂಡಿದೆ.

ಸ್ವದೇಶಿ ಉತ್ವನ್ನಗಳಿಗೆ ಬೇಡಿಕೆ

ಸ್ವದೇಶಿ ಉತ್ಪನ್ನಗಳನ್ನ ಖರೀದಿಸಲು ಜನರು ಮುಂದಾಗಿದ್ದು, ಮೇಡ್​ ಇನ್ ಇಂಡಿಯಾಗೆ ಪ್ರೋತ್ಸಾಹಿಸಿದ್ದಾರೆ. ಹೆಚ್ಚು ಉತ್ಪನ್ನಗಳು ನಮ್ಮಲ್ಲೇ ತಯಾರಿಗೆ ಅವುಗಳಿಗೆ ಬೇಡಿಕೆಯೂ ಬರುತ್ತಿದೆ ಎಂದರು. ಇದರಿಂದ  ಹಲವು ವಿದೇಶಿ ಕಂಪನಿಗಳು ಭಾರತದಲ್ಲಿ ಬಂಡವಾಳ ಹೂಡಲು ಆಸಕ್ತಿ ತೋರುತ್ತಿವೆ ಎಂದು ವಿವರಿಸಿದರು.  

ವಿದೇಶಿ ಕಂಪನಿಗಳು ಭಾರತ ದೇಶದಲ್ಲಿ ಬಂಡವಾಳ  ಹೂಡುವುದರಿಂದ ಹೊಸ  ಉದ್ಯೋಗಗಳು ಸೃಷ್ಟಿಯಾಗಲಿವೆ, ಇದರಿಂದ ಹೊಸ ಯುಗ ಆರಂಭವಾದಂತೆ ಎಂದು ತಿಳಿಸಿದರು. ಸದ್ಯದಲ್ಲೇ ಕೊವ್ಯಾಕ್ಸಿನ್​ಗೆ ವಿಶ್ವ ಆರೋಗ್ಯ ಸಂಸ್ಥೆಯು ಮಾನ್ಯತೆ ನೀಡುವ ಸಾಧ್ಯತೆಗಳಿವೆ ಎಂದು ಮೋದಿ ಅಭಿಪ್ರಾಯಪಟ್ಟರು.

ಕೋವ್ಯಾಕ್ಸಿನ್ ಗೆ ಸದ್ಯದಲ್ಲೇ ವಿಶ್ವ ಆರೋಗ್ಯ ಸಂಸ್ಥೆ ಮಾನ್ಯತೆ

ಕೊವ್ಯಾಕ್ಸಿನ್​ ಲಸಿಕೆ ಭಾರತದಲ್ಲಿ ಕರೊನಾ ಮಾಹಾಮಾರಿಗೆ ರಾಮಬಾಣವಾಗಿ ಬಳಕೆಯಾಗ್ತಿದೆ. ಆದ್ರೆ, ವಿದೇಶಿಗಳಲ್ಲಿ ಈ ವ್ಯಾಕ್ಸಿನ್​ ಬಳಕೆಗೆ ಇನ್ನು ಅನುಮತಿ ಸಿಕ್ಕಿಲ್ಲ. ಸದ್ಯದಲ್ಲೇ ಕೊವ್ಯಾಕ್ಸಿನ್​ಗೆ ವಿಶ್ವ ಆರೋಗ್ಯ ಸಂಸ್ಥೆ ಮಾನ್ಯತೆ ನೀಡುವ ವಿಶ್ವಾಸವನ್ನ ಚೇರ್​ಮನ್, ಹಾಗೂ ಮ್ಯಾನೇಜಿಂಗ್ ಡೈರೆಕ್ಟರ್ ಆಶಯ ವ್ಯಕ್ತಪಡಿಸಿದ್ದಾರೆ ಎಂದು ಮೋದಿ ವಿವರಿಸಿದರು.

ಇನ್ನು ಉಳಿದವರು ವಾಕ್ಸಿನ್ ಅನ್ನು ಪಡೆಯುವುದರ ಮೂಲಕ ಕೊರೊನಾ ಹೊಡೆದೊಡಿಸಲು ಮುಂದಾಗಬೇಕೆಂದು ಇದೇ ಸಂದರ್ಭದಲ್ಲಿ ಕರೆ ನೀಡಿದರು.

ಎಚ್ಚರಿಕೆಯ ದೀಪಾವಳಿ ಸಡಗರ ಇರಲಿ

ವಾಕ್ಸಿನ್ ಪಡೆಯಲಾಗಿದೆ ಎಂಬ ಕಾರಣಕ್ಕೆ ಮುಂಬರುವ ಹಬ್ಬಗಳಲ್ಲಿ ಮೈಮರೆಯಬಾರದು ಎಂದು ಎಚ್ಚರಿಕೆ ನೀಡಿದ ಅವರು, ಅಗತ್ಯ ಕ್ರಮಗಳನ್ನು ಕೈಗೊಂಡು ಹಬ್ಬವನ್ನು ಆಚರಿಸಬೇಕೆಂದು ಕರೆ ನೀಡಿದರು. ದೀಪಾವಳಿ ಸಂದರ್ಭದಲ್ಲಿ ಪ್ರತಿಯೊಬ್ಬರು ಸಾಮಾಜಿಕ ಅಂತರ ಹಾಗೂ ಮಾಸ್ಕ ಧರಿಸುವುದರ ಮೂಲಕ ಆಚರಣೆ ಮಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಜನತೆಗೆ ಕರೆ ನೀಡಿದರು.

ಭಾರತಕ್ಕೆ ಲಸಿಕೆಗಳು ಸಿಗಲಿದೆಯೇ ಎಂಬ ಅನೇಕ ಪ್ರಶ್ನೆಗಳಿಗೆ ನೂರೂ ಕೋಟಿ ಡೋಸ್ ಲಸಿಕೆ ಉತ್ತರ ನೀಡಿದೆ ಎಂದ ಪ್ರಧಾನಿ, ದೇಶದ ಲಸಿಕೆ ಅಭಿಯಾನವು ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಹಾಗೂ ಸಬ್ ಕಾ ವಿಶ್ವಾಸ್ ಔರ್ ಸಬ್ ಕಾ ಪ್ರಯಾಸ್ ಮಂತ್ರದೊಂದಿಗೆ ಟೀಕಾಕಾರಿಗೆ ಮೋದಿ ತೀಕ್ಷ್ಣವಾದ ಉತ್ತರ ನೀಡಿದರು.

More News

You cannot copy content of this page