ಭಾರತ-ಪಾಕಿಸ್ತಾನ ಇಂದು ಮುಖಾಮುಖಿ, ಕೊಯ್ಲಿ ನಾಯಕತ್ವದ ಕೊನೆಯ ಟಿ-20 ಟೂರ್ನಿ

ದುಬೈ : ದುಬೈನಲ್ಲಿ ನಡೆಯುತ್ತಿರುವ ಟಿ -20 ಕ್ರಿಕೆಟ್ ವಿಶ್ವಕಪ್ ನಲ್ಲಿ ಇಂದು ಹೈ ವೂಲ್ಟೇಜ್ ಪಂದ್ಯ, ಬದ್ದ ವೈರಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ಇಂದು ಸಂಜೆ ಏಳೂವರೆಗೆ ಪಂದ್ಯ ನಡೆಯಲಿದೆ.
ಭಾರತ ತಂಡಕ್ಕೆ ವಿಶ್ವಕಪ್ ಟೂರ್ನಿಯಲ್ಲಿ ತನ್ನ ಇತಿಹಾಸವನ್ನು ಮುಂದುವರೆಸುವ ಛಲ ಒಂದೆಡೆಯಾದರೆ, ಭಾರತ ತಂಡದ ನಾಗಾಲೋಟಕ್ಕೆ ತಡೆಯೊಡ್ಡಿ ಹೊಸ ಇತಿಹಾಸ ನಿರ್ಮಿಸುವ ಛಲದೊಂದಿಗೆ ಪಾಕಿಸ್ತಾನ ತಂಡ ಕಣಕ್ಕಿಳಿಯಲಿದೆ. ಜಗತ್ತಿನ ಬದ್ದ ವೈರಿಗಳ ಸೆಣಸಾಟವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ.
ಉಭಯ ದೇಶಗಳ ನಡುವಣ ಹದಗೆಟ್ಟಿರುವ ರಾಜಕೀಯ ಸಂಬಂಧಗಳಿಂದಾಗಿ ಕ್ರೀಡಾ ತಂಡಗಳು ಮುಖಾಮುಖಿಯಾಗುತ್ತಿವೆ. ಹಾಗೆಯೇ, ಕಾಶ್ಮೀರದಲ್ಲಿ ನಡೆಯುತ್ತಿರುವ ಹತ್ಯೆಗೆ ಪಾಕಿಸ್ತಾನ ಕುಮ್ಮಕ್ಕು ನೀಡುತ್ತಿದೆ ಎಂಬ ಕಾರಣಕ್ಕಾಗಿ ಪಂದ್ಯಗಳು ರದ್ದಾಗಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಹಲವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇವೆಲ್ಲದರ ನಡುವೆಯೇ ಇಂದು ಸಂಜೆ ಪಂದ್ಯ ನಡೆಯುತ್ತಿರುವೆದು ಅನೇಕರ ಅಸಮಾಧಾನಕ್ಕೂಕಾರಣವಾಗಿದೆ.
ಎಲ್ಲಾ ಪಂದ್ಯಗಳಂತೆ ಇದೂ ಒಂದು ಎಂದು ಭಾರತ ತಂಡದ ನಾಯಕ ವಿರಾಟ್ ಕೊಯ್ಲಿ ಹೇಳಿದ್ದಾರೆ. ಆದರೂ ಕೂಡ ಉಭಯ ತಂಡಗಳು ಹಲವಾರು ವರ್ಷಗಳಿಂದ ದ್ವಿಪಕ್ಷೀಯ ಸರಣಿಗಳು ನಡೆದಿಲ್ಲ. ಕೇವಲ ವಿಶ್ವಕಪ್ ನಲ್ಲಿ ಮಾತ್ರ ಸೆಣಸಾಟ ನಡೆಯುತ್ತಿರುವುದು ಅಭಿಮಾನಿಗಳಲ್ಲಿ ರೋಚಕತೆ ಬಿಸಿಯೇರುತ್ತಿದೆ.
ಧೋನಿ ಅಂದು ಇಂದು
2007 ರಲ್ಲಿ ನಡೆದ ಮೊದಲ ಟಿ- 20 ವಿಶ್ವಕಪ್ ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ತಂಡ ಪ್ರಶಸ್ತಿ ಗೆದ್ದಿತ್ತು. ಆ ಟೂರ್ನಿಯಿಂದ ಇದುವರೆಗೂ ನಡೆದ ಎಲ್ಲಾ ಪಂದ್ಯಗಳಲ್ಲಿ ಭಾರತ ತಂಡ ಪಾಕಿಸ್ತಾನದ ಎದುರು ಎಂದೂ ಸೋಲು ಕಂಡಿಲ್ಲ. ವಿಶೇಷವೆಂದರೆ ಈ ಎಲ್ಲಾ ಪಂದ್ಯಗಳಲ್ಲಿ ಮಹೇಂದ್ರ ಸಿಂಗ್ ಧೋನಿಯೇ ನಾಯಕರಾಗಿದ್ದರು.
ಇದೀಗ ಪರಿಸ್ಥಿತಿ ಬದಲಾಗಿದೆ, ಮಹೇಂದ್ರ ಸಿಂಗ್ ಧೋನಿ ಭಾರತ ತಂಡದ ಮೆಂಟರ್ ಆಗಿದ್ದಾರೆ. ವಿರಾಟ್ ಕೊಯ್ಲಿ ನಾಯಕರಾಗಿದ್ದಾರೆ. ಕಳೆದ ವರ್ಷ ಧೋನಿ ಎಲ್ಲಾ ಅಂತರಾಷ್ಟ್ರೀಯ ಪಂದ್ಯಗಳಿಗೆ ವಿದಾಯ ಹೇಳಿ, ಐಪಿಎಲ್ ಪಂದ್ಯದಲ್ಲಿ ಚೆನ್ನೈ ಪರವಾಗಿ ಆಟವಾಡುತ್ತಿದ್ದಾರೆ. ಮೆಂಟರ್ ಆಗಿರುವ ಧೋನಿ ಮತ್ತು ವಿರಾಟ್ ಕೊಯ್ಲಿ ಜೋಡಿ ಈ ಬಾರಿ ಭಾರತಕ್ಕೆ ವಿಶ್ವಕಪ್ ಪಡೆಯುವ ಸಾಧ್ಯತೆಗಳು ಹೆಚ್ಚಿವೆ ಎಂದು ಕ್ರಿಕೆಟ್ ಪಂಡಿತರು ಲೆಕ್ಕ ಹಾಕಿದ್ದಾರೆ.

More News

You cannot copy content of this page