ದುಬೈ : ದುರ್ಬಲ ಬೌಲಿಂಗ್ ದಾಳಿಯಿಂದ ಭಾರತ ತಂಡವು ಟಿ-2-ವಿಶ್ವಕಪ್ ಟೂರ್ನಿಯಲ್ಲಿ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಬದ್ದ ಎದುರಾಳಿಗಳಾದ ಪಾಕಿಸ್ತಾನ ತಂಡದೆದುರು ತೀವ್ರ ಮುಖಭಂಗವನ್ನು ಕಂಡಿದೆ.
ಇಡೀ ಇನ್ನಿಂಗ್ಸ್ ನಲ್ಲಿ ಒಂದೇ ಒಂದು ವಿಕೆಟ್ ಕಬಳಿಸಲು ಸಾಧ್ಯವಾಗದ ಬೌಲಿಂಗ್ ವೈಫಲ್ಯದಿಂದ ಸೋಲನ್ನು ಭಾರತ ತಂಡ ಅನುಭವಿಸಿದೆ. ಭಾರತ ತಂಡದ ಆರಂಭಿಕ ಬ್ಯಾಟರ್ ಗಳಾದ ರೋಹಿತ್ ಶರ್ಮಾ ಮತ್ತು ಕೆ ಎಲ್ ರಾಹುಲ್ ಅವರ ಕಳಪೆ ಬ್ಯಾಟಿಂಗ್ ಪ್ರದರ್ಶನಗೊಂಡಿತು.
ಶಹೀನ್ ಶಾ ಆಪ್ರಿದಿ ಅವರ ಅಮೋಘ ಬೌಲಿಂಗ್ ದಾಳಿಯಿಂದ ಭಾರತ ತಂಡ ಆರಂಭದಲ್ಲಿಯೇ ಆಘಾತ ನುಭವಿಸಿತು. ಇದರಿಂದ ಭಾರತ ತಂಡವು 20 ಓವರ್ ಗಳಲ್ಲಿ ಕೇವಲ 151 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಪಾಕ್ ನ ಆರಂಭಿಕ ಜೋಡಿಗಳಾದ ಮೊಹಮ್ಮದ್ ರಿಜ್ವಾನ್ ಮತ್ತು ಬಾಬರ್ ಅದಂ ಅತ್ಯದ್ಬುತ ಬ್ಯಾಟಿಂಗ್ ಪ್ರದರ್ಶಿಸಿ, ಯಾವುದೇ ವಿಕೆಟ್ ನಷ್ಠವಿಲ್ಲದೆ ಗುರಿಯನ್ನು ತಲುಪುವಲ್ಲಿ ಯಶಸ್ವಿಯಾಯಿತು.

ವಿರಾಟ್ ಕೊಯ್ಲಿ ಬಳಗವು ಹತ್ತು ವಿಕೆಟ್ ಗಳಿಂದ ಹೀನಾಯ ಸೋಲನ್ನು ಕಂಡಿತು. ಇದುವರೆಗೂ ಭಾರತ ತಂಡ ವಿಶ್ವಕಪ್ ನಲ್ಲಿ ಸೋಲನ್ನು ಕಂಡಿರಲಿಲ್ಲ. ಈ ಸೋಲಿನಿಂದ ಹೊಸ ಇತಿಹಾಸವನ್ನು ಬರೆಯಿತು. ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಪಾಕಿಸ್ತಾನ ತಂಡ ಉತ್ತರ ಆರಂಭ ಪಡೆಯಿತು.
ಶಾಹಿನ್ ಆಪ್ರಿದಿ ಅವರ ಮೊದಲ ಓವರ್ ನಲ್ಲಿಯೇ ರೋಹಿತ್ ಶರ್ಮಾ ಅವರು ಎಲ್ ಬಿ ಡಬ್ಲ್ಯು ಬಲೆಗೆ ಬಿದ್ದರು. ಇದರಿಂದ ಸೊನ್ನೆ ಸುತ್ತಿ ರೋಹಿತ್ ಪೆವಿಲಿಯನ್ ಕಡೆಗೆ ತೆರಳಿದರು. ಮತ್ತೆ ಮೂರನೇ ಓವರ್ ಗೆ ಕೆ ಎಲ್ ರಾಹುಲ್ ಮೂರು ರನ್ ಗಳಿಸಿ ಆಫ್ರಿದಿಗೆ ಬಲಿಯಾದರು. ನಂತರ ನಾಯಕ ವಿರಾಟ್ ಕೊಯ್ಲಿ ಮತ್ತು ರಿಷಭ್ ಪಂತ್ ತಾಳ್ಮೆಯ ಆಟವಾಡಿ ಅಲ್ಪ ಪ್ರಮಾಣದ ಮುನ್ನಡೆಯನ್ನು ಗಳಿಸಿಕೊಟ್ಟರು. ಭಾರತ ಏಳು ವಿಕೆಟ್ ನಷ್ಠಕ್ಕೆ 151 ರನ್ ಗಳಿಸಲು ಸಾಧ್ಯವಾಯಿತು.

ವಿರಾಟ್ 57, ಸೂರ್ಯಕುಮಾರ್ ಯಾದವ್ 11, ರಿಷಭ್ ಪಂತ್ 39, ಜಡೇಜ 13, ಹಾರ್ದಿಕ್ 11, ಭುವನೇಶ್ವರ್ ಕುಮಾರ್ 5 ರನ್ ಗಳಿಸಿದರು.
ಆರಂಭದಲ್ಲಿಯೇ ಮೂರು ವಿಕೆಟ್ ಕಳೆದುಕೊಂಡಿದ್ದು ತಂಡದ ಹಿನ್ನೆಡೆಗೆ ಕಾರಣವಾಯಿತು, ಇದರಿಂದ ನಮ್ಮ ಯೋಜನೆಗಳನ್ನು ಜಾರಿಗೊಳಿಸಲು ಸಾಧ್ಯವಾಗಿಲ್ಲ, ಎದುರಾಳಿ ತಂಡವು ನಮಗಿಂತ ತುಂಬಾ ಚೆನ್ನಾಗಿ ಆಡಿತ್ತು, ಇದು ಮೊದಲ ಪಂದ್ಯ, ಇನ್ನು ನಮಗೆ ಸಾಕಷ್ಟು ಅವಕಾಶಗಳಿವೆ, ಸುಮಾರು 20 ರನ್ ಕಡಿಮೆ ಬಿದ್ದಿತ್ತು ಎಂದು ಪಂದ್ಯದ ನಂತರ ವಿರಾಟ್ ಕೊಯ್ಲಿ ತಿಳಿಸಿದರು.