ಕೊಡಗು ನವೋದಯದ ಶಾಲೆಯ 21 ವಿದ್ಯಾರ್ಥಿ ಗಳಿಗೆ ಕೋವಿಡ್ ಪಾಸಿಟಿವ್ : ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳ ಟೆಸ್ಟಿಂಗ್ ಬಾಕಿ

ಮಡಿಕೇರಿ : ರಾಜ್ಯ ಸೇರಿದಂತೆ ದೇಶದಲ್ಲಿ ಕೊರೊನಾ ಸೋಂಕಿನ ಪ್ರಮಾಣದಲ್ಲಿ ಗಣನೀಯ ಇಳಿಕೆ ಕಾಣುತ್ತಿದೆ.ಆದರೆ ಕೊಡಗಿನ ವಸತಿ ಶಾಲೆಯಲ್ಲಿ ಕೊರೊನಾ ಸ್ಫೋಟಗೊಂಡಿದೆ.

ಮಡಿಕೇರಿಯ ಗೋಣಿಬೀಡಿನಲ್ಲಿರುವ ನವೋದಯ ವಸತಿ ಶಾಲೆಯಲ್ಲಿನ 21 ವಿದ್ಯಾರ್ಥಿಗಳಲ್ಲಿ ಕೋವಿಡ್ ಪಾಸಿಟಿವ್ ಪತ್ತೆಯಾ ಗಿದೆ.ಕೆಲ ದಿನಗಳಿಂದ ಹಲವಾರು ವಿದ್ಯಾರ್ಥಿಗಳಲ್ಲಿ ಶೀತ,ಜ್ವರ,ಕೆಮ್ಮು ಕಾಣಿಸಿಕೊಂಡ ಹಿನ್ನಲೆಯಲ್ಲಿ  ಆರ್ ಟಿಪಿಸಿಆರ್ ಪರೀಕ್ಷೆಗೆ ಪ್ರಾಂಶುಪಾಲರು ಸೂಚಿಸಿದ್ದರು.

ಅದರದಂತೆ 131 ವಿದ್ಯಾರ್ಥಿಗಳಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು,ಇದರಲ್ಲಿ 21 ವಿದ್ಯಾರ್ಥಿಗಳಿಗೆ ಕೊರೊನಾ ಪಾಸಿಟಿವ್ ಸೋಂಕು ಕಂಡುಬಂದಿರುವುದು ದೃಢಪಟ್ಟಿದೆ. ಇನ್ನೂ 150 ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸುವುದು ಬಾಕಿ ಇದೆ.ನಾಳೆ ಶಾಲಾ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲಾಗುವುದು.ಕೋವಿಡ್ ಹಿನ್ನೆಲೆಯಲ್ಲಿ ನಾಳೆಯಿಂದ ಒಂದು ವಾರ ಶಾಲೆ ಬಂದ್ ಮಾಡಲಾಗಿದೆ.ಪಾಸಿಟಿವ್ ಬಂದಿರುವ ವಿದ್ಯಾರ್ಥಿಗಳಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.ಸೋಂಕಿತ ವಿದ್ಯಾ ರ್ಥಿಗಳ ಸಂಪರ್ಕಕ್ಕೆ ಬಂದ ವಿದ್ಯಾರ್ಥಿಗಳು,ಶಿಕ್ಷಕರು,ಸಿಬ್ಬಂದಿಗಳನ್ನು ಶಾಲೆಯಲ್ಲಿಯೇ ಕ್ವಾರಂಟೈನ್ ಮಾಡಲಾಗಿದೆ.

ಘಟನೆ ಹಿನ್ನಲೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಹಾಗೂ ಜಿಲ್ಲಾ ವರಷ್ಠಾಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಶೀಘ್ರದಲ್ಲಿ ಉಳಿದ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳಿಗೆ ಪರೀಕ್ಷೆ ನಡೆಸಿ ವರದಿ ಪಡೆದು ಮುಂದಿನ ಕ್ರಮಕ್ಕೆ ಸಿದ್ದತೆ ನಡೆಸಿ ದ್ದಾರೆ.ಕೇರಳಕ್ಕೆ ಹೊಂದಿಕೊಂಡಂತಿರುವ ಮಡಿಕೇರಿ ಹಾಗು ಹೊರ ರಾಜ್ಯ ಮತ್ತು ಹೊರ ದೇಶಗಳಿಂದ ಕೊಡಗು,ಮಡಿಕೇರಿಗೆ ಪ್ರವಾಸಿಗರು ಬಂದು ಹೋಗುವ ಸಾಧ್ಯತೆ ಹೆಚ್ಚಿದೆ.

ಈ ನಡುವೆ ಶಾಲೆಗೆ ಕೊರೋನಾ ಸೋಂಕು ಹರಡಿದ್ದು ಹೇಗೆ ಎಂಬುದನ್ನು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಹೊರಗಿನವರಿಂದಲೇ ಸೋಂಕು ಪ್ರಸರಣವಾಗಿರುವ ಶಂಕೆಯನ್ನು ಶಾಲಾ ಸಿಬ್ಬಂದಿ ಮತ್ತು ಪೋಷಕರು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಕೊರೋನಾ ಸೋಂಕಿನ ಪ್ರಮಾಣ ಇಳಿಮುಖವಾಗಿದೆ ಎಂಬ ಕಾರಣಕ್ಕಾಗಿ ರಾಜ್ಯ ಸರ್ಕಾರ ಅಂತರ ರಾಜ್ಯ ಮತ್ತು ವಿದೇಶಿಗರಿಗೆ ಮುಕ್ತಅವಕಾಶ ಕಲ್ಪಿಸಿದೆ.ಅಲ್ಲದೆ ಶಾಲೆಗಳು,ಪ್ರಮುಖ ಸ್ಥಳಗಳಿಗೆ ಬಂದು ಹೋಗುವವರನ್ನು ಸರಿಯಾಗಿ ತಪಾಸಣೆ,ಪರೀಕ್ಷ ಕಡ್ಡಾಯಗೊಳಿಸದಿರುವುದು ಸೋಂಕು ವ್ಯಾಪಿಸಲು ಕಾರಣವಾಗಿದೆ.  ಒಂದೆಡೆ ರಾಜ್ಯಾದ್ಯಂತ ಪ್ರಾಥಮಿಕ ಶಾಲೆಗಳು ಎರಡು ದಿನಗಳ ಹಿಂದಷ್ಟೆ ಆರಂಭವಾಗಿದೆ.ಬರೋಬ್ಬರಿ 20 ತಿಂಗಳುಗಳ ಬಳಿಕ ಶುರುವಾದ ಶಾಲೆಯತ್ತ ಮಕ್ಕಳು ಮುಖ ಮಾಡಿದ್ದಾರೆ.ಈ ನಡುವೆ ಮಡಿ

More News