ಬೆಂಗಳೂರು : ಹಾನಗಲ್ ಮತ್ತು ಸಿಂಧಗಿ ಎರಡೂ ಕ್ಷೇತ್ರಗಳಲ್ಲಿ ಪ್ರಚಾರ ಮಾಡಿದ್ದೇವೆ.ಎಲ್ಲೆಡೆ ಬಿಜೆಪಿಗೆ ಅಭೂತಪೂರ್ವ ಜನ ಬೆಂಬಲ ವ್ಯಕ್ತವಾಗಿದೆ.ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುವ ವಿಶ್ವಾಸವಿದೆ.ಉಪ ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಕಾಂಗ್ರೆಸ್ ಆರೋಪ ಮಾಡುತ್ತಿದೆ ಎಂದು ಮುಖ್ಯಮಂತ್ರ ಬಸವರಾಜ್ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.
ನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಉಪ ಚುನಾವಣೆ ನಡೆಯುತ್ತಿರುವ ಎರಡು ಕಡೆಗಳಲ್ಲಿ ಬಿಜೆಪಿ ಗೆಲ್ಲುವ ಭರವಸೆ ಇದೆ.ಕಾಂಗ್ರೆಸ್ ನಾಯಕರಿಗೆ ಸೋಲುವ ಭೀತಿ ಇದೆ.ಅದಕ್ಕಾಗಿಯೇ ಈಗಿನಿಂದಲೇ ವೃಥಾ ಆರೋಪ ಮಾಡುತ್ತಿದ್ದಾರೆ.ಹಣ ಹಂಚಿಕೆ ಮಾಡುತ್ತಿದ್ದಾರೆ,ಬಿಟ್ ಕಾಯಿನ್ ದಂದೆ ಬಗ್ಗೆ ಯಾರನ್ನೋ ರಕ್ಷಿಸುತ್ತಿದ್ದಾರೆಂದು ಎಂದು ಬಡಬಡಾಯಿಸುತ್ತಿದ್ದಾರೆ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದರು.

ಡ್ರಗ್ಸ್ ಪ್ರಕರಣ ಸಂಬಂಧ ಸರ್ಕಾರ ಯುದ್ದವನ್ನೇ ಘೋಷಣೆ ಮಾಡಿದ್ದೇವೆ.ಕಳೆದ ಎರಡೂವರೆ ವರ್ಷದಿಂದ ಅತಿ ಹೆಚ್ಚು ಡ್ರಗ್ ವಶಪಡಿಸಿಕೊಳ್ಳಲಾಗಿದೆ.ಕಾನೂನಿ ಅನ್ವಯ ಆರೋಪಿಗಳು ತಪ್ಪಿಸಿಕೊಳ್ಳದಂತೆ ಕಠಿಣ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ. ಪ್ರಥಮ ಬಾರಿಗೆ ನಮ್ಮ ರಾಜ್ಯ ಡ್ರಗ್ ವಿರುದ್ಧ ದೊಡ್ಡ ಹೋರಾಟ ನಡೆಸಿದೆ.ಇದೇ ಪ್ರಕರಣದಲ್ಲಿ ಪ್ರಮುಖ ಆರೋಪಿ ಶ್ರೀಕೃಷ್ಣ ನನ್ನು ಬಂಧಿಸಲಾಗಿದೆ.ಈತ ಡ್ರಗ್ ಜತೆಗೆ ಹ್ಯಾಕಿಂಗ್ ಸಹ ಮಾಡುತ್ತಿರುವುದು ತನಿಖೆಯಲ್ಲಿ ಬಯಲಾಗಿದೆ ಎಂದು ಅವರು ತಿಳಿಸಿದರು.
2018 ರ ಫೆಬ್ರವರಿಯಲ್ಲಿ ಯುಬಿ ಸಿಟಿಯಲ್ಲಿ ನಡೆದ ಘಟನೆ ಅಡಿಯಲ್ಲಿ ಶ್ರೀಕಿ ಮೇಲೆ ಪ್ರಕರಣ ದಾಖಲಿಸಲಾಗುತ್ತದೆ.ಆತನ ಜತೆ ಇದ್ದ ಐದಾರು ಜನರನ್ನು ಬಂಧಿಸಲಾಗುತ್ತದೆ.ಆದರೆ ಪ್ರಮುಖ ಆರೋಪಿಯಾದ ಕೃಷ್ಣನನ್ನು ಬಂಧಿಸುವುದಿಲ್ಲ. ಬಳಿಕ ಆತನಿಗೆ ನ್ಯಾಯಾಲಯದಿಂದ ಜಾಮೀ ನು ಪಡೆದುಕೊಳ್ಳುತ್ತಾನೆ.ಜಾಮೀನು ಪಡೆದ ಬಳಿಕ ಆತನನ್ನು ವಿಚಾರಣೆ ನಡೆಸುವುದಿಲ್ಲ.ಹಿಂದೆ ಯೇ ಸರಿಯಾಗಿ ತನಿಖೆ ನಡೆಸಿದ್ದರೆ ಆತನ ಇತರೆ ದುಷ್ಕೃತ್ಯ ಗಳು,ಡ್ರಗ್,ಹ್ಯಾಕಿಂಗ್ ಪ್ರಕರಣಗಳು ಬಯಲಿಗೆ ಬರುತ್ತಿಲ್ಲ.ಆದರೆ ಕಾಂಗ್ರೆಸ್ ಸರ್ಕಾರ ಸರಿಯಾಗಿ ತನಿಖೆ ನಡೆಸಿಲ್ಲವೆಂದು ಸಿದ್ದರಾ ಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಮೇಲೆ ಮುಖ್ಯಮಂತ್ರಿ ಆರೋ ಪಿಸಿದ್ದಾರೆ.




