ಹುಬ್ಬಳ್ಳಿ : ಇಂದು ಬೆಳಗಿನ ಜಾವ ‘ ದಿ ಹಿಂದು’ ದಿನ ಪತ್ರಿಕೆ ಕಚೇರಿಯಲ್ಲಿ ಆಕಸ್ಮಿಕ ಬೆಂಕಿ ಸಂಭವಿಸಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷಣ ಆಗಮಿಸಿ ಬೆಂಕಿ ನಂದಿಸಿ ಹೆಚ್ಚಿನ ಅನಾಹುತವನ್ನು ತಪ್ಪಿಸಿದ್ದಾರೆ.
ಗೋಕುಲ ರಸ್ತೆ, ಗ್ರೀನ್ ಗಾರ್ಡನ್ ನಲ್ಲಿರುವ ಕಲ್ಬುರ್ಗಿ ಕಾಟ್ವೆ ಐಡೆಂಟಿಟಿ ಕಟ್ಟಡದ ಎರಡನೇ ಮಹಡಿಯಲ್ಲಿರುವ ಕಚೇರಿಯ ಒಳಗಡೆಯಿಂದ ಹೊಗೆ ಬರುತ್ತಿರುವುದನ್ನು ಗಮನಿಸಿದ ಕರ್ತವ್ಯದಲ್ಲಿದ್ದ ಸೆಕ್ಯುರಿಟಿ ಗಾರ್ಡ್, ತಕ್ಷಣ ತಮ್ಮ ಮೇಲ್ವಿಚಾರಕರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.
ಅವರು ಕರೆ ಮಾಡಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದು. ಹೆಚ್ಚಿನ ಅನಾಹುತವನ್ನು ತಪ್ಪಿಸಿದ್ದಾರೆ.

ಕಚೇರಿಯಲ್ಲಿದ್ದ ಕೆಲವು ಪೀಠೋಪಕರಣಗಳು, ಕಂಪ್ಯೂಟರ್, ಟಿವಿ, ಹವಾನಿಯಂತ್ರಣ ಘಟಕಗಳು, ಮತ್ತಿತರ ಉಪಕರಣಗಳು ಹಾಗು ಕೆಲವು ದಾಖಲೆಗಳು ಬೆಂಕಿಗೆ ಆಹುತಿಯಾಗಿವೆ.
ಆಕಸ್ಮಿಕ ಅಗ್ನಿ ಅಪಘಡಕ್ಕೆ ಶಾರ್ಟ್ ಸರ್ಕಿಟ್ ಕಾರಣವಿರಬಹುದು ಎಂದು ಶಂಕಿಸಲಾಗಿದೆ. ಹಾನಿಯನ್ನು ಅಂದಾಜು ಮಾಡಲಾಗುತ್ತಿದ್ದು, ಸ್ಥಳಕ್ಕೆ ಗೋಕುಲ ರಸ್ತೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದರು.




