TOWING VEHICLE PROBLEM: 15 ದಿನ ಖಾಸಗಿ ಟೋಯಿಂಗ್ ಬಂದ್, ಶೀಘ್ರದಲ್ಲೇ ನೂತನ ಕಾನೂನು ಜಾರಿ : ಆರಗ ಜ್ಞಾನೇಂದ್ರ

ಬೆಂಗಳೂರು : ಟೋಯಿಂಗ್ ಯಿಂದ ಸಾರ್ವಜನಿಕರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂಬ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಹದಿನೈದು ದಿನಗಳ ಕಾಲ ಖಾಸಗಿ ವಾಹನಗಳ ಟೋಯಿಂಗ್ ಅನ್ನು ಸ್ಥಗಿತಗೊಳಿಸಲಾಗಿದೆ.
ಬೆಂಗಳೂರಿನಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಮುಖ್ಯಮಂತ್ರಿ ಅವರೊಂದಿಗೆ ಸಭೆ ನಡೆಸಿದ ನಂತರ ಈ ವಿಷಯ ತಿಳಿಸಿದ ಗೃಹ ಸಚಿವ ಆಗರ ಜ್ಞಾನೇಂದ್ರ, ನೋಪಾರ್ಕಿಂಗ್ ಸ್ಥಳದಲ್ಲಿ ವಾಹನವನ್ನು ನಿಲ್ಲಿಸಿದ್ರೆ ಅವುಗಳ ವಿರುದ್ದ ಪೊಲೀಸರು ದೂರು ದಾಖಲಿಸಲು ತೀರ್ಮಾನಿಸಿದ್ದಾರೆ.
ಸುಮಾರು 25 ಮೀಟರ್ ಗೆ ಒಂದು ನೋ ಪಾರ್ಕಿಂಗ್ ಫಲಕವನ್ನು ಹಾಕಲಾಗಿದೆ, ಈ ಹಿಂದೆ ಇದು 50 ಮೀಟರ್ ಗೆ ನೋ ಪಾರ್ಕಿಂಗ್ ಬೋರ್ಡ್ ಹಾಕಲಾಗಿತ್ತು. ಇದಕ್ಕೆ ಆಕ್ಷೇಪ ವ್ಯಕ್ತವಾಗಿತ್ತು, 15 ದಿನಗಳ ಒಳಗೆ ಹೊಸ ನಿಯಮ ಜಾರಿ ಮಾಡಲಾಗುವುದು ಎಂದು ಆರಗ ಜ್ಞಾನೇಂದ್ರ ತಿಳಿಸಿದರು.

ಅಧಿಕಾರಿಗಳ ಸಂಬಂಧಿಕರಿಗೆ ಟೋಯಿಂಗ್ ವಾಹನದ ಟೆಂಡರ್ ಕೊಟ್ಟಿರುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಟೆಂಡರ್ ಪರಿಶೀಲನೆ ಮಾಡಲಾಗುವುದು ಎಂದು ಹೇಳಿದ ಅವರು, ದಂಡ ವಿಧಿಸುವ ವಿಚಾರದಲ್ಲೂ ಮರು ಪರಿಶೀಲನೆ ಮಾಡಲಾಗುವುದು ಎಂದರು.
ಸರ್ಕಾರಿ ಕಟ್ಟಡಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಇಲ್ಲದಿರುವುದನ್ನ ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ ಅವರು, ಎಲ್ಲಿ ಪಾರ್ಕಿಂಗೆಗೆ ಜಾಗ ಇದೆ ಅನ್ನೋದನ್ನ ಪೊಲೀಸರೇ ಗುರುತಿಸುತ್ತಾರೆ, ಸಾರ್ವಜನಿಕರ ಜತೆ ಸಭ್ಯತೆಯಿಂದ ವರ್ತಿಸಲು ಹೇಳಲಾಗುವುದು ಎಂದು ವಿವರಿಸಿದರು.

ಬಾಡಿ ವರ್ನ್ ಕ್ಯಾಮರಾವನ್ನು ಪೊಲೀಸರು ಧರಿಸುತ್ತಾರೆ. ಅದು ಎಲ್ಲವನ್ನೂ ರೇಕಾರ್ಡ್ ಮಾಡುತ್ತೆ, ಟೋಯಿಂಗ್ ಮಾಡಿದಾಗ ಇರೋ ಬರೋ ಕೇಸ್ ಒಂದೇ ಸಲ ದಂಡ ಕಟ್ಟುವ ವಿಚಾರ, ಇದರ ಬಗ್ಗೆ ಗಮನ ಪರಿಶೀಲನೆ ಮಾಡ್ತೀವಿ. ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.

More News