Search

BELLADOORU LAKE: ಬೆಳ್ಳಂದೂರಿನಲ್ಲಿ ಪಾದಚಾರಿಗಳ ಸುರಕ್ಷತೆ, ಹೊರವರ್ತುಲ ರಸ್ತೆಯಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿಗೆ ಅಭಿಯಾನ

ಬೆಂಗಳೂರು: ಪಾದಚಾರಿಗಳು ಹಾಗೂ ಸೈಕಲ್ ಸವಾರರ ಹಕ್ಕುಗಳನ್ನು ರಕ್ಷಿಸುವ ಬಗ್ಗೆ ಕರ್ನಾಟಕ ನಗರ ಭೂ ಸಾರಿಗೆ ಇಲಾಖೆಯು (ಡಲ್ಟ್) ಕ್ರಿಯಾತ್ಮಕ ಸಂಚಾರ ವಿಧೇಯಕದ ಕರಡು ಸಿದ್ಧಪಡಿಸಿದೆ. ಮೋಟಾರು ವಾಹನ ರಹಿತ ಪ್ರಯಾಣ ವ್ಯವಸ್ಥೆಯ ಅಭಿವೃದ್ಧಿ ಮೂಲಕ ಸುಸ್ಥಿರ ನಗರ ನಿರ್ಮಾಣವೇ ಅದರ ಗುರಿ. ಈ ವೇಳೆ ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳು ಹಾಗೂ ತಜ್ಞರ ಜತೆ ಡಲ್ಟ್ ಹಲವು ಸಭೆಗಳನ್ನು ನಡೆಸಿದೆ.
ಪಾದಚಾರಿಗಳಿಗೆ ಸುರಕ್ಷಿತ ಹಾದಿಯನ್ನು ನಿರ್ಮಿಸುವ ನಿಟ್ಟಿನಲ್ಲಿ ಇದೊಂದು ಅಭೂತಪೂರ್ವ ಪ್ರಯತ್ನವಾಗಿದೆ. ಅದರಲ್ಲೂ ಈ ವಿಚಾರದಲ್ಲಿ ಹೆಚ್ಚು ಅವಜ್ಞೆಗೆ ಒಳಗಾದ ಹೊರವರ್ತುಲ ರಸ್ತೆ ವ್ಯಾಪ್ತಿಯಲ್ಲಿ ಪಾದಚಾರಿಗಳ ಸುಗಮ ಸಂಚಾರದ ಬಗ್ಗೆ ಚರ್ಚೆ ನಡೆಸಲು ಅವಕಾಶ ಲಭಿಸಿದೆ. ಅಂತೆಯೇ ಹೊರವರ್ತುಲ ರಸ್ತೆಯಲ್ಲಿ ಬರುವ ಬೆಳ್ಳಂದೂರು ಪ್ರದೇಶದಲ್ಲಿನ ಪಾದಚಾರಿಗಳ ಸಂಚಾರ ಸಮಸ್ಯೆ ಬಗ್ಗೆ ಅಭಿಯಾನ ನಡೆಸುತ್ತಿದ್ದು, ಸಮಸ್ಯೆಗಳು ಹಾಗೂ ಅಗತ್ಯ ಸೌಲಭ್ಯಗಳ ಬಗ್ಗೆ ಇಲಾಖೆಯ ಗಮನ ಸೆಳೆಯುತ್ತಿದೆ.
ಬೆಂಗಳೂರಿನ ಹೊರವರ್ತುಲ ರಸ್ತೆಯಲ್ಲಿ ಸುದೀರ್ಘ ರಸ್ತೆಗಳು, ಸಿಗ್ನಲ್ ರಹಿತ ಸಂಚಾರ ವ್ಯವಸ್ಥೆಗಳು, ಫ್ಲೈ ಓವರ್ ಗಳು ಹಾಗೂ ಅಂಡರ್ ಪಾಸ್ ಗಳು ಸಾಕಷ್ಟಿವೆ. ಇದು ವಾಹನಗಳ ವೇಗದ ಸಂಚಾರಕ್ಕೆ ಇಂಬು ಕೊಡುತ್ತಿವೆ. ಆದರೆ. ಈ ರಸ್ತೆಗಳಲ್ಲಿ ಪಾದಚಾರಿಗಳ ಸಂಚಾರಕ್ಕೆ ಯಾವುದೇ ವ್ಯವಸ್ಥೆ ಇಲ್ಲದ ಕಾರಣ ಅವರು ವಾಹನಗಳ ನಡುವೆಯೇ ನಡೆದುಕೊಂಡು ಹೋಗುವ ಪರಿಸ್ಥಿತಿ ಇದೆ.
2021 ನವೆಂಬರ್ ನಲ್ಲಿ ಪ್ರಕಟ ಮಾಡಿದ ವರದಿ ಪ್ರಕಾರ ಹೆಚ್ಚು ಟ್ರಾಫಿಕ್ ಇರುವ ಪ್ರದೇಶದಲ್ಲಿ ನಡೆಯುವ ಅವಘಡದಲ್ಲಿ ಶೇಕಡ 50ರಷ್ಟು ಪಾದಚಾರಿಗಳು ಮರಣ ಹೊಂದುತ್ತಾರೆ. ಇಂಥ ದುರ್ಘಟನೆಗಳು ವಾಹನಗಳ ವೇಗದ ಸಂಚಾರ ಇರುವ ಹೊರವರ್ತುಲ ರಸ್ತೆಗಳಲ್ಲೇ ಹೆಚ್ಚು ಸಂಭವಿಸುತ್ತವೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಸಂಸ್ಥೆಯ ಅದೇ ಸಮಯದಲ್ಲಿ ನೀಡಿದ ವರದಿಯಲ್ಲಿ ಪಾದಚಾರಿಗಳ ಒಟ್ಟು ಮರಣ ಪ್ರಮಾಣದಲ್ಲಿ ಬೆಂಗಳೂರು ನಗರ ಎರಡನೇ ಸ್ಥಾನ ಹೊಂದಿದೆ. 2020ರಲ್ಲಿ 163 ಪಾದಚಾರಿಗಳು ಮೃತಪಟ್ಟಿರುವುದನ್ನು ದಾಖಲು ಮಾಡಿದೆ. ಅಂತೆಯೇ ಒಟ್ಟು ಅಪಘಾತ ಮರಣ ಪ್ರಮಾಣದಲ್ಲಿ ಶೇ. 40 ಪಾದಚಾರಿಗಳು ಮೃತಪಡುತ್ತಾರೆ.
ಅದೇ ರೀತಿ ಅತಿ ವೇಗದ ಚಾಲನೆಯ ಕಾರಣಕ್ಕೆ 691 ಮಂದಿ 2019ರಲ್ಲಿ ಮೃತಪಟ್ಟಿರುವುದಾಗಿಯೂ ರಾಷ್ಟ್ರೀಯ ಅಪರಾಧ ದಾಖಲೀಕರಣ ಬ್ಯೂರೋ ಹೇಳಿದೆ. ಅಂಗವೈಕಲ್ಯ ಹೊಂದಿರುವವರು ಹಾಗೂ ಹಿರಿಯ ನಾಗರಿಕರೇ ಈ ಮಾದರಿಯ ಅಪಘಾತಗಳ ಬಲಿಪಶುಗಳಾಗಿರುತ್ತಾರೆ.
ಬೆಂಗಳೂರಿನ ಬೃಹತ್ ಕಚೇರಿ ಸಮುದಾಯಗಳು ಹೊರವರ್ತುಲ ರಸ್ತೆಯಲ್ಲಿ ಬರುತ್ತವೆ. ಈ ಪ್ರದೇಶದಿಂದಲೇ ಒಟ್ಟು ಐಟಿ ಆದಾಯವು ಸರಕಾರಕ್ಕೆ ಸಂದಾಯವಾಗುತ್ತದೆ. ಸಂಪರ್ಕ ರಸ್ತೆಯೆಂದು ಪರಿಗಣಿಸಲಾಗುವ ಹೊರವರ್ತುಲ ರಸ್ತೆಗಳ ಇಕ್ಕೆಲಗಳಲ್ಲಿ ಜನವಸತಿ ಪ್ರದೇಶ, ಶೈಕ್ಷಣಿಕ ಸಂಸ್ಥೆಗಳು ಹೆಚ್ಚಿವೆ. ಹೊರ ವರ್ತುಲ ರಸ್ತೆಗಳ ಅಭಿವೃದ್ಧಿ, ಮೆಟ್ರೊ ಕಾಮಗಾರಿ, ಹೆಚ್ಚು ನಿಬಿಡವಾಗಿರುವ ಕಾರಿಡಾರ್ಗಳು ಹಾಗೂ ರಿಯಲ್ ಎಸ್ಟೇಟ್ ಅಭಿವೃದ್ಧಿಯಿಂದಾಗಿ ಸಾಕಷ್ಟು ಸಮಸ್ಯೆಗಳನ್ನು ಉಂಟು ಮಾಡುತ್ತಿವೆ.
ಮಹದೇವಪುರದ ಬೆಳ್ಳಂದೂರು ಪ್ರದೇಶವು ಹೊರವರ್ತುಲ ರಸ್ತೆಯಲ್ಲಿ ಪ್ರಮುಖ ಕೇಂದ್ರವಾಗಿದೆ. ವಸತಿ ಸಮುಚ್ಚಯಗಳು,ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು, ಕಾರ್ಪೊರೇಟ್ ಕಚೇರಿಗಳು ಇಲ್ಲಿವೆ. ಆದರೆ, ಮುರಿದ ಫುಟ್ಪಾತ್ಗಳು, ಹೊಸ ಫುಟ್ಪಾತ್ ನಿರ್ಮಾಣಕ್ಕೆ ಈ ಪ್ರದೇಶದಲ್ಲಿ ಅತಿ ಹೆಚ್ಚು ಬೇಡಿಕೆಯಿದೆ. ಅದರು ಉಳಿದ ಪ್ರದೇಶಗಳಿಗಿಂತ ಶೇ. 32ರಷ್ಟು ಹೆಚ್ಚು. ಆದರೆ, ಅಧಿಕಾರಿಗಳು ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ.

ಜನವರಿ 2022ರಕ್ಕೆ ಬೆಳ್ಳಂದೂರಿನ ನಿವಾಸಿಗಳು ಈ ಕುರಿತು ಹೇಳಿಕೆ ನೀಡಿದ್ದು, ಹಲವು ಬಾರಿ ಸಮಸ್ಯೆಗಳ ಬಗ್ಗೆ ದೂರು ನೀಡಿದ್ದರೂ ಬಿಬಿಎಂಪಿ ಅಧಿಕಾರಿಗಳು ಈ ಬಗ್ಗೆ ಗಮನವೇ ಹರಿಸುತ್ತಿಲ್ಲ. ತಕ್ಷಣವೇ ಬಿಬಿಎಂಪಿ ಅಧಿಕಾರಿಗಳು ಸುರಕ್ಷಿತ ಪಾದಚಾರಿ ಮಾರ್ಗಗಳ ನಿರ್ಮಾಣ ಹಾಗೂ ವಾಹನಗಳ ವೇಗಕ್ಕೆ ಕಡಿವಾಣ ಹಾಕುವ ವ್ಯವಸ್ಥೆ ಸಿದ್ಧಪಡಿಸಬೇಕಾಗಿದೆ.
ಬೇಡಿಕೆಗಳೇನು?
1 ಸಿಗ್ನಲ್ಗಳಲ್ಲಿ ಕೆಂಪು ಸಿಗ್ನಲ್ಗಳ ಸಮಯವನ್ನು ಕನಿಷ್ಠ ಪಕ್ಷ 20 ಸೆಕೆಂಡ್ಗಿಂತ ಹೆಚ್ಚಿಸುವುದು.
2 ಪಾದಚಾರಿ ಮೇಲು ಸೇತುಗೆಗಳ ನಿರ್ಮಾಣ.
3 ರಸ್ತೆ ದಾಟುವಾಗ ಪಾದಚಾರಿಗಳಿಗೆ ಅನುಕೂಲ ಆಗುವ ರೀತಿಯಲ್ಲಿ ಪೆಡಸ್ಟ್ರಿಯಲ್ ಐ ಲ್ಯಾಂಡ್ ನಿರ್ಮಾಣ.
4 ಸೌರ ಶಕ್ತಿಯಿಂದ ಉರಿಯುವಂಥ ಬೀದಿ ದೀಪಗಳ ಅಳವಡಿಕೆ.

5 ಮರು ಬಳಕೆಯ ಕಸದ ಡಬ್ಬಿಗಳನ್ನು ಇಡುವ ಮೂಲಕ ಅಡಚಣೆ ಉಂಟಾಗದಂತೆ ನೋಡಿಕೊಳ್ಳುವುದು.
6 ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ನಿರಂತರ ಗಮನ ಇಟ್ಟುಕೊಳ್ಳುವುದು ಹಾಗೂ ಪರಿಹರಿಸುವುದು
ಅಭಿಯಾನದ ಯೋಜನೆ
1 ಪಾದಚಾರಿಗಳ ಸಂಚಾರ ಸಮಸ್ಯೆ ಕುರಿತು ಝಟ್ಕಾ ಡಾಟ್ ಕಾಮ್ ಜನಜಾಗೃತಿ ಮೂಡಿಸುತ್ತಿದೆ. ಸಾರ್ವಜನಿಕರ ಸಹಿ ಸಂಗ್ರಹ ಮಾಡುವ ಮೂಲಕ ಬಿಬಿಎಂಪಿಯನ್ನು ತಲುಪಿ ಸಮಸ್ಥೆಗಳನ್ನು ವಿವರಿಸಲಾಗುತ್ತದೆ.
2 ಹ್ಯಾಶ್ ಟ್ಯಾಗ್ ಹಾಗೂ ವಿಡಿಯೊಗಳ ಮೂಲಕ ಹೊರವರ್ತುಲ ರಸ್ತೆಯಲ್ಲಿ ಸಮಸ್ಯೆಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ನಡೆಸುವುದು
3 ಸ್ಥಳದಲ್ಲೇ ಸಮಸ್ಯೆಗಳ ಕುರಿತು ಚರ್ಚಿಸಲು ಕಾರ್ಯಕ್ರಮ ಏರ್ಪಡಿಸುವುದು ಹಾಗೂ ಸಾರ್ವಜನಿಕರಿಗೆ ಸಮಸ್ಯೆಗಳ ಬಗ್ಗೆ ವಿವರಣೆ ನೀಡಲು ಅವಕಾಶ ಒದಗಿಸುವುದು ಹಾಗೂ ಜಾಗೃತಿ ಮೂಡಿಸುವುದು.

More News

You cannot copy content of this page