ಪ್ರಪಂಚದ ದೈತ್ಯ ಸಂಸ್ಥೆ ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಅವರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಸ್ವವಿವರ ಪತ್ರ ಅಥವಾ ರೆಸ್ಯೂಮ್ ಅನ್ನು ಅಪ್ ಲೋಡ್ ಮಾಡುವುದರ ಮೂಲಕ ಸುದ್ದಿಯಾಗಿದ್ದಾರೆ.
ತಮ್ಮ 48 ವರ್ಷ ಹಳೆಯದಾದ ರೆಸ್ಯೂಮ್ ಅನ್ನು ಲಿಂಕ್ಡ್ ಇನ್ ಪೇಜ್ ನಲ್ಲಿ ಅಪ್ ಲೋಡ್ ಮಾಡಿದ್ದಾರೆಯ ಇದನ್ನು ಅವರು ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಮೊದಲ ವರ್ಷದ ಅಭ್ಯಾಸದಲ್ಲಿ ತೊಡಗಿದ್ದಾಗ ರೆಸ್ಯೂಮ್ ಅನ್ನು ಬಿಲ್ ಗೇಟ್ಸ್ ಅವರು ಸಿದ್ದಪಡಿಸಿದ್ದರು.


ಡಾಟಾ ಬೇಸ್ ಮ್ಯಾನೇಜ್ ಮೆಂಟ್, ಕಂಪ್ಯೂಟರ್ ಗ್ರಾಫಿಕ್ಸ್ ಮತ್ತು ಆಪರೇಟಿಂಗ್ ಸಿಸ್ಟಮ್ಸ್ ಸ್ಟ್ರಕ್ಚರ್ ನಲ್ಲಿ ಪರಿಣತಿ ಹೊಂದಿರುವುದಾಗಿ ಅವರು ತಮ್ಮ ರೆಸ್ಯೂಮ್ ನಲ್ಲಿ ನಮೂದಿಸಿದ್ದರು. ಇದನ್ನು ಸಾಮಾಜಿಕ ಜಾಲತಾಣದಲ್ಲಿ ನೋಡಿದ ಕೆಲವರು ತಮಾಷೆಗಾಗಿ ನಿಮ್ಮನ್ನು ಕೆಲಸಕ್ಕೆ ಸೇರಿಸಿಕೊಳ್ಳಲಾಗುವುದು ಎಂದು ಆಫರ್ ನೀಡಿದ್ದಾರೆ.

ಬಿಲ್ ಗೇಟ್ಸ್ ಅವರ ರೆಸ್ಯೂಮ್ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.
#billgate, #howarduniversity, #resume, #daatabase management, #computer graphics, #operating system structure, #linkdin, #biodata




