ಬೆಂಗಳೂರು : ಶ್ರೀ ಕೃಷ್ಣ ಜನ್ಮಾಷ್ಠಮಿ ಎಂದಾಕ್ಷಣ ಪ್ರತಿಯೊಬ್ಬರಿಗೂ ನೆನಪಾಗೋದು, ಪುಟ್ಟ ಪುಟ್ಟ ಕಂದಮ್ಮಗಳಿಗೆ ಶ್ರೀ ಕೃಷ್ಣನ ವೇಷಧಾರಿಗಳನ್ನಾಗಿ ಮಾಡಿ, ಅವರ ಕೈಗೆ ಕೊಳಲು ನೀಡಿ, ಸಾಕ್ಷಾತ್ ಶ್ರೀಕೃಷ್ಣನನ್ನೇ ಕಂದಮ್ಮಗಳಲ್ಲಿ ನೋಡಿ ಆನಂದ ಪಡುವ ಭಕ್ತಿ ಭಾವದ ಕ್ಷಣ.
ಅನೇಕರು ನಾನಾ ರೀತಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಠಮಿಯನ್ನು ಆಚರಿಸಿಕೊಂಡಿದ್ದಾರೆ. ಅದೇ ರೀತಿಯಲ್ಲಿ ಸ್ಯಾಂಡಲ್ವುಡ್ ನ ನಟಿ ಅಮೂಲ್ಯ ವಿಶಿಷ್ಟ ರೀತಿಯಲ್ಲಿ ಕೃಷ್ಣ ಜನ್ಮಾಷ್ಠಮಿಯನ್ನು ಆಚರಿಸಿಕೊಂಡಿದ್ದಾರೆ. ತಮ್ಮ ಇಬ್ಬರು ಮಕ್ಕಳನ್ನು ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಅಭಿಮಾನಿಗಳಿಗೆ ಪರಿಚಯ ಮಾಡಿದ್ದಾರೆ.
ಬಾಲನಟಿಯಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟ ನಟಿ ಅಮೂಲ್ಯ ಅವರು ಇತ್ತೀಚಿಗಷ್ಟೇ ಸಿನಿಮಾ ಜರ್ನಿಯ 15 ವರ್ಷಗಳನ್ನು ಪೂರೈಸಿದ್ದರು. ಚೆಲುವಿನ ಚಿತ್ತಾರ ಸಿನಿಮಾ ಮೂಲಕ ಮನೆಮಾತಾದವರು.
ಪ್ರೌಢಶಾಲಾ ವಿದ್ಯಾರ್ಥಿನಿಯಾಗಿ ಪ್ರೇಮಕಹಾನಿಯಲ್ಲಿ ಕಾಣಿಸಿಕೊಂಡಿದ್ದ ನಟಿ ಅಮೂಲ್ಯ. ಆ ಚಿತ್ರ ಕನ್ನಡ ಚಿತ್ರರಂಗದ ಇತಿಹಾಸದಲ್ಲಿಯೇ ಅಜರಾಮರವಾಗಿ ಉಳಿಯಿತು. ಇನ್ನು ಆ ಚಿತ್ರದ ಮೂಲಕ ಯಶಸ್ಸನ್ನು ಕಂಡ ನಟಿ ಅಮೂಲ್ಯ ಅವರು ನಂತರ ಅನೇಕ ಸಿನಿಮಾಗಳಲ್ಲಿ ಅಭಿನಯಿಸಿ ಕನ್ನಡಿಗರ ಮನೆಮಾತಾದರು.
ನಂತರದಲ್ಲಿ ಅವರು ಕನ್ನಡದ ಅನೇಕ ಸಿನಿಮಾಗಳಲ್ಲಿ ಅಭಿನಯಿಸುವ ಮೂಲಕ ‘ಗೋಲ್ಡನ್ ಕ್ವೀನ್’ ಎಂದೇ ಜನಪ್ರಿಯತೆ ಪಡೆದರು.
ಹೌದು ನಟಿ ಅಮೂಲ್ಯ ಅವರು 2017ರಲ್ಲಿ ಜಗದೀಶ್ ಎಂಬುವವರನ್ನು ಮದುವೆಯಾದರು. ಮದುವೆಯಾದ ನಂತರ ಸಂಪೂರ್ಣವಾಗಿ ಸಿನಿಮಾರಂಗದಿಂದ ದೂರ ಉಳಿದರು. ‘ಮಾಸ್ತಿಗುಡಿ’ ಹಾಗೂ ‘ಮುಗುಳುನಗೆ’ ಸಿನಿಮಾಗಳ ನಂತರ ನಟಿ ಯಾವ ಸಿನಿಮಾದಲ್ಲೂ ಕೂಡ ಕಾಣಿಸಿಕೊಂಡಿಲ್ಲ.
ನಟಿ ಅಮೂಲ್ಯ ಅವರಿಗೆ ಮಾರ್ಚ್ 1 ರಂದು ಅವಳಿ ಗಂಡು ಮಕ್ಕಳು ಜನಿಸಿದವು. ಇದಾದ ನಂತರ ಅವರು ತಮ್ಮ ಸಂಪೂರ್ಣ ಸಮಯವನ್ನು ಮಕ್ಕಳಿಗೆ ಮೀಸಲಿಟ್ಟರು.
ಸಾಮಾಜಿಕ ಜಾಲತಾಣದಲ್ಲಿ ಲೈವ್ ಬಂದಿದ್ದ ಅಮೂಲ್ಯ ಮಹತ್ವದ ಹೇಳಿಕೆಯೊಂದನ್ನು ನೀಡಿದ್ದು ಮಕ್ಕಳ ಆರೈಕೆಯ ಜೊತೆಗೆ ಇನ್ನು ಕೆಲವು ದಿನಗಳಿಂದ ಸಿನಿಮಾಗಳಲ್ಲಿ ಸಕ್ರಿಯನಾಗುತ್ತೇನೆ ಎಂದು ಹೇಳಿರುವ ಅಮೂಲ್ಯ ಬಣ್ಣದ ಲೋಕಕ್ಕೆ ಹಿಂತಿರುಗುತ್ತೇನೆ ಎಂಬ ಹೇಳಿಕೆಯನ್ನು ನೀಡಿದ್ದಾರೆ.
ತಮ್ಮ ಇಬ್ಬರು ಮಕ್ಕಳ ಫೋಟೋವನ್ನು ಅಪ್ ಲೋಡ್ ಮಾಡಿರುವ ನಟಿ ಅಮೂಲ್ಯ, ನಮ್ಮ ಮುದ್ದಿನ ಕಂದಮ್ಮಗಳ ಮೇಲೆ ನಿಮ್ಮ ಶುಭಾಶೀರ್ವಾದವಿರಲಿ ಎಂದು ಬರೆದುಕೊಂಡದ್ದಾರೆ. ಹಾಗೆಯೇ ಶ್ರೀ ಕೃಷ್ಣ ಜನ್ಮಾಷ್ಠಮಿಯ ಶುಭ ಸಂದರ್ಭದಲ್ಲಿ ನಮ್ಮ ಮುದ್ದಿನ ಮಕ್ಕಳನ್ನು ಸಂತೋಷದಿಂದ ನಿಮಗೆ ಪರಿಚಯಿಸುತ್ತೇವೆ, ಸಹೃದಯಿಗಳಾದ ನಿಮ್ಮ ಶುಭಾಶೀರ್ವಾದವಿರಲಿ ಎಂದಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಲೈವ್ ಬಂದಿದ್ದ ಅಮೂಲ್ಯ ಮಹತ್ವದ ಹೇಳಿಕೆಯೊಂದನ್ನು ನೀಡಿದ್ದು ಮಕ್ಕಳ ಆರೈಕೆಯ ಜೊತೆಗೆ ಇನ್ನು ಕೆಲವು ದಿನಗಳಿಂದ ಸಿನಿಮಾಗಳಲ್ಲಿ ಸಕ್ರಿಯನಾಗುತ್ತೇನೆ ಎಂದು ಹೇಳಿರುವ ಅಮೂಲ್ಯ ಬಣ್ಣದ ಲೋಕಕ್ಕೆ ಹಿಂತಿರುಗುತ್ತೇನೆ ಎಂಬ ಹೇಳಿಕೆಯನ್ನು ನೀಡಿದ್ದಾರೆ.




