ಚಿತ್ರದುರ್ಗ : ಹಾಸ್ಟೆಲ್ ವಿದ್ಯಾರ್ಥಿನಿಯರಿಗಂ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಚಿತ್ರದುರ್ಗದ ಮುರುಣಾ ಮಠದ ಶಿವಮೂರ್ತಿ ಮುರುಘಾ ಶರಣರು ಪ್ರಯಾಣಿಸುತ್ತಿದ್ದ ಕಾರನ್ನು ಪೊಲೀಸರು ತಡೆದಿದ್ದಾರೆ.
ಹಾವೇರಿ ಜಿಲ್ಲೆಯ ಬಂಕಾಪುರ ಸಮೀಪ ತೆರಳುತ್ತಿದ್ದ ಶರಣರ ಕಾರನ್ನು ತಡೆದ ಪೊಲೀಸರು ಅವರನ್ನು ಚಿತ್ರದುರ್ಗಕ್ಕೆ ಮರಳುವಂತೆ ಸೂಚನೆ ನೀಡಿದ್ದಾರೆ.
ನಿನ್ನೆಯಿಂದ ಶರಣರು ಮುರುಘಾ ಮಠವನ್ನು ತೊರೆದು ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ ಎಂಬ ಮಾಹಿತಿ ಬಯಲಾಗುತ್ತಿದ್ದಂತೆಯೇ ಕಾರ್ಯವ್ರವೃತ್ತರಾದ ಪೊಲೀಸರು ತೀವ್ರ ಹುಡುಕಾಟ ಆರಂಭಿಸಿದ್ದರು. ಹಾವೇರಿ ಬಳಿಯ ಬಂಕಾಪುರದ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಮುರುಘಾ ಶರಣರ ಕಾರನ್ನು ಪೊಲೀಸರು ಪತ್ತೆ ಮಾಡಿದ್ದು, ಅವರೊಂದಿಗೆ ಚರ್ಚಿಸಿದ ಹಾವೇರಿ ಪೊಲೀಸರು ಅವರನ್ನು ಚಿತ್ರದುರ್ಗಕ್ಕೆ ಮರಳುವಂತೆ ಮನವಿ ಮಾಡಿದ್ದಾರೆ.
ಪೊಲೀಸರ ಮನವಿಗೆ ಸ್ಪಂದಿಸಿದ ಮುರುಘಾ ಶರಣರನ್ನು ಬಿಗಿ ಪೊಲೀಸ್ ಭದ್ರತೆಯಲ್ಲಿ ಚಿತ್ರದುರ್ಗಕ್ಕೆ ಕರೆ ತರಲಾಗುತ್ತಿದೆ. ಶರಣರ ವಿರುದ್ಧ ಪೋಸ್ಕೋ ಕಾಯಿದೆಯಡಿ ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ಶರಣರು ಹೋರಗೆ ಹೋಗಿದ್ದು ಯಾತಕ್ಕಾಗಿ ಎಂಬ ಪ್ರಶ್ನೆ ಇದೀಗ ಭಕ್ತರನ್ನು ಕಾಡುತ್ತಿದೆ.

ಪೊಲೀಸರ ಬಂಧನದ ಭೀತಿಯಿಂದ ತಪ್ಪಿಸಿಕೊಳ್ಳಲು ತೆರಳುತ್ತಿದ್ದಾರಾ ಅಥವಾ ಪೊಲೀಸರು ಅವರನ್ನು ಇದೀಗ ವಶಕ್ಕೆ ಪಡೆದಿದ್ದಾರಾ ಅಥವಾ ಮಠದವರು ಹೇಳುವಂತೆ ಅವರು ವಕೀಲೆಯೊಬ್ಬರನ್ನು ಭೇಟಿ ಮಾಡಲು ತೆರಳುತ್ತಿದ್ದರು ಎಂಬ ಮಾತುಗಳಲ್ಲಿ ಯಾವುದು ಸತ್ಯ ಎನ್ನುವುದನ್ನು ಪೊಲೀಸರೇ ಉತ್ತರಿಸಬೇಕು.
#muruga matt #sri shivamurthy muruga sharanaru #haveri #bankapura #arrest #teaken custody #police security




