ಬೆಂಗಳೂರು : ಕಾಂಗ್ರೆಸ್ ಪಕ್ಷ ಟಿಕೇಟ್ ಕೊಡದಿದ್ದರೂ ನಾನು ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುವುದಾಗಿ ಹೇಳಿಕೆ ನೀಡಿದ್ದ ಕೆಜಿಎಫ್ ಬಾಬು ಶಿಸ್ತು ಸಮಿತಿ ಮುಂದೆ ಕ್ಷಮಾಪಣೆ ಕೇಳಿದ್ದಾರೆ.
ಕೆಪಿಸಿಸಿ ಶಿಸ್ತು ಸಮಿತಿಗೆ ಸುಧೀರ್ಘ ಪತ್ರ ಬರೆದಿರುವ ಅವರು, ಮಾಧ್ಯಮಗಳ ಮುಂದೆ ಹೇಳಿಕೆ ನೀಡಿರುವುದು ತಪ್ಪಾಗಿದೆ ಎಂದು ಕ್ಷಮಾಪಣಾ ಪತ್ರದಲ್ಲಿ ಕಾಂಗ್ರೆಸ್ ಮುಖಂಡ ಕೆಜಿಎಫ್ ಬಾಬು ತಿಳಿಸಿದ್ದಾರೆ.

ಚಿಕ್ಕಪೇಟೆ ಟಿಕೆಟ್ ತಮಗೆ ಕೊಡುತ್ತಾರೆ, ಟಿಕೆಟ್ ಕೊಡದಿದ್ರೂ ನಾನು ಸ್ಪರ್ಧೆ ಮಾಡುತ್ತೇನೆ ಎಂದು ಹೇಳಿಕೆ ನೀಡಿದ್ದ ಬಾಬುಗೆ ರೆಹಮಾನ್ ಖಾನ್ ನೇತೃತ್ವದ ಕೆಪಿಸಿಸಿ ಶಿಸ್ತು ಸಮಿತಿಯಿಂದ ನೊಟೀಸ್ ನೀಡಲಾಗಿತ್ತು.



#kgf babu #kpcc #deciplanary committee #chickpet assembly constituency




