CONGRESS CHODO BJP JODO : ಕಾಂಗ್ರೆಸ್ ಚೋಡೋ ಬಿಜೆಪಿ ಜೋಡೋ ಘೋಷಣೆಯೊಂದಿಗೆ ಬಿಜೆಪಿ ತೆಕ್ಕೆಗೆ ಸೇರಿದ ಗೋವಾದ ಕಾಂಗ್ರೆಸ್ ಶಾಸಕರು

ಪಣಜಿ : ಗೋವಾದ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಸಮ್ಮುಖದಲ್ಲಿ ಕಾಂಗ್ರೆಸ್ ನ ಎಂಟು ಶಾಸಕರು ಇಂದು ಬಿಜೆಪಿ ಸೇರಿದ್ದಾರೆ. ಮುಖ್ಯಮಂತ್ರಿ ಅವರು ಶಾಸಕರುಗಳಿಗೆ ಬಿಜೆಪಿ ಬಾವುಟ ನೀಡಿ ಅವರನ್ನು ಸ್ವಾಗತಿಸಿದರು.
ಎಂಟು ಶಾಸಕರು ಬಿಜೆಪಿಗೆ ಸೇರಿದ್ದರಿಂದ ಇದೀಗ ಕೇವಲ ಮೂವರು ಶಾಸಕರು ಕಾಂಗ್ರೆಸ್ ಪಕ್ಷದಲ್ಲಿ ಉಳಿದಂತಾಗಿದೆ. ಶಾಸಕರಾದ ಮೈಕಲ್ ಲೋಬೋ, ಮಾಜಿ ಸಿಎಂ ದಿಗಂಬರ್ ಕಾಮತ್, ದಿಲಿಹಾ ಲೋಬೋ, ರಾಜೇಶ್ ಪಾಲ್ದೇಸಾಯಿ, ಕೇದಾಯ್ ನಾಯಕ್, ಸಂಕಲ್ಪ ಅಮೋಂಕರ್, ಅಲೆಕ್ಸೋ ಸಿಕ್ವೇರಾ ಹಾಗೂ ರುಡಾಲ್ಫ್ ಫರ್ನಾಡೀಸ್ ಬಿಜೆಪಿ ಸೇರಿದ ಶಾಸಕರಾಗಿದ್ದಾರೆ.
ನಂತರ ಸುದ್ದಿಗಾರೊಂದಿಗೆ ಮಾತನಾಡಿದ ಮೈಕಲ್ ಲೋಬೋ ಕಾಂಗ್ರೆಸ್ ಚೋಡೋ, ಬಿಜೆಪಿ ಜೋಡೋ ಎಂಬ ಘೋಷಣೆ ಮಾಡಿ ನಾವು ಬಿಜೆಪಿ ಸೇರಿದ್ದೇವೆ ಎಂದು ತಿಳಿಸಿದ ಅವರು ಗೋವಾದ ಸಮಗ್ರ ಅಭಿವೃದ್ಧಿಗೆ ನಾವು ಬಿಜೆಪಿ ಸೇರುತ್ತಿದ್ದೇವೆ ಎಂದು ತಿಳಿಸಿದ್ದಾರೆ.
2019ರಲ್ಲೂ ಕೂಡ ಹತ್ತು ಕಾಂಗ್ರೆಸ್ ಶಾಸಕರು ಬಿಜೆಪಿ ಸೇರಿದ್ದರು. 40 ಶಾಸಕರ ಬಲದ ಗೋವಾ ವಿಧಾನಸಭೆಯಲ್ಲಿ ಕಳೆದ ಚುನಾವಣೆಯಲ್ಲಿ ಬಿಜೆಪಿ-10, ಕಾಂಗ್ರೆಸ್ -11 ಸ್ಥಾನಗಳನ್ನು ಗೆದ್ದಿದ್ದರು.
ಕಾಂಗ್ರೆಸ್ ಪಕ್ಷವನ್ನೇ ಬಿಜೆಪಿ ಜತೆ ವಿಲೀನಗೊಳಿಸಲು ಮುಂದಾದ ಶಾಸಕರು
ಆಪರೇಷನ್ ಕಮಲಕ್ಕೆ ತುತ್ತಾದ ಗೋವಾದ ಎಂಟು ಶಾಸಕರು ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರಿದ್ದರಲ್ಲದೆ, ತಮ್ಮ ಪಕ್ಷವನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸಬೇಕೆಂಬ ನಿರ್ಣಯವನ್ನು ಕೈಗೊಂಡಿದ್ದಾರೆ.

ವಿರೋಧ ಪಕ್ಷದ ನಾಯಕ ಮೈಕಲ್ ಲೋಬೋ ಅವರು ನಿಲುವಳಿ ಸೂಚನೆ ಮಂಡಿಸಿದ್ದಾರೆ. ಇದಕ್ಕೆ ದಿಗಂಬರ್ ಕಾಮತ್ ಅಂಗೀಕರಿಸಿದ್ದಾರೆ. ಇನ್ನು ಸ್ವೀಕರ್ ಮುಂಬರುವ ದಿನಗಳಲ್ಲಿ ಯಾವ ನಿರ್ಣಯ ಕೈಗೊಳ್ಳಲಿದ್ದಾರೆ ಎಂಬುದನ್ನು ಕಾದುನೋಡಬೇಕಾಗಿದೆ.

#cm pramodh sawanth #former cm digamber kamat #Goa #operation lotus #bjp #congress mla #Micheal lobo

More News