MALE MAHADESHWARA TEMPLE: ಮಲೆ ಮಹದೇಶ್ವರ ಬೆಟ್ಟದಲ್ಲಿ ಇ-ಹುಂಡಿ ಆರಂಭ

ದೇವಸ್ಥಾನಕ್ಕೆ ಬಂದಿದ್ದೇನೆ. ಅಯ್ಯೋ ಪರ್ಸ್ ನಲ್ಲಿ ಹಣ ತರೋದು ಮರೆತೆ ಎಂದು ಕೊರಗುವ ಕಾಲ ದೂರವಾಗಿದೆ. ಡಿಜಿಟಲ್ ಕರೆನ್ಸಿಗೆ ಹೊಂದಿಕೊಂಡಿರೋ ಜನರು ಇನ್ಮುಂದೆ ಗೂಗಲ್ ಪೇ, ಫೋನ್ ಪೇ ಮೂಲಕವೂ ಮಾದಪ್ಪನಿಗೆ ಕಾಣಿಕೆ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ.
ಕರ್ನಾಟಕದಲ್ಲಿ ಅತೀ ಹೆಚ್ಚು ಆದಾಯ ತಂದುಕೊಡುವ ಸಾಲಿನಲ್ಲಿ ಎರಡನೇ ಸ್ಥಾನದಲ್ಲಿರುವ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಐತಿಹಾಸಿಕ ಪ್ರಸಿದ್ಧ ಮಲೆ ಮಹೇಶ್ವರ ದೇವಾಲಯಲ್ಲಿ ಇ ಹುಂಡಿ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ಈ ಮೂಲಕ ಡಿಜಿಟಲ್ ಕರೆನ್ಸಿಯನ್ನು ದೇವಸ್ಥಾನದಲ್ಲೂ ಚಾಲ್ತಿಗೆ ತಂದ ದೇವಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಇದೇ ವರ್ಷದ ಕಳೆದ ಮಾರ್ಚ್ ತಿಂಗಳಲ್ಲಿ.. ಕೇವಲ 28 ದಿನಗಳಲ್ಲಿ ಮಲೆ ಮಹದೇಶ್ವರ ದೇವಾಲಯದಲ್ಲಿ ಬಾರಿ ದಾಖಲೆಯ ಪ್ರಮಾಣದಲ್ಲಿ ಹಣ ಸಂಗ್ರಹಿಸಲಾಗಿತ್ತು.. ಹುಂಡಿಗಳಲ್ಲಿ ₹2,83,12,841 ಹಣ ಸಂಗ್ರಹವಾದರೆ, ಈ ಪೈಕಿ ₹2,66,37,095 ಮೌಲ್ಯದ ನೋಟುಗಳನ್ನು ಭಕ್ತರು ಕಾಣಿಕೆ ರೂಪದಲ್ಲಿ ಹಾಕಿದ್ದಾರೆ. ₹16,75,746 ಮೊತ್ತ ನಾಣ್ಯದ ರೂಪದಲ್ಲಿ ಬಂದಿದೆ. ಇದಲ್ಲದೇ, 3.800 ಕೆಜಿ ಬೆಳ್ಳಿ ಹಾಗೂ 70 ಗ್ರಾಂ ಚಿನ್ನವನ್ನು ಕಾಣಿಕೆ ರೂಪದಲ್ಲಿ ಭಕ್ತರು ಹುಂಡಿಗಳಿಗೆ ಹಾಕಿದ್ದರು.

#male mahadeshwara temple #malai mahadeshwara temple #mm hills temple #e hundi #highest earning temple #e hundi google pay ehundi phone pay

More News