ಲವ್ ಸೀನ್ ಗಳಲ್ಲೇ ಹೆಚ್ಚು ಕಾಣಿಸಿಕೊಂಡು, ಸದ್ದು ಮಾಡಿದ್ದ ಗೋಲ್ಡನ್ ಸ್ಟಾರ್ ಗಣೇಶ್ ವಿಭಿನ್ನವಾದ ಪಾತ್ರದಲ್ಲಿ ಕಾಣಿಸಿಕೊಳ್ಳುವ ತಯಾರಿಯಲ್ಲಿದ್ದು, ಕೀನ್ಯಾ ಕಡೆ ಮುಖ ಮಾಡಿದ್ದಾರೆ. ಈ ಬಗ್ಗೆ ಫೋಟೋ ಶೇರ್ ಮಾಡಿಕೊಂಡಿರುವ ಗಣೇಶ್, ದುಬೈ ಏರ್ ಪೋರ್ಟ್ ನಲ್ಲಿ ರಂಗಾಯಣ ರಘು ಜೊತೆ ಇರುವ ಪೋಟೋ ಶೇರ್ ಮಾಡಿ ಫ್ಲೈಯಿಂಗ್ ಟು ಕೀನ್ಯಾ ಎಂದು ಬರೆದುಕೊಂಡಿದ್ದಾರೆ.
ನಟ ಗಣೇಶ್, ಪ್ರೀತಂ ಗುಬ್ಬಿ ಕಾಂಬಿನೇಶನ್ ನಲ್ಲಿ ಮೂಡಿ ಬರ್ತಿರುವ “ಬಾನ ದಾರಿಯಲ್ಲಿ” ಸಿನಿಮಾ ಚಿತ್ರೀಕರಣ ಯಶಸ್ವಿಯಾಗಿ ಕಂಪ್ಲೀಟ್ ಮಾಡಿದ ಚಿತ್ರತಂಡ ಇನ್ನಷ್ಟು ಚಿತ್ರೀಕರಣಕ್ಕಾಗಿ ಕೀನ್ಯಾ ಫ್ಲೈಟ್ ಹತ್ತಿದೆ. “ಮಳೆಯಲಿ ಜೊತೆಯಲಿ’ ಹಾಗೂ ‘ದಿಲ್ ರಂಗೀಲಾ’ ಸಿನಿಮಾಗಳ ಮೂಲಕ ಹಿಟ್ ಜೋಡಿ ಎಂದು ಕರೆಸಿಕೊಂಡಿರುವ ನಟ ಗಣೇಶ್ ಹಾಗೂ ನಿರ್ದೇಶಕ ಪ್ರೀತಂ ಗುಬ್ಬಿ ಬಾನ ದಾರಿಯಲ್ಲಿ ಮೂಲಕ ಮತ್ತೊಂದು ಸೂಪರ್ ಹಿಟ್ ಸಿನಿಮಾ ನೀಡುವ ತಯಾರಿಯಲ್ಲಿದ್ದಾರೆ.

ಬಾನದಾರಿಯಲ್ಲಿ ಸಿನಿಮಾದಲ್ಲಿ ನಟ ಗಣೇಶ್ ವಿಭಿನ್ನವಾಗಿ ಕಾಣಲಿದ್ದಾರೆ ಎನ್ನಲಾಗಿದೆ. ಸ್ಪೋರ್ಟ್ಸ್ ಜಾನರ್ ಸಿನಿಮಾ ಇದಾಗಿದ್ದು ಗಣೇಶ್ ರೋಲ್ ಕುತೂಹಲ ಮೂಡಿಸಿದೆ.

ಇನ್ನು ಚಿತ್ರದಲ್ಲಿ ಗಣೇಶ್ ಜೊತೆ ರುಕ್ಮಿಣಿ ವಸಂತ್, ರೀಷ್ಮಾ ನಾಣಯ್ಯ ಎಂಬ ಇಬ್ಬರು ನಾಯಕಿಯರು ತೆರೆ ಹಂಚಿಕೊಳ್ಳಿದ್ದಾರೆ.

ಮಾಸ್ತಿ ಸಂಭಾಷಣೆ, ಅರ್ಜುನ್ ಜನ್ಯ ಸಂಗೀತ, ಅಭಿಲಾಷ್ ಕಲ್ಲತ್ತಿ ಕ್ಯಾಮೆರಾ ವರ್ಕ್ ಚಿತ್ರಕ್ಕಿದೆ. ಶ್ರೀವಾರಿ ಟಾಕೀಸ್ ಲಾಂಛನದಲ್ಲಿ ಚಿತ್ರ ನಿರ್ಮಾಣವಾಗುತ್ತಿದೆ.

#GOLDEN STAR GANESH #MUNGARU MALE GANESH #BANA DALIYALI #FILM SHOOTING #KEENYA #PREETHAM GUBBI #RANGAYANA RAGHU




