ಶಿವಮೊಗ್ಗ: ಶಿವಮೊಗ್ಗದ ಸಿಗಂದೂರಿನ ಕಳಸವಳ್ಳಿಯಲ್ಲಿರುವ ಸಿಗಂದೂರು ಚೌಡೇಶ್ವರಿ ದೇವಾಲಯ (Sigandooru chowdeshwari temple)ವಿಜ್ರಂಭಣೆಯಿಂದ ನವರಾತ್ರಿ ಹಬ್ಬ ಆಚರಣೆಗೆ ಸಿದ್ಧವಾಗಿದೆ. ಪ್ರತಿನಿತ್ಯ ಸಾವಿರಾರು ಭಕ್ತರು ಇಲ್ಲಿಗೆ ಆಗಮಿಸಿ ತಮ್ಮ ಇಷ್ಟಾರ್ಥ ಸಿದ್ದಿಗಾಗಿ ಪೂಜೆ ಸಲ್ಲಿಸುತ್ತಿದ್ದಾರೆ.
ಆದರೆ, ಇವೆಲ್ಲದರ ನಡುವೆ ಹಿಂದಿನ ತಲೆಮಾರುಗಳಿಂದ ಪಡೆದ ಪೂಜೆ ಹಕ್ಕಿಗೆ ಯಾವುದೇ ಅಡ್ಡಿಯಾಗಬಾರದು ಎಂದು ದೇವಾಲಯದ ಅರ್ಚಕ ಎಸ್.ಪಿ.ಶೇಷಗಿರಿ ಭಟ್, ಖಾಯಂ ಪ್ರತಿಬಂಧಕಾಜ್ಞೆ ಕೋರಿ ಸಾಗರದ ನ್ಯಾಯಾಲಯದ ಮೊರೆ ಹೋಗಿದ್ದಾರೆ.

ನಿತ್ಯಪೂಜೆ, ವಿಶೇಷ ಪೂಜೆ, ನವರಾತ್ರಿ ಪೂಜೆ, ಚಂಡಿಕಾಯಾಗ, ಪ್ರಸಾದ ವಿತರಣೆ ಸೇರಿದಂತೆ ಇತರೇ ಪೂಜಾ ಹಕ್ಕಿಗೆ ಯಾರೂ ತೊಂದರೆ ನೀಡಬಾರದು ಎಂದು ಅರ್ಜಿಯಲ್ಲಿ ಕೋರಿರುವ ಶೇಷಗರಿ ಭಟ್ ಅವರು, ಐದು ದಿನಗಳ ಹಿಂದೆಯೇ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ ಎಂದು ತಿಳಿದುಬಂದಿದೆ.
#Shivamogga #sigandhooru chowdeshwari temple #issue in the court




