DASARA INVITATION MISTAKES: ಮೃತ ವ್ಯಕ್ತಿಗೂ ಆಹ್ವಾನ, ಪ್ರತಾಪ್​ ಸಿಂಹ ಚಾಮರಾಜನಗರ ಸಂಸದ : ಆಹ್ವಾನ ಪತ್ರಿಕೆಯಲ್ಲಿ ಎಡವಟ್ಟು

ಮೈಸೂರು ; ಮೃತ ವ್ಯಕ್ತಿ ಹೆಸರು ಹಾಗೂ ಪ್ರತಾಪ್​ ಸಿಂಹ ಅವರನ್ನು ಚಾಮರಾಜನಗರ ಸಂಸದ ಎಂದು ಆಹ್ವಾನ ಪತ್ರಿಕೆಯಲ್ಲಿ ಮುದ್ರಿಸುವ ಮೂಲಕ ದಸರಾ ಕವಿಗೋಷ್ಠಿ ಆಯೋಜಕರು ಎಡವಟ್ಟು ಮಾಡಿದ್ದಾರೆ.
ದಸರಾ ಸಾಹಿತಿಗಳ ಆಹ್ವಾನ ಪತ್ರಿಕೆಯಲ್ಲಿ ನಿಧನರಾಗಿದ್ದ ಸಾಹಿತಿ ಹೆಸರು ಪ್ರಕಟ ಮಾಡಲಾಗಿದೆ. ಆಕಾಶವಾಣಿ ನಿಲಯ ನಿರ್ದೇಶಕರು ಹಾಗೂ ಸಾಹಿತಿಯಾಗಿದ್ದ ರವೀಂದ್ರ ಕುಮಾರ್ ಅವರು, 2019ರಲ್ಲೇ ಹೃದಯಾಘಾತದಿಂದ ನಿಧನರಾಗಿದ್ದಾರೆ. ಇವರ ಹೆಸರನ್ನು ಕವಿಗೋಷ್ಠಿ ಆಯೋಜಕರು ಮುದ್ರಿಸಿದ್ದಾರೆ. ಪ್ರಮಾದ ಅರಿವಾಗುತ್ತಿದ್ದಂತೆ ದಸರಾ ಸಮಿತಿ ಮರು ಪಟ್ಟಿ ಬಿಡುಗಡೆ ಮಾಡಿದೆ.

ಕವಿಗೋಷ್ಠಿ ಆಹ್ವಾನ ಪತ್ರಿಕೆಯಲ್ಲಿ ಎಡವಟ್ಟು ಆದರೆ ಮರು ಮುದ್ರಣ ಪಟ್ಟಿಯಲ್ಲಿಯೂ ಪ್ರತಾಪ್​ ಸಿಂಹ ಚಾಮರಾಜನಗರ ಸಂಸದ ಎಂದು ಮುದ್ರಣ ಮಾಡಲಾಗಿದೆ. ಸೋಮವಾರ ದಸರಾ ಸಾಹಿತಿಗಳ ಕವಿಗೋಷ್ಠಿ ನಡೆಯಲಿದ್ದು, ನಾಡಿನ ಹೆಸರಾಂತ ಕವಿಗಳು ಭಾಗಿಯಾಗಲಿದ್ದಾರೆ.

More News